ಯಶ್ To ರಶ್ಮಿಕಾ ಮಂದಣ್ಣ; ದಕ್ಷಿಣದ ಕಲಾವಿದರಿಗೆ ಇದೆ ವಿವಿಧ ಕ್ರೇಜ್

| Updated By: ರಾಜೇಶ್ ದುಗ್ಗುಮನೆ

Updated on: Mar 05, 2024 | 10:30 AM

ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣದ ಜೊತೆಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸದ್ಯ ‘ಪುಷ್ಪ 2’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಇದೆ. ಅವರು ವರ್ಕೌಟ್ ಮಾಡೋದರಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.  

ಯಶ್ To ರಶ್ಮಿಕಾ ಮಂದಣ್ಣ; ದಕ್ಷಿಣದ ಕಲಾವಿದರಿಗೆ ಇದೆ ವಿವಿಧ ಕ್ರೇಜ್
ಯಶ್ To ರಶ್ಮಿಕಾ ಮಂದಣ್ಣ; ದಕ್ಷಿಣದ ಕಲಾವಿದರಿಗೆ ಇದೆ ವಿವಿಧ ಕ್ರೇಜ್
Follow us on

ದಕ್ಷಿಣ ಭಾರತದ ಚಿತ್ರರಂಗ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಹಲವು ಸ್ಟಾರ್ ಕಲಾವಿದರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಸಾಲಿನಲ್ಲಿ ಯಶ್ (Yash), ಅಲ್ಲು ಅರ್ಜುನ್, ಸಮಂತಾ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಇದರ ಜೊತೆಗೆ ಹಲವು ಸೆಲೆಬ್ರಿಟಿಗಳು ತಮ್ಮದೇ ಆದ ಕ್ರೇಜ್ ಹೊಂದಿದ್ದಾರೆ. ಅಪರೂಪದಲ್ಲೇ ಅಪರೂಪವಾಗಿ ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣದ ಜೊತೆಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸದ್ಯ ‘ಪುಷ್ಪ 2’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಇದೆ. ಅವರು ವರ್ಕೌಟ್ ಮಾಡೋದರಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.

ಪ್ರಭಾಸ್

‘ಸಲಾರ್’ ಮೂಲಕ ಪ್ರಭಾಸ್ ಅವರು ಗೆಲುವು ಕಂಡಿದ್ದಾರೆ. ಅವರು ‘ಕಲ್ಕಿ 2898 ಎಡಿ’ ಸೇರಿ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಊಟದ ಬಗ್ಗೆ ಒಂದು ಘೀಳು ಇದೆ. ಹೋಟೆಲ್ ಊಟಕ್ಕಿಂತ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಲು ಅವರು ಇಷ್ಟಪಡುತ್ತಾರೆ.

ಸಮಂತಾ

ಸಮಂತಾ ರುತ್ ಪ್ರಭು ಅವರು ನಟನೆಯಲ್ಲಿ ಪಳಗಿದ್ದಾರೆ. ಅವರು ತಮ್ಮ ನಗುವಿನ ಮೂಲಕ ಗೆಲ್ಲುತ್ತಾರೆ. ಅವರು ಸಮಂತಾ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅನಾರೋಗ್ಯದ ಮಧ್ಯೆಯೂ ಅವರು ವರ್ಕೌಟ್ ಮಾಡಿದ್ದರು.

ಜೂನಿಯರ್ ಎನ್​ಟಿಆರ್

ಜೂನಿಯರ್ ಎನ್​ಟಿಆರ್ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದಾದ ಬಳಿಕ ಅವರು  ‘ವಾರ್ 2’ ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಅವರಿಗೆ 9ನೇ ಸಂಖ್ಯೆ ಬಗ್ಗೆ ಘೀಳಿದೆ. ಇದು ಅವರ ಲಕ್ಕಿ ನಂಬರ್ ಎನ್ನಲಾಗಿದೆ. ಅವರ ಟ್ವಿಟರ್ ಹ್ಯಾಂಡಲ್​ನಲ್ಲಿ 9 ಇದೆ. ಅವರ ಕಾರಿನ ನಂಬರ್​ಪ್ಲೇಟ್​ ಸಂಖ್ಯೆ 9999.

ಇದನ್ನೂ ಓದಿ:VIDEO: ಯಶ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದ ದರ್ಶನ್; ಹಳೆಯ ವಿಡಿಯೋ ವೈರಲ್ 

ಯಶ್

ನಟ ಯಶ್ ಅವರು ‘ಕೆಜಿಎಫ್ 2’ ಮಾಡಿ ವಿಶ್ವಮಟ್ಟದಲ್ಲಿ ಫೇಮಸ್ ಆದರು. ಅವರಿಗೆ ಹಲವು ಅವಾರ್ಡ್​ಗಳು ಸಿಕ್ಕಿವೆ. ಸದ್ಯ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.  ಅವರಿಗೆ ಕಾರಿನ ಬಗ್ಗೆ ಸಖತ್ ಪ್ಯಾಶನ್ ಇದೆ. ರೇಂಜ್ ರೋವರ್ ಸೇರಿ ಅನೇಕ ದುಬಾರಿ ಕಾರುಗಳು ಅವರ ಬಳಿ ಇವೆ.

ನಾಗಾರ್ಜುನ

ಸಿನಿಮಾ ಜೊತೆಗೆ ಬಿಗ್ ಬಾಸ್ ನಿರೂಪಣೆ ಮೂಲಕವೂ ಫೇಮಸ್ ಆಗಿದ್ದಾರೆ ನಾಗಾರ್ಜುನ. ತೆಲುಗಿನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಅವರಿಗೆ ಕಾಫಿ ಘೀಳು ಇದೆ. ಅವಕಾಶ ಸಿಕ್ಕಾಗಲೆಲ್ಲ ಕಾಫಿ ಕುಡಿಯುತ್ತಾರೆ ಎಂದು ಹೇಳಲಾಗಿದೆ.

ರಾಮ್ ಚರಣ್

ನಟ ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋ ಎನ್ನುವ ಖ್ಯಾತಿ ಅವರಿಗೆ ಇದೆ. ಅವರು ಲಕ್ಷುರಿ ವಾಚ್​​ಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಕೋಟಿ ರೂಪಾಯಿ ಬೆಲೆ ಬಾಳೋ ವಾಚ್​ಗಳು ಇವೆ.

ಟೊವಿನೋ ಥಾಮಸ್

ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ಅವರು ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಟ್ರೆಕ್ಕಿಂಗ್ ಬಗ್ಗೆ ಅವರಿಗೆ ಸಾಕಷ್ಟು ಕ್ರೇಜ್ ಇದೆ. ಅವರು ಬ್ರೇಕ್​ನಲ್ಲಿ ಗುಡ್ಡ-ಬೆಟ್ಟ ಏರುತ್ತಾರೆ.

ದುಲ್ಕರ್ ಸಲ್ಮಾನ್

ಹ್ಯಾಂಡ್ಸಮ್ ಹಂಕ್ ದುಲ್ಕರ್ ಸಲ್ಮಾನ್ ಅವರಿಗೆ ಕಾರ್ ಬಗ್ಗೆ ಕ್ರೇಜ್ ಇದೆ. ಅವರ ಬಳಿ ಹಲವು ಕಾರುಗಳ ಕಲೆಕ್ಷನ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ