ನಟಿ ಸಮಂತಾ (Samantha) ಅವರು ಮತ್ತೆ ಸೆಟ್ಗೆ ಮರಳಿದ್ದಾರೆ. ಅವರು ಅಪರೂಪದ ಕಾಯಿಲೆ Myositisನಿಂದ ಬಳಲುತ್ತಿದ್ದಾರೆ. ಇದಕ್ಕೆ ಒಳಗಾದ ನಂತರದಲ್ಲಿ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದರು. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಅವರು ಮುಂಬೈನಲ್ಲಿದ್ದಾರೆ. ಇಂಗ್ಲಿಷ್ನ ‘ಸಿಟಾಡೆಲ್’ ಭಾರತೀಯ ವರ್ಷನ್ನ ಶೂಟಿಂಗ್ನಲ್ಲಿ ಸಮಂತಾ ಬ್ಯುಸಿ ಇದ್ದಾರೆ. ಈ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಈ ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನ ಜನಪ್ರಿಯ ಸೀರಿಸ್ ‘ಸಿಟಾಡೆಲ್’ನ ಸ್ಫೂರ್ತಿಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಹಾಗೂ ಡಿಕೆ ಈ ಸೀರಿಸ್ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಈಗ ಆರಂಭ ಆಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ರಿಲೀಸ್ ಆಗಲಿದೆ. ಈ ಸರಣಿಯ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಸ್ವತಃ ಸಮಂತಾ ಅವರೇ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ಅವರ ನಟನೆಯ ‘ಯಶೋದ’ ಚಿತ್ರದಲ್ಲೂ ಆ್ಯಕ್ಷನ್ ಇತ್ತು. ‘ಸಿಟಾಡೆಲ್’ ರಿಮೇಕ್ನಲ್ಲಿ ಭರಪೂರ ಆ್ಯಕ್ಷನ್ ಇರಲಿದೆ. ಸಮಂತಾ ಶೇರ್ ಮಾಡಿಕೊಂಡಿರುವ ಫೋಟೋಗಳು ಇದಕ್ಕೆ ಸಾಕ್ಷ್ಯ ನೀಡುತ್ತವೆ. ಸಮಂತಾ ಹೆಬ್ಬೆರಳು, ಕೈ ಭಾಗಕ್ಕೆ ಗಾಯಗಳಾಗಿವೆ. ಶೂಟಿಂಗ್ ವೇಳೆ ಆದ ಗಾಯಗಳು ಇವು ಎನ್ನಲಾಗುತ್ತಿದೆ. ಈ ಫೋಟೋ ನೋಡಿ ಫ್ಯಾನ್ಸ್ಗೆ ಭಯ ಆಗಿದೆ.
ಸಮಂತಾ ಅವರಿಗೆ ಆ್ಯಕ್ಷನ್ ಎಂದರೆ ಇಷ್ಟ. ಇತ್ತೀಚೆಗೆ ಈ ರೀತಿಯ ಪಾತ್ರಗಳನ್ನು ಅವರು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. Myositis ಸಮಸ್ಯೆಯಿಂದ ಅವರಿಗೆ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಸಮಸ್ಯೆ ಕಡಿಮೆ ಆಗುತ್ತಿರುವುದರಿಂದ ಅವರು ಮತ್ತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗಳನ್ನೂ ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಇದನ್ನೂ ಓದಿ: Samantha: ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ರಿಸ್ಕ್ ತೆಗೆದುಕೊಳ್ತಾರಾ ಸಮಂತಾ ರುತ್ ಪ್ರಭು?
ಸಮಂತಾಗೆ Myositis ಹೆಸರಿನ ಕಾಯಿಲೆ ಕಾಡಿತ್ತು. ಸ್ನಾಯುಗಳಲ್ಲಿ ಅತೀವವಾಗಿ ನೋವು ಕಾಣುವ ಸಮಸ್ಯೆ ಇದಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಕಾರಣದಿಂದ ಹಲವು ತಿಂಗಳ ಕಾಲ ಅವರು ವಿಶ್ರಾಂತಿಯಲ್ಲಿದ್ದರು. ಇದರಿಂದ ಅವರ ಪ್ರಾಜೆಕ್ಟ್ಗಳ ಶೂಟಿಂಗ್ ವಿಳಂಬ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 28 February 23