AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಋತ್ ಪ್ರಭು ಡಬಲ್ ಸೆಂಚುರಿ: ಸಿನಿಮಾ 100 ಕೋಟಿ, ಉದ್ಯಮ 120 ಕೋಟಿ

ಸಮಂತಾ ಋತ್ ಪ್ರಭು ನಟಿ ಮಾತ್ರವಲ್ಲ ಉದ್ಯಮಿಯೂ ಹೌದು. ಹಲವು ಬೇರೆ ಬೇರೆ ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಸಮಂತಾ ನಟಿಸಿದ ಈ ಹಿಂದಿನ ಸಿನಿಮಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮೋಡಿ ಮಾಡಿದ್ದು 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅದರ ಬೆನ್ನಲ್ಲೆ ಇದೀಗ ಸಮಂತಾ ಹೂಡಿಕೆ ಮಾಡಿರುವ ಕಂಪೆನಿಯೊಂದು ಸಹ 100 ಕೋಟಿ ಮೌಲ್ಯ ದಾಟಿದೆ.

ಸಮಂತಾ ಋತ್ ಪ್ರಭು ಡಬಲ್ ಸೆಂಚುರಿ: ಸಿನಿಮಾ 100 ಕೋಟಿ, ಉದ್ಯಮ 120 ಕೋಟಿ
Samantha Ruth Prabhu
ಮಂಜುನಾಥ ಸಿ.
|

Updated on: Oct 24, 2026 | 7:03 PM

Share

ಮುಖ್ಯಾಂಶಗಳು

  • ನಟಿ ಸಮಂತಾ ಋತ್ ಪ್ರಭು ಉದ್ಯಮ
  • ಸಮಂತಾ ಮಾಲೀಕತ್ವದ ಬ್ರ್ಯಾಂಡ್​​ನ ಸಾಧನೆ
  • 100 ಕೋಟಿ ರೆವೆನ್ಯೂ ದಾಟಿದ ಸಂಸ್ಥೆ

ಸಮಂತಾ ಋತ್ ಪ್ರಭು ದಕ್ಷಿಣದ ಸ್ಟಾರ್ ನಟಿ, ಬಾಲಿವುಡ್​​ನಲ್ಲೂ ಕೆಲಸ ಮಾಡಿರುವ ಸಮಂತಾ ಪ್ರತಿಭಾವಂತ ನಟಿ. ಅಂದಹಾಗೆ ಅವರು ನಟಿ ಮಾತ್ರವಲ್ಲ ಉದ್ಯಮಿಯೂ ಹೌದು. ಹಲವು ಬೇರೆ ಬೇರೆ ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಸಮಂತಾ ನಟಿಸಿದ ಈ ಹಿಂದಿನ ಸಿನಿಮಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮೋಡಿ ಮಾಡಿದ್ದು 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅದರ ಬೆನ್ನಲ್ಲೆ ಇದೀಗ ಸಮಂತಾ ಹೂಡಿಕೆ ಮಾಡಿರುವ ಕಂಪೆನಿಯೊಂದು ಸಹ 100 ಕೋಟಿ ಮೌಲ್ಯ ದಾಟಿದೆ.

ಸಮಂತಾ ಹಲವಾರು ಬ್ರ್ಯಾಂಡ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್, ಮನರಂಜನೆ, ಫಿಟ್​​ನೆಸ್, ಡಿಜಿಟಲ್, ಬ್ಯೂಟಿ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಸಮಂತಾ ಸುಗಂಧ ದ್ರವ್ಯ ಬ್ರ್ಯಾಂಡ್ ಆದ ‘ಸೀಕ್ರೆಟ್ ಅಲ್ಕೆಮಿಸ್ಟ್’ನಲ್ಲಿಯೂ ಹೂಡಿಕೆ ಮಾಡಿದ್ದು, ಸಹ ಮಾಲಕಿ ಆಗಿದ್ದಾರೆ. ಈ ಕಂಪೆನಿ ಇದೀಗ ಆದಾಯದಲ್ಲಿ ₹120 ಕೋಟಿ ಗಡಿಯನ್ನು ಮೀರಿದೆ.

‘ಸೀಕ್ರೆಟ್ ಅಲ್ಕೆಮಿಸ್ಟ್’ ಕಳೆದ ಎಂಟು ತಿಂಗಳುಗಳಲ್ಲಿ 8 ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಅದರ ಆದಾಯವನ್ನು ₹120 ಕೋಟಿ ಗಡಿಗೆ ಕೊಂಡೊಯ್ದಿದೆ ಎಂದು ಕಂಪೆನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಅರೊಮಾಥೆರಪಿ ಆಧಾರಿತ ಸುಗಂಧ ದ್ರವ್ಯದ ಮಾರಾಟ ಕಂಪೆನಿ ಇದಾಗಿದೆ. ಅಂಕಿತ್ ಠಾಡಾನಿ ಮತ್ತು ಆಕಾಶ್ ವಾಲಿಯಾ ಅವರು ಸ್ಥಾಪಿಸಿದ ಈ ಬ್ರ್ಯಾಂಡ್‌ಗೆ, 2024 ರಲ್ಲಿ ಸಮಂತಾ ಸಹ-ಸ್ಥಾಪಕರಾಗಿ ಸೇರಿಕೊಂಡರು. ಈ ಬ್ರ್ಯಾಂಡ್ 2025 ರಲ್ಲಿ ಸುಗಂಧ ದ್ರವ್ಯ ವಿಭಾಗಕ್ಕೆ ಕಾಲಿಟ್ಟಿತು ಮತ್ತು D2C ಚಾನೆಲ್‌ಗಳು, ಅಮೆಜಾನ್, ನೈಕಾ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್​​ಸ್ಟಾಮಾರ್ಟ್ ನಂತಹ ಕ್ವಿಕ್-ಕಾಮರ್ಸ್ ಸೇವೆಗಳ ಮೂಲಕ ತನ್ನ ಉಪಸ್ಥಿತಿಯನ್ನು ವಿಸ್ತರಿಸಿತು. ಈಗ ಈ ಬ್ರ್ಯಾಂಡ್ ಅದ್ಭುತವಾದ ಲಾಭವನ್ನು ಗಳಿಸುತ್ತಿದೆ.

ಇದನ್ನೂ ಓದಿ:ಒಟಿಟಿಯಲ್ಲಿಯೂ ದಾಖಲೆಗಳನ್ನು ಬರೆಯುತ್ತಿರುವ ಸಮಂತಾ ಋತ್ ಪ್ರಭು

ಬ್ರ್ಯಾಂಡ್‌ನ ಯಶಸ್ಸಿನ ಬಗ್ಗೆ ಮಾತನಾಡಿರುವ ಸಮಂತಾ ರುತ್ ಪ್ರಭು, ‘₹120 ಕೋಟಿ ಗಡಿ ದಾಟಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ’ ಎಂದಿದ್ದಾರೆ. ಸಮಂತಾ ಋತ್ ಪ್ರಭು ಅವರು ‘ಸೀಕ್ರೆಟ್ ಅಲ್ಕೆಮಿಸ್ಟ್’ ಮಾತ್ರವೇ ಅಲ್ಲದೆ ಇನ್ನೂ ಹಲವಾರು ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ‘ಸಖಿ’, ‘ಜೋಯ್’ ಹೆಲ್ತ್​​ಕೇರ್ ಬ್ರ್ಯಾಂಡ್, ‘ಟ್ರೂಲಿ ಎಸ್​​ಎಂಎ’, ‘ಮೈಲ್ ಕಲೆಕ್ಟಿವ್ ವೇರ್’, ‘ಗಟಾಚ’ ಹೆಸರಿನ ವೆಲ್​​ನೆಸ್ ಸಂಸ್ಥೆ, ‘ಏಕಂ’ ಶಿಕ್ಷಣ ಕುರಿತಾದ ಸಂಸ್ಥೆ, ಚೆನ್ನೈ ಸೂಪರ್ ಚಾಂಪ್ಸ್ ಹೆಸರಿನ ತಂಡದ ಮಾಲೀಕರು ಸಹ ಆಗಿರುವ ಸಮಂತಾ, ‘ಟ್ರಲಾಲ’ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲಕಿಯೂ ಹೌದು. ಇವುಗಳ ಜೊತೆಗೆ ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ.

ಸಮಂತಾ ತಾಯಿ ಆಗಲಿದ್ದು, ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಸಹ ಇದು ಎರಡನೇ ಮದುವೆ ಆದರೆ ಮೊದಲ ಮಗು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!