ಕೇರಳದ ಆದಿರಪ್ಪಳ್ಳಿ ಜಲಪಾತದಲ್ಲಿ ಈಜುಡುಗೆಯಲ್ಲಿ ಪೋಸ್ ನೀಡಿದ ಹಾಟ್ ಬೆಡಗಿ ಸಮಂತಾ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 20, 2022 | 1:37 PM

ಸದ್ಯ ನಟಿ ಸಮಂತಾ ಶನಿವಾರ (ಫೆಬ್ರವರಿ 19) ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಗುಲಾಬಿ ಬಣ್ಣದ ಈಜುಡುಗೆಯಲ್ಲಿ ಬೆರಗುಗೊಳಿಸುವ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಆದಿರಪ್ಪಳ್ಳಿ ಜಲಪಾತದಲ್ಲಿ ಈಜುಡುಗೆಯಲ್ಲಿ ಪೋಸ್ ನೀಡಿದ ಹಾಟ್ ಬೆಡಗಿ ಸಮಂತಾ
ನಟಿ ಸಮಂತಾ ರುತ್ ಪ್ರಭು
Follow us on

ಟಾಲಿವುಡ್​ ಹಾಟ್​ ಬೆಡಗಿ ಸಮಂತಾ ರುತ್ ಪ್ರಭು (Samantha Ruth Prabhu) ಕಳೆದ ಕೆಲವು ತಿಂಗಳುಗಳಿಂದ ಚರ್ಚೆಯಲ್ಲಿದ್ದಾರೆ. ಮೊದಲನೆಯದಾಗಿ ನಟ ನಾಗ ಚೈತನ್ಯ ಅವರೊಂದಿಗಿನ ಬೇರ್ಪಡುವಿಕೆಯಿಂದಾಗಿ, ಮತ್ತೊಂದು ಅಲ್ಲು ಅರ್ಜುನ್‌ನ ತೆಲುಗು ಬ್ಲಾಕ್‌ಬಸ್ಟರ್ ಚಿತ್ರ ‘ಪುಷ್ಪ: ದಿ ರೈಸ್ – ಭಾಗ 1’ ರಲ್ಲಿಯ ಆಕೆಯ ‘ಊ ಅಂತವ’ ಐಟಂ ಸಾಂಗ್​ನಿಂದ ಚರ್ಚೆಯಲ್ಲಿದ್ದಾರೆ. ಕಳೆದ ವರ್ಷ ನಟ ನಾಗ ಚೈತನ್ಯರಿಂದ ಬೇರ್ಪಟ್ಟಾಗಿನಿಂದ, ಸಮಂತಾ ತನ್ನ ಮನಸ್ಸು ಮತ್ತು ಆತ್ಮ ಶಾಂತಿ ಪಡೆಯಲು ಭಾರತ ಮತ್ತು ವಿದೇಶಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರು ಅಕ್ಟೋಬರ್ 2021 ರಲ್ಲಿ ದುಬೈ ಮತ್ತು ರಿಷಿಕೇಶಕ್ಕೆ ಹೋಗಿದ್ದು, 2022 ರ ಹೊಸ ವರ್ಷವನ್ನು ಗೋವಾದಲ್ಲಿ ತಮ್ಮ ಸ್ನೇಹಿತೆಯರೊಂದಿಗೆ ಸ್ವಾಗತಿಸಿದ್ದಾರೆ. ಇತ್ತೀಚೆಗೆ ಸ್ಕೀಯಿಂಗ್ (skiing) ಕಲಿಯಲು ಸ್ವಿಟ್ಜರ್ಲೆಂಡ್‌ಗೆ ಕೂಡ ಹೋಗಿದ್ದರು.

ಸದ್ಯ ನಟಿ ಸಮಂತಾ ಶನಿವಾರ (ಫೆಬ್ರವರಿ 19) ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಗುಲಾಬಿ ಬಣ್ಣದ ಈಜುಡುಗೆಯಲ್ಲಿ ಬೆರಗುಗೊಳಿಸುವ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ ಏರಿಳಿತಳು ಸಹಜ ನೀವು ಅದನ್ನು ಆನಂದಿಸಿ ಅಥವಾ ಅದು ಹೇಗೆ ಬರುತ್ತಾ ಹಾಗೆ ತೆಗೆದುಕೊಳ್ಳಿ ಎನ್ನುವ ಜೀವನದ ಸಂದೇಶವನ್ನು ಸಾರುವ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತ್ತೆ 1 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್​ಗಳು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ಹಾರ್ಟ್​ಚಿತ್ರದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ನಟಿ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಕ್ಲಿಪ್ ಜೊತೆಗೆ, ಅವರು ಸದ್ಗುರುಗಳ ಉಲ್ಲೇಖವನ್ನು ಬರೆದಿದ್ದು, ಧ್ಯಾನವು ನಿಮ್ಮ ಅಸ್ತಿತ್ವದ ಸೌಂದರ್ಯವನ್ನು ಅರಿತುಕೊಳ್ಳುವ ಸಾಧನವಾಗಿದೆ ಎಂದು ಬರೆದುಕೊಂಡಿದ್ದಾರೆ. ಕೇರಳದ ರುದ್ರರಮಣೀಯ ಜಲಪಾತಗಳ ಚಿತ್ರಗಳು ಮತ್ತು ವೀಡಿಯೋಗಳು ನಿಮ್ಮನ್ನು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಚಾಲಕುಡಿ ನದಿಯ ಪ್ರಶಾಂತ ಸ್ಥಳಕ್ಕೆ ಹೋಗುವಂತೆ ಮಾಡುತ್ತದೆ. ಸಮಂತಾ 2022 ರಲ್ಲಿ ತಮಿಳು ರೊಮ್ಯಾಂಟಿಕ್ ಹಾಸ್ಯ ‘ಕಾತುವಾಕುಲ ರೆಂದು ಕಾದಲ್’ ಮತ್ತು ತೆಲುಗು ಪೌರಾಣಿಕ ನಾಟಕ ‘ಶಾಕುಂತಲಂ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ದೀಪಿಕಾ ನಟನೆಯ ‘ಗೆಹರಾಯಿಯಾ’ ಚಿತ್ರ ನೋಡಿ ಮುಲಾಜಿಲ್ಲದೇ ಜಾಡಿಸಿದ ಭಾಸ್ಕರ್​ ರಾವ್​

Published On - 12:13 pm, Sun, 20 February 22