ಕೆನಡಾನಲ್ಲಿ ‘45’ ಅಬ್ಬರ, ಟಿಕೆಟ್ ಸೋಲ್ಡ್ ಔಟ್, ಮುಂಚಿತವಾಗಿ ರಿಲೀಸ್

45 Kannada movie: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕ್ರೇಜ್ ಹುಟ್ಟಿಸಿದ್ದು, ಕೆನಡಾನಲ್ಲಿ ಸಿನಿಮಾದ ಟಿಕೆಟ್​​ಗಳು ಮುಂಗಡವಾಗಿ ಮಾರಾಟವಾಗುತ್ತಿವೆ. ಇಲ್ಲಿಗಿಂತಲೂ ಮೊದಲೇ ಕೆನಡಾನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಕೆನಡಾನಲ್ಲಿ ‘45’ ಅಬ್ಬರ, ಟಿಕೆಟ್ ಸೋಲ್ಡ್ ಔಟ್, ಮುಂಚಿತವಾಗಿ ರಿಲೀಸ್
ಕನ್ನಡದಲ್ಲಿ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಮೊದಲಿಗೆ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಲಿರುವ ‘45’ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ.

Updated on: Dec 18, 2025 | 6:44 PM

ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾನಲ್ಲಿ ಮೂವರು ಸ್ಟಾರ್ ನಟರುಗಳು ಒಟ್ಟಿಗೆ ನಟಿಸಿರುವುದು ಪ್ರಮುಖ ವಿಶೇಷ ಮಾತ್ರವಲ್ಲದೆ, ಇದು ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಮೊಟ್ಟ ಸಿನಿಮಾ ಆಗಿದೆ. ಸಿನಿಮಾದ ಬಗ್ಗೆ ರಾಜ್ಯದಲ್ಲಿ ಭರ್ಜರಿ ನಿರೀಕ್ಷೆಗಳಿವೆ. ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಿನಿಮಾದ ಕ್ರೇಜ್ ಅದ್ಧೂರಿಯಾಗಿದೆ.

‘45’ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ಇತರೆ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಅರ್ಜುನ್ ಜನ್ಯ ಮತ್ತು ಚಿತ್ರತಂಡ ಮುಂದಾಗಿದೆ. ಅದರಂತೆ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವಾಗಿ ಭಾರತೀಯರು ಹೆಚ್ಚು ಮಂದಿ ಇರುವ ದೇಶಗಳಲ್ಲಿ ಸಿನಿಮಾವನ್ನು ಹೆಚ್ಚಿನ ಸ್ಕ್ರೀನ್​​ಗಳನ್ನು ತೆರೆಗೆ ತರಲಾಗುತ್ತಿದ್ದು, ಅವುಗಳಲ್ಲಿ ಕೆನಡ ಸಹ ಒಂದಾಗಿದೆ.

ಕೆನಡಾನಲ್ಲಿ ‘45’ ಸಿನಿಮಾದ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಮುಂಗಡ ಬುಕಿಂಗ್​​ನಲ್ಲಿಯೇ ಚಿತ್ರಮಂದಿರಗಳು ಹೌಸ್​​ಫುಲ್ ಆಗಿವೆ. ಕೆನಡಾದ ಕನ್ನಡ ಸಿನಿಮಾ ಪ್ರೇಮಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದು, ಸಿನಿಮಾ ಸೋಲ್ಡ್ ಔಟ್ ಆಗಿದೆ. ಅದು ಮಾತ್ರವೇ ಅಲ್ಲದೆ, ಕೆನಡಾನಲ್ಲಿ ಭಾರತಕ್ಕಿಂತಲೂ ಎರಡು ದಿನ ಮುಂಚಿತವಾಗಿ ‘45’ ಸಿನಿಮಾ ಬಿಡುಗಡೆ ಆಗಲಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ:‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

ಭಾರತದಲ್ಲಿ ‘45’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಆದರೆ ಕೆನಡಾನಲ್ಲಿ ಡಿಸೆಂಬರ್ 23 ರಂದೇ ‘45’ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲಿ ಕ್ರಿಸ್​​ಮಸ್ ರಜೆಗಳು ಚಾಲ್ತಿಯಲ್ಲಿದ್ದು, ಇದು ‘45’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನೀಡುವ ಸಾಧ್ಯತೆ ಇದೆ.

‘45’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನವೂ ಅವರದ್ದೇ ಆಗಿದೆ. ಸಿನಿಮಾ, ಮಾನವ-ದಾನವ ಮತ್ತು ದೇವರು ಕುರಿತ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ. ಅದರಲ್ಲೂ ಶಿವಣ್ಣರ ಮೋಹಿನಿ ಅವತಾರವಂತೂ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ