ಸಮಂತಾಗೆ ಚಿಕಿತ್ಸೆ ನೀಡುತ್ತಿರುವ ವ್ಯಕ್ತಿ ವೈದ್ಯನೇ ಅಲ್ಲ; ಹೊರಬಿತ್ತು ಶಾಕಿಂಗ್ ವಿಚಾರ

ನಟಿ ಸಮಂತಾ ರುತ್ ಪ್ರಭು ಮೈಯೋಸಿಟಿಸ್ ಕಾಯಿಲೆ ಕಾಣಿಸಿಕೊಂಡಿತು. ಇದಾದ ಬಳಿಕ ಅವರು ಸಿನಿಮಾಗಳಿಂದ ದೂರ ಆದರು. ಈಗ ಸಮಂತಾ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಅವರು ಅನೇಕರ ಜೀವವನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ. ಸಮಂತಾ ವೈದ್ಯರ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ.

ಸಮಂತಾಗೆ ಚಿಕಿತ್ಸೆ ನೀಡುತ್ತಿರುವ ವ್ಯಕ್ತಿ ವೈದ್ಯನೇ ಅಲ್ಲ; ಹೊರಬಿತ್ತು ಶಾಕಿಂಗ್ ವಿಚಾರ
ಸಮಂತಾ
Follow us
ರಾಜೇಶ್ ದುಗ್ಗುಮನೆ
|

Updated on: Jul 06, 2024 | 12:23 PM

ನಟಿ ಸಮಂತಾ ಅವರ ಆರೋಗ್ಯ ಟಿಪ್ಸ್ ತುಂಬಾನೇ ಅಪಾಯಕಾರಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕಾರಣದಿಂದಲೇ ಸಮಂತಾ ಅವರ ವಿರುದ್ಧ ಒಬ್ಬರಾದ ಮೇಲೆ ಒಬ್ಬರು ಟೀಕೆಗಳನ್ನು ಹೊರಹಾಕುತ್ತಿದ್ದಾರೆ. ಈಗ ಡಾಕ್ಟರ್ ಸಿರಿಯಾಕ್ ಫಿಲಿಪ್ಸ್​ ಅವರು ಸಮಂತಾ ವಿರುದ್ಧ ಕಿಡಿಕಾರಿದ್ದಾರೆ. ಅವರ ವೈದ್ಯರನ್ನು ಫ್ರಾಡ್ ಎಂದು ಕರೆದಿದ್ದಾರೆ. ಈ ಬಗ್ಗೆ ಅವರು ವೈದ್ಯಕೀಯ ಅಥಾರಿಟಿಗೆ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ.

ಸಮಂತಾ ಅವರ ಅನೇಕ ಅಭಿಮಾನಿಗಳು ಫಿಲಿಪ್ಸ್​ಗೆ ಸಂದೇಶ ಕಳುಹಿಸಿ ‘ನಟಿಯ ವಿರುದ್ಧ ಅಷ್ಟೊಂದು ಕಠೋರವಾಗಿ ನಡೆದುಕೊಳ್ಳಬೇಡಿ’ ಎಂದು ಕೋರಿದ್ದರಂತೆ. ಫಿಲಿಪ್ಸ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ಈ ರೀತಿ ಸಿಟ್ಟಾಗುತ್ತಿರುವುದು ನಟಿಯ ಬಗ್ಗೆ ಅಲ್ಲ, ಅವರು ನೀಡುತ್ತಿರುವ ವೈದ್ಯಕೀಯ ಮಾಹಿತಿ ಬಗ್ಗೆ ಎಂದಿದ್ದಾರೆ.

ವೈರಲ್ ಇನ್​ಫೆಕ್ಷನ್​ಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ತೆಗೆದುಕೊಂಡು ಅದನ್ನು ಇನ್​ಹೇಲ್ ಮಾಡುವಂತೆ ಕೋರಿದ್ದರು. ಆದರೆ, ಇದು ಅಪಾಯಕಾರಿ ಎಂಬುದು ವೈದ್ಯರ ಸಲಹೆ. ಸಮಂತಾ ಅವರು ಈ ರೀತಿ ಸಲಹೆ ಕೊಟ್ಟಿದ್ದು ಸರಿ ಅಲ್ಲ ಎಂಬುದು ಅನೇಕರ ಅಭಿಪ್ರಾಯ.

ಫಿಲಿಪ್ಸ್ ಈ ಬಗ್ಗೆ ಮಾತನಾಡಿದ್ದಾರೆ. ‘ಡಾಕ್ಟರ್ ಜಾಕರ್​ ಅವರು ವೈದ್ಯರಲ್ಲ. ಅವರು ಪ್ರಕೃತಿ ಚಿಕಿತ್ಸಕ. ಪ್ರಕೃತಿ ಚಿಕಿತ್ಸಕರು ಸಮಾಜಕ್ಕೆ, ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವಾಗಲೂ ಅಪಾಯ ತರುತ್ತಾರೆ. ಸಮಂತಾ ಅವರ ವೈದ್ಯರಿಗೆ ಅಮೆರಿಕದ ಆರೋಗ್ಯ ಸಂಸ್ಥೆಗಳು ಅನೇಕ ಬಾರಿ ಎಚ್ಚರಿಕೆ ನೀಡಿದೆ. ಆತ ಓರ್ವ ಫ್ರಾಡ್’ ಎಂದಿದ್ದಾರೆ ಫಿಲಿಪ್ಸ್.

ಇದನ್ನೂ ಓದಿ: ಜೀವ ತೆಗೆಯುವಂತಹ ಟಿಪ್ಸ್ ಕೊಟ್ಟು ಅಭಿಮಾನಿಗಳನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ ಸಮಂತಾ

‘ನಾನು ಸಮಂತಾ ಅವರ ಆರೋಗ್ಯ ಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ. ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಾನು ಸಂದೇಶ ನೀಡಿದ ರೀತಿಯಿಂದ ಅವರಿಗೆ ಕಿರಿಕಿರಿ ಅನಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಅದು ಉದ್ದೇಶಪೂರ್ವಕವಲ್ಲ. ಅವರ ದುರ್ಬಲತೆಯನ್ನು ಬಳಸಿಕೊಳ್ಳುವ ಮತ್ತು ಅವರ ಲಾಭಕ್ಕಾಗಿ ಪ್ರಯೋಗ ಮಾಡುವವರು ನನಗೆ ಇಷ್ಟ ಆಗುವುದಿಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.