ಬಾಯ್​​ಫ್ರೆಂಡ್ ಕುಟುಂಬದ ಜೊತೆಗೆ ದೀಪಾವಳಿ ಆಚರಿಸಿದ ಸಮಂತಾ

Samantha Ruth Prabhu-Raj Nidhimoru: ಸಮಂತಾ ಋತ್ ಪ್ರಭು ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ತಮ್ಮ ಖಾಸಗಿ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಮಂತಾ, ತಮ್ಮ ಬಾಯ್​​ಫ್ರೆಂಡ್ ಜೊತೆಗೆ ಲಿವಿನ್ ರಿಲೇಷನ್​​​ನಲ್ಲಿ ಇರುವ ಬಗ್ಗೆ ಕಳೆದ ಕೆಲ ತಿಂಗಳುಗಳಿಂದಲೂ ಸುದ್ದಿ ಆಗುತ್ತಲೇ ಇದೆ. ಇದೀಗ ಸಮಂತಾ, ತಮ್ಮ ಬಾಯ್​​ಫ್ರೆಂಡ್ ಜೊತೆಗೆ ಮಾತ್ರವಲ್ಲದೆ ಅವರ ಕುಟುಂಬದ ಜೊತೆಗೆ ಚಿತ್ರ ಹಂಚಿಕೊಂಡಿದ್ದಾರೆ.

ಬಾಯ್​​ಫ್ರೆಂಡ್ ಕುಟುಂಬದ ಜೊತೆಗೆ ದೀಪಾವಳಿ ಆಚರಿಸಿದ ಸಮಂತಾ
Samantha Ruth Prabhu

Updated on: Oct 21, 2025 | 7:51 PM

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿಯಾಗಿ ಮಿಂಚಿದವರು. ದಕ್ಷಿಣದ ಬಹುತೇಕ ದೊಡ್ಡ ಸ್ಟಾರ್ ನಟರುಗಳೊಡನೆ ಸಮಂತಾ ಋತ್ ಪ್ರಭು ನಟಿಸಿದ್ದಾರೆ. ಆದರೆ ನಟಿ ಸಮಂತಾ ಇತ್ತೀಚೆಗೆ ಸಿನಿಮಾಗಳಿಗಿಂತಲೂ ತಮ್ಮ ಖಾಸಗಿ ಜೀವನದಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಸಮಂತಾ, ನಟ ನಾಗ ಚೈತನ್ಯ ಅವರನ್ನು ಪ್ರೀತಿ ಮದುವೆ ಆಗಿದ್ದರು. ಆದರೆ ಕೇವಲ ನಾಲ್ಕು ವರ್ಷದ ದಾಂಪತ್ಯದ ಬಳಿಕ ಇಬ್ಬರೂ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದು ಗೊತ್ತೆ ಇದೆ. ನಾಗ ಚೈತನ್ಯ, ಶೋಭಿತಾ ಜೊತೆಗೆ ವಿವಾಹವಾಗಿದ್ದಾರೆ. ಸಮಂತಾ ಸಹ ತಮಗಾಗಿ ವ್ಯಕ್ತಿಯೊಬ್ಬರನ್ನು ಹುಡುಕಿಕೊಂಡಿದ್ದು, ಇದೀಗ ಅವರೊಟ್ಟಿಗೆ ಸುತ್ತಾಡುತ್ತಿದ್ದಾರೆ. ಇದೀಗ ಅವರ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ್ದಾರೆ ಸಹ.

ನಟಿ ಸಮಂತಾ ಬಾಯ್​​ಫ್ರೆಂಡ್ ಜೊತೆಗೆ ಲಿವಿನ್​​ನಲ್ಲಿರುವ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದಾರೆ. ಈ ಇಬ್ಬರೂ ಪರಸ್ಪರ ಲಿವಿನ್ ರಿಲೇಷನ್​​ನಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವಾರು ತಿಂಗಳುಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಇಬ್ಬರೂ ಸಹ ಇದನ್ನು ಖಾತ್ರಿ ಪಡಿಸಿರಲಿಲ್ಲ. ಇದೀಗ ಸಮಂತಾ, ರಾಜ್ ಅವರ ಕುಟುಂಬದ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದೀಗ ನಟಿ ಸಮಂತಾ, ದೀಪಾವಳಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಜೊತೆಗೆ ದೀಪಾವಳಿ ಆಚರಣೆ ಮಾಡಿದ್ದಾರೆ. ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗಿನ ಚಿತ್ರವನ್ನು ಸಮಂತಾ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಜ್ ಅವರ ತಂದೆ-ತಾಯಿ ಮತ್ತು ಸಹೋದರರು ಸಹ ಇದ್ದಾರೆ. ಸಮಂತಾ ಸಹ ಅವರ ಜೊತೆಗೆ ಒಟ್ಟಿಗೆ ಕೂತು ‘ಫ್ಯಾಮಿಲಿ ಫೋಟೊ’ ತೆಗೆಸಿಕೊಂಡಿದ್ದಾರೆ. ಜೊತೆಗೆ ರಾಜ್ ಅವರ ಮನೆಯ ಹಲವು ಚಿತ್ರಗಳನ್ನು ಸಹ ಸಮಂತಾ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮತ್ತೆ ಮಾತನಾಡಿದ ಸಮಂತಾ

ರಾಜ್ ನಿಧಿಮೋರು ಜನಪ್ರಿಯ ನಿರ್ದೇಶಕ ಆಗಿದ್ದಾರೆ. ಮೊದಲು ಕಾಮಿಡಿ ಶೋಗೆ ಡಿಕೆ ಕೃಷ್ಣ ಜೊತೆ ಸೇರಿಕೊಂಡು ಚಿತ್ರಕತೆ, ಸ್ಕಿಟ್ಸ್​​ಗಳನ್ನು ಬರೆಯುತ್ತಿದ್ದರು. ಇವರ ಜೋಡಿ ‘ರಾಜ್ ಆಂಡ್ ಡಿಕೆ’ ಎಂದೇ ಖ್ಯಾತವಾಗಿತ್ತು. ರಾಜ್ ಮತ್ತು ಡಿಕೆ ಕೆಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಚಿತ್ರಕತೆಗಳನ್ನು ಬರೆದಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಕೆಲವು ವೆಬ್ ಸರಣಿಗಳ ಮೇಲೆ ನಿರ್ಮಾಪಕರಾಗಿ ಬಂಡವಾಳ ಸಹ ಹಾಕಿದ್ದಾರೆ.

ರಾಜ್ ನಿಧಿಮೋರು, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಸಮಯದಲ್ಲಿ ಸಮಂತಾ ಪರಿಚಯಕ್ಕೆ ಬಂದಿದ್ದರು. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಂದಹಾಗೆ ರಾಜ್ ನಿಧಿಮೋರುಗೆ ಈಗಾಗಲೇ ಮದುವೆ ಆಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ರಾಜ್​​ಗೆ ಇನ್ನೂ ವಿಚ್ಛೇದನ ಸಹ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ