ಸಮಂತಾ (Samantha) ನಟಿಸಿದ್ದ ಎರಡು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ಫ್ಲಾಪ್ ಆಗಿವೆ. ಹಾಗಿದ್ದರೂ ಸಹ ಸಮಂತಾಗೆ ಬೇಡಿಕೆ ಕಡಿಮೆಯಾಗಿಲ್ಲ. ಸಮಂತಾ ನಟಿಸಿದ್ದ ಯಶೋಧಾ (Yashodha) ಹಾಗೂ ಶಾಕುಂತಲಂ (Shakunthalam) ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧಾರುಣವಾಗಿ ನೆಲಕಚ್ಚಿದವು. ಅದಕ್ಕೆ ಮುಂಚೆ ನಯನತಾರಾ, ವಿಜಯ್ ಸೇತುಪತಿ ಜೊತೆಗೆ ನಟಿಸಿದ್ದ ಕಾತುವಾಕ್ಕು ರೆಂಡು ಕಾದಲ್ ಸಿನಿಮಾ ಸಹ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಹಾಗಿದ್ದರೂ ಸಮಂತಾಗೆ ಬೇಡಿಕೆ ಕಡಿಮೆಯಾಗಿಲ್ಲ, ಸಿನಿಮಾದಿಂದ ಸಿನಿಮಾಕ್ಕೆ ಅವರ ಸಂಭಾವನೆ ಹೆಚ್ಚುತ್ತಲೇ ಹೋಗುತ್ತಿದೆ. ಇದರ ನಡುವೆ ಸಮಂತಾ ಸಹ ಆಸ್ತಿಯ ಮೇಲೆ ಆಸ್ತಿ ಖರೀದಿಸುತ್ತಿದ್ದಾರೆ.
ವಿಚ್ಛೇದನಕ್ಕೂ ಮೊದಲು ಸಮಂತಾ ಹಾಗೂ ನಾಗ ಚೈತನ್ಯ ಒಟ್ಟಿಗೆ ವಾಸವಿದ್ದ ಅದೇ ಐಶಾರಾಮಿ ಮನೆಯನ್ನು ವಿಚ್ಛೇದನದ ಬಳಿಕ ಹಠಕ್ಕೆ ಬಿದ್ದು ನಟಿ ಸಮಂತಾ ಖರೀದಿ ಮಾಡಿ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಹೈದರಾಬಾದ್ನ ಐಶಾರಾಮಿ ಏರಿಯಾ ಒಂದರಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಭಾರಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.
7944 ಚದರ ಅಡಿ ವಿಸ್ತೀರ್ಣದ ನಾಲ್ಕು ಬೆಡ್ರೂಂಗಳುಳ್ಳ ಡ್ಯೂಪ್ಲೆಕ್ಸ್ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೈದರಾಬಾದ್ನ ದುಬಾರಿ ಏರಿಯಾದ ಐಶಾರಾಮಿ ಅಪಾರ್ಟ್ಮೆಂಟ್ ಒಂದರ 14ನೇ ಅಂತಸ್ತಿನಲ್ಲಿ ಈ ಡ್ಯೂಪ್ಲೆಕ್ಸ್ ಮನೆ ಇದೆಯಂತೆ. ಈ ಡ್ಯೂಪ್ಲೆಕ್ಸ್ ಮನೆಗೆ ಸಮಂತಾ 7.8 ಕೋಟಿ ರುಪಾಯಿ ಹಣ ತೆತ್ತಿರುವುದಾಗಿ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ ಬಾಲಿವುಡ್ನ ಪಿಂಕ್ವಿಲ್ಲಾ ಈ ಮಾಹಿತಿ ಸುಳ್ಳೆಂದು ವರದಿ ಮಾಡಿದೆ.
ಸಮಂತಾ ಪ್ರಸ್ತುತ ಹೈದರಾಬಾದ್ನ ಪಲಾಟಿಯಾಲ್ ಹೌಸ್ನಲ್ಲಿ ನೆಲೆಸಿದ್ದಾರೆ. ಅದು ಜಯಭೇರಿ ಆರೆಂಜ್ ಕೌಂಟಿ ಅಪಾರ್ಟ್ಮೆಂಟ್ನಲ್ಲಿದೆ. ಈ ಮನೆಯನ್ನು ನಾಗ ಚೈತನ್ಯ ಹಾಗೂ ಸಮಂತಾ ವಿವಾಹವಾದಾಗ ಹಿರಿಯ ನಟರೊಬ್ಬರಿಂದ ಖರೀದಿಸಿದ್ದರು. ವಿಚ್ಛೇದನದ ಬಳಿಕ ಮನೆಯನ್ನು ಮಾರಾಟ ಮಾಡಲಾಗಿತ್ತು ಆ ಬಳಿಕ ಮತ್ತೆ ನಟಿ ಸಮಂತಾ ಭಾರಿ ಮೊತ್ತದ ಹಣ ಪಾವತಿಸಿ ಮರಳಿ ಆ ಮನೆ ಖರೀದಿಸಿ ಅಲ್ಲಿಯೇ ವಾಸವಿದ್ದಾರೆ.
ಇದನ್ನೂ ಓದಿ:ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ
ಸಮಂತಾರ ಒಟ್ಟು ಮೌಲ್ಯ ಸುಮಾರು 100 ಕೋಟಿಗಳಿಗೂ ಹೆಚ್ಚಿದೆ. ಸಿನಿಮಾ ಒಂದಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆಯನ್ನು ಸಮಂತಾ ಪಡೆಯುತ್ತಾರೆ. ಇದಲ್ಲದೆ ಇನ್ಸ್ಟಾಗ್ರಾಂನಲ್ಲಿ ಜಾಹೀರಾತು ಪ್ರಕಟಿಸಲು ಸಹ ದೊಡ್ಡ ಮೊತ್ತದ ಹಣವನ್ನೇ ಸಂಭಾವನೆಯಾಗಿ ಪಡೆಯುತ್ತಾರೆ. ಮನೆಯ ಜೊತೆಗೆ ಹಲವು ಐಶಾರಾಮಿ ಕಾರುಗಳನ್ನು ಸಹ ಸಮಂತಾ ಹೊಂದಿದ್ದಾರೆ. ಸಮಂತಾ ಬಳಿ ಲ್ಯಾಂಡ್ ರೋವರ್, ಬಿಎಂಡಬ್ಲು 7 ಸೇರಿದಂತೆ ಇನ್ನೂ ಕೆಲವು ಐಶಾರಾಮಿ ಕಾರುಗಳಿವೆ. ಕೆಲವು ಉದ್ಯಮಗಳಲ್ಲಿಯೂ ಸಮಂತಾ ಬಂಡವಾಳ ಹೂಡಿದ್ದಾರೆ.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಸಮಂತಾ ಪ್ರಸ್ತುತ, ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಅರೇಂಜ್ ಮೆಂಟ್ಸ್ ಆಫ್ ಲವ್ ಕಾದಂಬರಿ ಆಧರಿತ ಚೆನ್ನೈ ಸ್ಟೋರಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್ನ ಸಿನಿಮಾ ಒಂದರಲ್ಲಿಯೂ ಸಮಂತಾ ನಟಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ