‘ಪುಷ್ಪ’ ಸಿನಿಮಾದ ಐಟಂ ಸಾಂಗ್​ ಹಾಡಿದ್ದು ‘ಮಂಗ್ಲಿ’ ಸಹೋದರಿ; ಹಿಟ್​ ಆಯ್ತು ಹಾಡು

‘ಓ ಅಂತಾವ..’ ಹಾಡಿನಲ್ಲಿ ಸ್ಯಾಮ್ ಅವರ ಕಾಸ್ಟ್ಯೂಮ್, ಸ್ಟೈಲ್ ಮತ್ತು ಲುಕ್ ಎಲ್ಲವೂ ಹಾಡಿಗೆ ಪರ್ಫೆಕ್ಟ್ ಆಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಮತ್ತೊಮ್ಮೆ ಅಬ್ಬರಿಸಿದ್ದು, ಈ ಹಾಡು ಬ್ಲಾಕ್ ಬಸ್ಟರ್ ಹಿಟ್ ಆಗಿದೆ.

‘ಪುಷ್ಪ’ ಸಿನಿಮಾದ ಐಟಂ ಸಾಂಗ್​ ಹಾಡಿದ್ದು ‘ಮಂಗ್ಲಿ’ ಸಹೋದರಿ; ಹಿಟ್​ ಆಯ್ತು ಹಾಡು
ಇಂದ್ರಾವತಿ ಚೌಹಾಣ್- ಸಮಂತಾ
Edited By:

Updated on: Dec 11, 2021 | 4:45 PM

‘ಪುಷ್ಪ’ ಸಿನಿಮಾ ರಿಲೀಸ್​ ಆಗುವುದಕ್ಕೂ ಮೊದಲೇ ಸಮಂತಾಗೆ ಗೆಲುವು ಸಿಕ್ಕಿದೆ. ‘ಓ ಅಂತಾವ..’ ಸಾಂಗ್​ ರಿಲೀಸ್​ ಆದ ಒಂದು ದಿನದ ಒಳಗೆ ಬರೋಬ್ಬರಿ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಹಾಡಿನಲ್ಲಿ ಸಮಂತಾ ಸಖತ್​ ಹಾಟ್​ ಅವತಾರ ತಾಳಿದ್ದು, ಪಡ್ಡೆ ಹುಡುಗರ ಮನಸ್ಸು ಗೆದ್ದಿದ್ದಾರೆ. ಸದ್ಯ, ಲಿರಿಕಲ್​ ಗೀತೆ ಮಾತ್ರ ರಿಲೀಸ್​ ಆಗಿದ್ದು, ಶೀಘ್ರವೇ ವಿಡಿಯೋ ಹಾಡು ರಿಲೀಸ್​ ಆಗುವ ಸಾಧ್ಯತೆ ಇದೆ. ಈ ಸಾಂಗ್ ಕೇಳುಗರಿಗೆ ಸಖತ್​ ಕಿಕ್​ ಕೊಟ್ಟಿದೆ. ಈ ಹಾಡನ್ನು ಹಾಡಿದ್ದು ಮಂಗ್ಲಿ ಸಹೋದರಿ ಇಂದ್ರಾವತಿ ಚೌಹಾಣ್ ಅನ್ನೋದು ವಿಶೇಷ.

ಮಂಗ್ಲಿ ಟಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ‘ರಾಬರ್ಟ್​’ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ‘ಕಣ್ಣೇ ಅದಿರಿಂದಿ..’ ಹಾಡಿಗೆ ಧ್ವನಿ ನೀಡಿದ ಬಳಿಕ ಮಂಗ್ಲಿ ಅವರ ಜನಪ್ರಿಯತೆ ಕರುನಾಡಿನಲ್ಲಿ ಹೆಚ್ಚಿತು.  ಅವರು ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ಈಗ ಮಂಗ್ಲಿ ಸಹೋದರಿ ಕೂಡ ಸಂಗೀತ ಲೋಕದಲ್ಲಿ ಗುರುತಿಸಿಕೊಳ್ಳೋಕೆ ಆರಂಭಿಸಿದ್ದಾರೆ.

‘ಓ ಅಂತಾವ..’ ಹಾಡಿನಲ್ಲಿ ಸ್ಯಾಮ್ ಅವರ ಕಾಸ್ಟ್ಯೂಮ್, ಸ್ಟೈಲ್ ಮತ್ತು ಲುಕ್ ಎಲ್ಲವೂ ಹಾಡಿಗೆ ಪರ್ಫೆಕ್ಟ್ ಆಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಮತ್ತೊಮ್ಮೆ ಅಬ್ಬರಿಸಿದ್ದು, ಈ ಹಾಡು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಚಂದ್ರಬೋಸ್ ಬರೆದಿರುವ ಐಟಂ ಸಾಂಗ್ ಅನ್ನು ಇಂದ್ರಾವತಿ ಚೌಹಾಣ್ ಹಾಡಿದ್ದಾರೆ.

ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಂಭಾವನೆ ವಿಚಾರದ ಬಗ್ಗೆ ಚಿತ್ರತಂಡದಿಂದಾಗಲೀ ಸಮಂತಾ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಅವರು ಪಡೆಯುತ್ತಾರೆ ಎನ್ನಲಾದ ಸಂಭಾವನೆ ಮೊತ್ತ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಐಟಂ ಸಾಂಗ್​ನಲ್ಲಿ ನಟಿಸಲು ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಹರಡಿದೆ.

ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವ್ಯೂಸ್​​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​

ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವ್ಯೂಸ್​​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​

Published On - 3:47 pm, Sat, 11 December 21

TV9 Web

TV9 Kannada

Read More
Loading...
Unable to load recommendations.
Follow Us