‘ಭೀಮ’ ಚಿತ್ರದಿಂದ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್ಗಳಿಗೆ ಮರುಜೀವ
ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚುನಾವಣೆ, ಐಪಿಎಲ್ ಕಾರಣದಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಚಿತ್ರರಂಗಕ್ಕೆ ಮತ್ತೆ ಕಳೆ ಬರುತ್ತಿದೆ. ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್ಗಳು ಈಗ ಮರುಜೀವ ಪಡೆಯುತ್ತಿವೆ.
ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕ ಜಗದೀಶ್ ಗೌಡ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ‘ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಬಿ+, ಸಿ+ ಸ್ಟುಡೆಂಟ್. ನಾನು ಎ+ ತೆಗೆದುಕೊಳ್ಳಬೇಕು ಎಂದು ನನ್ನ ತಂದೆ ನಿರೀಕ್ಷಿಸುತ್ತಿದ್ದರು. ಕೊನೆಗೂ ದುನಿಯಾ ವಿಜಯ್ ಅವರು ‘ಎ’ ಪ್ರಮಾಣಪತ್ರ ಕೊಡಿಸಿದ್ದಾರೆ. ಅವರ ಈ ಮೊದಲ ಚಿತ್ರ ಸಲಗ ಕೂಡ ಎ ಸರ್ಟಿಫಿಕೇಟ್ ಆಗಿತ್ತು. ಈ ಸಿನಿಮಾ ಕೆಲ ವರ್ಷಗಳ ಹಿಂದೆ ರಿಲೀಸ್ ಆಗಿ ಗೆದ್ದಿತ್ತು’ ಎಂದಿದ್ದಾರೆ ನಿರ್ಮಾಪಕ ಜಗದೀಶ್ ಗೌಡ.
ಭೀಮ ಸಿನಿಮಾ ಬೆಂಗಳೂರಿನ ಸ್ಲಮ್ಗಳಲ್ಲಿ ಶೂಟ್ ಮಾಡಲಾಗಿದೆ. 125 ದಿನಗಳ ಕಾಲ ಸಿನಿಮಾ ಶೂಟ್ ಮಾಡಲಾಗಿದೆ. ಬಹುತೇಕ ಸಿನಿಮಾಗಳು ನಿಜವಾದ ಲೊಕೇಶನ್ಗಳಲ್ಲಿ ಶೂಟ್ ಮಾಡಲಾಗಿದೆ. ಈ ಸಿನಿಮಾ ಮೂಲಕ ಹಲವು ಹೊಸ ಮುಖಗಳನ್ನು ದುನಿಯಾ ವಿಜಯ್ ಪರಿಚಯಿಸುತ್ತಿದ್ದಾರೆ. ಬ್ಲ್ಯಾಕ್ ಡ್ರಾಗನ್ ಮಂಜು ಹೆಸರಿನ ವ್ಯಕ್ತಿ ಈ ಚಿತ್ರದ ಮೂಲಕ ವಿಲನ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ‘ಭೀಮ’ ರಿಲೀಸ್ ದಿನಾಂಕ ಘೋಷಿಸಿದ ದುನಿಯಾ ವಿಜಯ್
‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಭೈರಾಗಿ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಇವರ ಜೊತೆ ಜಗದೀಶ್ ಗೌಡ ಕೂಡ ಕೈ ಜೋಡಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಸೇನಾ ಅವರು ಈ ಚಿತ್ರವನ್ನು ಛಾಯಾಗ್ರಾಹಣ ಮಾಡಿದ್ದರು, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.