Samantha: ಐಟಂ ಸಾಂಗ್​ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳೋಕೆ ಎಷ್ಟು ಶ್ರಮ ಪಡಬೇಕು ಗೊತ್ತಾ?; ಸಮಂತಾ ವಿವರಿಸಿದ್ದು ಹೀಗೆ

Pushpa The Rise | Oo Antava: ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಿದ್ದಕ್ಕೆ ಸಮಂತಾ ಅವರನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ಕುರಿತಂತೆ ನಟಿ ಮಾತನಾಡಿದ್ದು, ಅಂತಹ ಹಾಡುಗಳಲ್ಲಿ ಕಾಣಿಸಿಕೊಳ್ಳೋದು ಎಷ್ಟು ಕಷ್ಟ ಎಂದು ವಿವರಿಸಿದ್ದಾರೆ.

Samantha: ಐಟಂ ಸಾಂಗ್​ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳೋಕೆ ಎಷ್ಟು ಶ್ರಮ ಪಡಬೇಕು ಗೊತ್ತಾ?; ಸಮಂತಾ ವಿವರಿಸಿದ್ದು ಹೀಗೆ
‘ಊ ಅಂಟಾವಾ’ ಹಾಡಿನಲ್ಲಿ ಸಮಂತಾ, ಅಲ್ಲು ಅರ್ಜುನ್
Updated By: shivaprasad.hs

Updated on: Dec 21, 2021 | 1:01 PM

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟಾವಾ ಮಾವಾ, ಊಊ ಅಂಟಾವಾ ಮಾವ’ ಹಾಡು ವಿವಿಧ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಸಮಂತಾ ವೈಯಕ್ತಿಕ ಜೀವನದ ಗೊಂದಲಗಳಿಗೆ ಅವರ ಬೋಲ್ಡ್​ನೆಸ್ ಕೂಡ ಕಾರಣ ಎಂಬ ಗಾಸಿಪ್ ಹಬ್ಬಿದ್ದಾಗಲೇ, ನಟಿ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡು ‘ಪುಷ್ಪ’ ಚಿತ್ರಕ್ಕೆ ಸಖತ್ ಮೈಲೇಜ್ ನೀಡಿದ್ದಲ್ಲದೇ, ಅಭಿಮಾನಿಗಳಿಗೆ ಪ್ರಿಯವಾಯಿತು. ಹಾಡಿಗೆ ಟೀಕೆ, ವಿರೋಧವೂ ಎದುರಾಗಿತ್ತು. ಇದೀಗ ಸಮಂತಾ ಹಾಡಿಗೆ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ್ದು, ಟೀಕೆ ಮಾಡುವವರಿಗೆ ಉತ್ತರಿಸಿದ್ದಾರೆ. ಐಟಂ ಸಾಂಗ್​ಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಕಷ್ಟ, ಇದಕ್ಕೆ ಬೇಕಾದ ಪರಿಶ್ರಮ ಏನು ಎಂಬುದನ್ನು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಮಂತಾ, ಅಭಿಮಾನಿಗಳಿಗೆ ಮನಃಪೂರ್ವಕ ಧನ್ಯವಾದ ಹೇಳಿದ್ದಾರೆ. ಹಾಡಿನ ದೃಶ್ಯವೊಂದನ್ನು ಹಂಚಿಕೊಂಡಿರುವ ಸಮಂತಾ, ‘‘ನಾನು ಒಳ್ಳೆಯದರಲ್ಲಿ ಕಾಣಿಸಿಕೊಂಡಿದ್ದೇನೆ (ನಾಯಕಿ), ನೆಗೆಟಿವ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ಹಾಸ್ಯದ ಪಾತ್ರದಲ್ಲಿ, ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಶೋ ಒಂದನ್ನು ಹೋಸ್ಟ್ ಕೂಡ ಮಾಡಿದ್ದೇನೆ. ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಲು ಬಹಳ ಶ್ರಮವಹಿಸಿದ್ದೇನೆ. ಆದರೆ.. ಮಾದಕವಾಗಿ (ಸೆಕ್ಸಿಯಾಗಿ) ಕಾಣಿಸಿಕೊಳ್ಳುವುದು ಮತ್ತೊಂದು ಹಂತದ ಶ್ರಮವನ್ನು ಬೇಡುತ್ತದೆ..ಉಫ್..’’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಸಮಂತಾ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

‘ಊ ಅಂಟಾವಾ’ ಹಾಡು ಕನ್ನಡದಲ್ಲಿ ‘ಹೂ ಅಂತೀಯಾ ಮಾವ, ಊಹೂ ಅಂತೀಯಾ ಮಾವ’ ಎಂಬ ಸಾಲಿನಲ್ಲಿ ತೆರೆ ಕಂಡಿತ್ತು. ಈ ಹಾಡು ಸಖತ್ ಹಿಟ್ ಆಗಿದ್ದು, ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆಗಳು ಜನರನ್ನು ಮೋಡಿ ಮಾಡಿವೆ. ಇತ್ತೀಚೆಗೆ ಸಮಂತಾ ಅಲ್ಲು ಅರ್ಜುನ್ ಅವರನ್ನು ಹೊಗಳಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಅಲ್ಲು ಅರ್ಜುನ್ ಅವರಿಂದ ಪ್ರಭಾವಿತರಾಗಿದ್ದಾಗಿ ಬರೆದುಕೊಂಡಿದ್ದರು.

ಸುಕುಮಾರ್ ನಿರ್ದೇಶನದ ‘ಪುಷ್ಪ’ ಬಾಕ್ಸಾಫೀಸ್​ನಲ್ಲೂ ಉತ್ತಮ ಗಳಿಕೆ ಕಾಣುತ್ತಿದೆ. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್, ಫಹಾದ್ ಫಾಸಿಲ್ ಸೇರಿದಂತೆ ಖ್ಯಾತನಾಮರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ:

‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು?

ಸಮಂತಾ ಹಾಡಿನಲ್ಲಿ ಗಂಡಸರಿಗೆ ಅವಮಾನ; ‘ಪುಷ್ಪ’ ಚಿತ್ರದ ವಿರುದ್ಧ ದೂರು ನೀಡಿದ ಪುರುಷರ ಸಂಘಟನೆ