ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.  

ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?
ಪಿವಿಆರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 03, 2024 | 8:07 AM

ಚುನಾವಣೆ, ಐಪಿಎಲ್ ಕಾರಣಕ್ಕೆ ಚಿತ್ರರಂಗ ಮಂಕಾಗಿದೆ. ರಾಜಕೀಯದ ಅಬ್ಬರದ ನಡುವೆ ಸಿನಿಮಾ ರಿಲೀಸ್ ಮಾಡೋ ಸಾಹಸಕ್ಕೆ ದೊಡ್ಡ ಬಜೆಟ್ ಚಿತ್ರಗಳು ಯಾವುದೇ ಕಾರಣಕ್ಕೂ ಮುಂದಾಗುವುದಿಲ್ಲ. 600 ಕೋಟಿ ರೂಪಾಯಿ ಬಜೆಟ್​ನಲ್ಲಿ ರೆಡಿ ಆದ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD Movie) ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಬಿಡುಗಡೆ ಆಗಿಲ್ಲ. ಹೀಗಾಗಿ, ಥಿಯೇಟರ್​ಗಳು ಸೊರಗಿವೆ. ಇದನ್ನು ದೂರವಾಗಿಸಲು ಹಳೆಯ ಚಿತ್ರಗಳನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಉಪೇಂದ್ರ ನಟನೆಯ ‘ಎ’, ಪುನೀತ್ ರಾಜ್​ಕುಮಾರ್ ನಟನೆಯ ಕೆಲವು ಸಿನಿಮಾಗಳು, ತೆಲುಗಿನಆರ್​ಆರ್​ಆರ್​’, ಇಮ್ತಿಯಾಜ್ ಅಲಿ ಅವರ ‘ರಾಕ್​ಸ್ಟಾರ್’ ಸೇರಿ ಅನೇಕ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ. ಆದರೆ, ಇದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಕೆಲವರ ಅಭಿಪ್ರಾಯ. ಇದರ ಜೊತೆಗೆ ಇದು ಹೊಸ ಟ್ರೆಂಡ್ ಕೂಡ ಅಲ್ಲ.

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.

ಥಿಯೇಟರ್ ಸೊರಗಲು ಕಾರಣಗಳೇನು?

ಕಳೆದ ಕೆಲವು ತಿಂಗಳಿಂದ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಂದಿಲ್ಲ. ಬಂದರೂ ಅವು ಗೆದ್ದು ಬೀಗಿಲ್ಲ. ಕಳೆದ ಎರಡು ತಿಂಗಳು ಐಪಿಎಲ್ ಹಬ್ಬ ಇತ್ತು. ಈ ವೇಳೆ ಜನರು ಐಪಿಎಲ್ ವೀಕ್ಷಣೆಗೆ ಹೆಚ್ಚು ಒತ್ತು ಕೊಟ್ಟರು. ಸಂಜೆ ವೇಳೆ ಜನರು ಐಪಿಎಲ್ ನೋಡುತ್ತಾ ಸಮಯ ಕಳೆದರು. ಇನ್ನು, ಲೋಕಸಭೆ ಚುನಾವಣೆ ಅಬ್ಬರವೂ ಈ ಸಂದರ್ಭದಲ್ಲಿ ಜೋರಾಗಿಯೇ ಇತ್ತು.

ರೀ-ರಿಲೀಸ್ ಟ್ರೆಂಡ್

ಕನ್ನಡದ ‘ಓಂ’ ಚಿತ್ರ ನೂರಾರು ಬಾರಿ ಥಿಯೇಟರ್​ನಲ್ಲಿ ಮರು ಬಿಡುಗಡೆ ಆಗಿದೆ. ಪುನೀತ್ ಜನ್ಮದಿನದ ಸಂದರ್ಭದಲ್ಲಿ ಅವರ ನಟನೆಯ ಚಿತ್ರಗಳನ್ನು ಮರು ಬಿಡುಗಡೆ  ಮಾಡಲಾಗಿದೆ. ಈ ಮೊದಲು ರೀ-ರಿಲೀಸ್ ಟ್ರೆಂಡ್ ಇತ್ತು. ಆದರೆ, ಅದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಕಾಟಾಚಾರಕ್ಕಲ್ಲ

ಸಿನಿಮಾ ರೀ-ರಿಲೀಸ್ ಮಾಡುವಾಗ ಅದಕ್ಕೆ ದೊಡ್ಡ ಪುಶ್ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರ್ಮಾಪಕರು ಹಾಗೂ ಹಂಚಿಕೆದಾರರು ಪ್ರಯತ್ನ ಮಾಡಬೇಕು. ಟಿಕೆಟ್ ದರವನ್ನು ಜನರಿಗೆ ಕೈಗೆಟಕುವ ರೀತಿಯಲ್ಲಿ ಇಡಬೇಕು. ಆಗ, ರೀ-ರಿಲೀಸ್ ಆಗಿದ್ದಕ್ಕೂ ಸಾರ್ಥಕತೆ ಇರುತ್ತದೆ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

‘ಸಿನಿಮಾಗಳನ್ನು ರೀ-ರಿಲೀಸ್ ಮಾಡೋದು ಎಲ್ಲದಕ್ಕೂ ಪರಿಹಾರ ಅಲ್ಲ. ಆದರೆ, ಒಂದು ಮಟ್ಟಕ್ಕೆ ಜನರು ಥಿಯೇಟರ್​ಗೆ ಬರುತ್ತಾರೆ. ಜನರು ಥಿಯೇಟರ್​ಗೆ ಬರೋಕೆ ಇದು ಒಂದು ಕೂಡ ಕಾರಣ’ ಎಂದಿದ್ದಾರೆ ಸಿನಿಪೋಲೀಸ್ ಸಿಇಒ ದೇವಗನ್​ ಸಂಪತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ