ಮೈ ಕೈ ನೋವು ಇದ್ದರೂ ವರ್ಕೌಟ್​ ಮಾಡಿದ ಸಮಂತಾ ರುತ್​ ಪ್ರಭು; ಅಭಿಮಾನಿಗಳಿಗೆ ಚಿಂತೆ

ಕೆಲವೇ ದಿನಗಳ ಹಿಂದೆ ಸಮಂತಾ ರುತ್​ ಪ್ರಭು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿ ಡ್ರಿಪ್ಸ್​ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಆರೋಗ್ಯದ ಪರಿಸ್ಥಿತಿ ಹೀಗಿರುವಾಗ ಅವರು ಕಠಿಣ ವರ್ಕೌಟ್​ ಮಾಡುತ್ತಿರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.

ಮೈ ಕೈ ನೋವು ಇದ್ದರೂ ವರ್ಕೌಟ್​ ಮಾಡಿದ ಸಮಂತಾ ರುತ್​ ಪ್ರಭು; ಅಭಿಮಾನಿಗಳಿಗೆ ಚಿಂತೆ
ಸಮಂತಾ ರುತ್​ ಪ್ರಭು
Follow us
ಮದನ್​ ಕುಮಾರ್​
|

Updated on: Oct 16, 2023 | 7:49 AM

ನಟಿ ಸಮಂತಾ ರುತ್​ ಪ್ರಭು ಅವರು ಪೂರ್ತಿಯಾಗಿ ಮಯೋಸೈಟಿಸ್ (Myositis)​ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಹಲವು ತಿಂಗಳಿಂದಲೂ ಅವರು ಅದಕ್ಕೆ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಆದರೆ ಸಮಸ್ಯೆ ಮಾತ್ರ ಪರಿಹಾರ ಆಗಿಲ್ಲ. ಇದರಿಂದಾಗಿ ಅವರ ಸಿನಿಮಾ ಕೆಲಸಗಳು ಕುಂಠಿತ ಆಗುತ್ತಿವೆ. ಸಮಂತಾ (Samantha Ruth Prabhu) ಹೊಸ ಸಿನಿಮಾ ಒಪ್ಪಿಕೊಳ್ಳುವುದು ಕೂಡ ತಡವಾಗುತ್ತಿದೆ. ಈಗ ಅವರು ಚಿಕಿತ್ಸೆ ಸುಲುವಾಗಿಯೇ ದೀರ್ಘ ಬ್ರೇಕ್​ ಪಡೆದಿರುವುದು ಗೊತ್ತೇ ಇದೆ. ಹಾಗಿದ್ದರೂ ಕೂಡ ಸಮಂತಾ ಅವರು ಜಿಮ್​ನಲ್ಲಿ ವರ್ಕೌಟ್​ (Samantha Workout) ಮಾಡುವುದು ತಪ್ಪಿಸಿಲ್ಲ. ಮೈ ಕೈ ನೋವು ಇದ್ದರೂ ಕೂಡ ಅವರು ವರ್ಕೌಟ್​ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಚಿಂತೆ ಆಗಿದೆ.

ಸಮಂತಾ ರುತ್​ ಪ್ರಭು ಅವರು ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಾರೆ. ದೇಹದ ಶೇಪ್​ ಚೆನ್ನಾಗಿರಬೇಕು ಎಂದು ಕಾಳಜಿ ವಹಿಸುತ್ತಾರೆ. ಆದರೆ ಅನಾರೋಗ್ಯದ ಸಂದರ್ಭದಲ್ಲೂ ಅವರು ಈ ಪರಿ ಕಟ್ಟುನಿಟ್ಟಾಗಿ ಇರಬೇಕಾ ಎಂಬುದು ಕೆಲವು ಅಭಿಮಾನಿಗಳ ಪ್ರಶ್ನೆ. ಒಂದಷ್ಟು ವಿಶ್ರಾಂತಿ ಪಡೆದರೆ ಉತ್ತಮ ಎಂದು ಫ್ಯಾನ್ಸ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಂತಾಗೆ ಜುನೈದ್​ ಶೇಖ್​ ಅವರು ಫಿಟ್ನೆಸ್​ ತರಬೇತಿ ನೀಡುತ್ತಾರೆ. ಅವರು ಸಿಕ್ಕಾಪಟ್ಟೆ ಸ್ಟ್ರಿಕ್ಟ್​.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸಮಂತಾ ರುತ್​ ಪ್ರಭು; ಫೋಟೋ ನೋಡಿ ಅಭಿಮಾನಿಗಳಲ್ಲಿ ಆತಂಕ

ತಮಗೆ ಮೈ ಕೈ ನೋವು ಇದೆ ಎಂದು ಜುನೈದ್​ ಶೇಖ್​ಗೆ ಸಮಂತಾ ಮೆಸೇಜ್​ ಮಾಡಿದ್ದಾರೆ. ಒಂದು ದಿನ ವರ್ಕೌಟ್​ ತಪ್ಪಿಸಿದರೆ ಉತ್ತಮ ಎಂಬುದು ಸಮಂತಾ ಅವರ ಆಲೋಚನೆ ಆಗಿತ್ತು. ಆದರೆ ಅದಕ್ಕೆ ಜುನೈದ್​ ಅವಕಾಶ ನೀಡಿಲ್ಲ. ಮೈ ಕೈ ನೋವು ಇದ್ದರೂ ಅವರು ವರ್ಕೌಟ್​ ಮಾಡಿಸಿದ್ದಾರೆ. ಭಾನುವಾರ ಕೂಡ ವರ್ಕೌಟ್​ ತಪ್ಪಿಸಲು ಅವರು ಅವಕಾಶ ನೀಡಿಲ್ಲ. ಹಾಗಾಗಿ ‘ಇದೊಂದು ಕ್ರೂರ ಭಾನುವಾರ’ ಎಂದು ಸಮಂತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಈ ನಾಯಿಗಾಗಿ ಸಮಂತಾ-ನಾಗಚೈತನ್ಯ ಒಂದಾಗಬೇಕು ಎಂದು ಬೇಡಿಕೆ ಇಟ್ಟ ಅಭಿಮಾನಿಗಳು

ಸಮಂತಾ ಅವರು ಕೆಲವೇ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿ ಡ್ರಿಪ್ಸ್​ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಆರೋಗ್ಯದ ಪರಿಸ್ಥಿತಿ ಹೀಗಿರುವಾಗ ಅವರು ಕಠಿಣ ವರ್ಕೌಟ್​ ಮಾಡುತ್ತಿರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಸದ್ಯಕ್ಕಂತೂ ಸಮಂತಾ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವಸರ ತೋರುತ್ತಿಲ್ಲ. ಆದಷ್ಟು ಬೇಗ ಅವರು ಪೂರ್ತಿ ಗುಣಮುಖರಾಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ‘ಸಿಟಾಡೆಲ್​’ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ಅವರು ನಟಿಸಿದ್ದಾರೆ. ಅದರ ಬಿಡುಗಡೆಗಾಗಿ ಪ್ರೇಕ್ಷಕರು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ