AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha Father Death: ನಟಿ ಸಮಂತಾ ರುತ್​ ಪ್ರಭು ತಂದೆ ಜೋಸೆಫ್​ ಪ್ರಭು ನಿಧನ

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಮನೆಯಲ್ಲಿ ಶೋಕ ಆವರಿಸಿದೆ. ಸಮಂತಾ ತಂದೆ ಜೋಸೆಫ್​ ಪ್ರಭು ಅವರು ನಿಧನರಾಗಿದ್ದಾರೆ. ಈ ವಿಷಯವನ್ನು ಸ್ವತಃ ಸಮಂತಾ ಅವರು ಹಂಚಿಕೊಂಡಿದ್ದಾರೆ. ಈ ಕಷ್ಟದ ಕಾಲದಲ್ಲಿ ಸಮಂತಾ ಅವರಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಮಂತಾ ಸಾಧನೆ ಮಾಡಲು ಅವರ ತಂದೆ ಬೆಂಬಲವಾಗಿದ್ದರು.

Samantha Father Death: ನಟಿ ಸಮಂತಾ ರುತ್​ ಪ್ರಭು ತಂದೆ ಜೋಸೆಫ್​ ಪ್ರಭು ನಿಧನ
ಸಮಂತಾ, ಜೋಸೆಫ್​ ಪ್ರಭು
ಮದನ್​ ಕುಮಾರ್​
|

Updated on:Nov 29, 2024 | 5:39 PM

Share

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರ ಕುಟುಂಬದಲ್ಲಿ ಶೋಕ ಆವರಿಸಿದೆ. ಸಮಂತಾ ತಂದೆ ಜೋಸೆಫ್​ ಪ್ರಭು ಇಂದು (ನವೆಂಬರ್​ 29) ನಿಧನರಾಗಿದ್ದಾರೆ. ಈ ನೋವಿನ ವಿಷಯವನ್ನು ಸ್ವತಃ ಸಮಂತಾ ರುತ್ ಪ್ರಭು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಕಷ್ಟದ ಕಾಲದಲ್ಲಿ ಸಮಂತಾ ಅವರಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ‘ಮತ್ತೆ ನಾವು ಸಿಗವವರೆಗೆ ಅಪ್ಪ..’ ಎಂದು ಸಮಂತಾ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ.

ಸಮಂತಾ ತಂದೆ ಜೋಸೆಫ್​ ಪ್ರಭು ಅವರು ತೆಲುಗು ಆಂಗ್ಲೋ ಇಂಡಿಯನ್ ಆಗಿದ್ದರು. ಸಮಂತಾ ಯಶಸ್ಸಿನಲ್ಲಿ ತಂದೆಯ ಕೊಡುಗೆ ಪ್ರಮುಖವಾಗಿತ್ತು. ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ಸಮಂತಾಗೆ ಅವರ ತಂದೆ ಬೆಂಬಲವಾಗಿ ನಿಂತಿದ್ದರು. ತಂದೆಯನ್ನು ಕಳೆದುಕೊಂಡ ಸಮಂತಾ ಅವರಿಗೆ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಸಾಂತ್ವನದ ಸಂದೇಶ ಕಳಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಸಮಂತಾ ಅವರು ತಮ್ಮ ಕುಟುಂಬದವರ ಬೆಂಬಲವನ್ನು ನೆನೆಯುತ್ತಿದ್ದರು. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆದಿದ್ದಾಗ ಜೋಸೆಫ್​ ಪ್ರಭು ಅವರು ತುಂಬ ಬೇಸರ ಮಾಡಿಕೊಂಡಿದ್ದರು. ಆ ನೋವಿನಿಂದ ಹೊರಗೆ ಬರಲು ಅವರಿಗೆ ಬಹಳ ಸಮಯ ಹಿಡಿದಿತ್ತು.

ಇದನ್ನೂ ಓದಿ: ‘ನಿಮ್ಮ ಕುಟುಂಬ ಮತ್ತು ನಿಕಟ ಸ್ನೇಹಿತರಿಗೆ ಸತ್ಯ ತಿಳಿದಿದೆ’: ವಿಚ್ಛೇದನ ಬಗ್ಗೆ ಸಮಂತಾ ಮಾತು

ಚಿತ್ರರಂಗದಲ್ಲಿ ಸಮಂತಾ ಅವರು ಸ್ಟಾರ್​ ನಟಿ ಆಗಿದ್ದಾರೆ. ಸಿನಿಮಾ, ವೆಬ್ ಸಿರೀಸ್​, ಜಾಹೀರಾತು, ಪಾಡ್​ಕಾಸ್ಟ್​ ಮುಂತಾದ ಕ್ಷೇತ್ರದಲ್ಲಿ ಅವರಿಗೆ ಬೇಡಿಕೆ ಇದೆ. ಅವರು ನಟಿಸಿದ ‘ಸಿಟಾಡೆಲ್​ ಹನಿಬನಿ’ ವೆಬ್​ ಸರಣಿ ಇತ್ತೀಚೆಗಷ್ಟೇ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಪ್ರಸಾರ ಆಗಿದೆ. ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅನಾರೋಗ್ಯದ ನಡುವೆಯೂ ಕಷ್ಟಪಟ್ಟು, ಸಾಕಷ್ಟು ತಯಾರಿ ಮಾಡಿಕೊಂಡು ಸಮಂತಾ ಅವರು ಈ ಸಿರೀಸ್​ನಲ್ಲಿ ನಟಿಸಿದರು. ಅದರ ಯಶಸ್ಸಿನ ಖುಷಿಯಲ್ಲಿ ಇರುವಾಗಲೇ ತಂದೆಯ ನಿಧನದಿಂದ ಅವರಿಗೆ ತೀವ್ರ ನೋವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:21 pm, Fri, 29 November 24

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ