ವ್ಯಾಲೆಂಟೈನ್ಸ್​ ಡೇ ಸನಿಹದಲ್ಲಿ ‘ನಗುವಿನ ಹೂಗಳ ಮೇಲೆ’ ಒಂದು ಡುಯೆಟ್​ ಸಾಂಗ್​

ಅಭಿದಾಸ್ ಹಾಗೂ ಶರಣ್ಯಾ ಶೆಟ್ಟಿ ಅವರು ‘ನಗುವಿನ ಹೂಗಳ ಮೇಲೆ’ ಸಿನಿಮಾದಲ್ಲಿ ನಾಯಕ-ನಾಯಕಿಯರಾಗಿ ಅಭಿಸಿಯಿದ್ದಾರೆ. ಇನ್ನೇನು ವ್ಯಾಲೆಂಟೈನ್ಸ್​ ಡೇ ಹತ್ತಿರದಲ್ಲಿದೆ. ಈ ಸಮಯದಲ್ಲಿ ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ಈ ಡ್ಯುಯೆಟ್​ ಹಾಡು ಎಲ್ಲ ಪ್ರೇಮಿಗಳ ಫೇವರಿಟ್ ಆಗುವ ಲಕ್ಷಣ ತೋರಿಸಿದೆ. ‘ಜೀ ಮ್ಯೂಸಿಕ್​’ ಮೂಲಕ ರಿಲೀಸ್​ ಆದ ಹೊಸ ಹಾಡಿನ ಬಗ್ಗೆ ಇಲ್ಲಿವೆ ವಿವರ..

ವ್ಯಾಲೆಂಟೈನ್ಸ್​ ಡೇ ಸನಿಹದಲ್ಲಿ ‘ನಗುವಿನ ಹೂಗಳ ಮೇಲೆ’ ಒಂದು ಡುಯೆಟ್​ ಸಾಂಗ್​
ಅಭಿದಾಸ್​, ಶರಣ್ಯ ಶೆಟ್ಟಿ

Updated on: Feb 08, 2024 | 6:23 PM

ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ಫೆಬ್ರವರಿ 9ರಂದು ಬಿಡುಗಡೆ ಆಗಲಿದೆ. ಬಿಡುಗಡೆಯ ಹೊಸ್ತಿಲಲ್ಲೇ ಪ್ರೇಕ್ಷಕರ ಕೌತಕ ಮೂಡಿಸು ಸಲುವಾಗಿ ಈ ಸಿನಿಮಾದಿಂದ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ‘ನಗುವಿನ ಹೂಗಳ ಮೇಲೆ’ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಆ ನಿರೀಕ್ಷೆಗಳನ್ನು ಹೆಚ್ಚಿಸುವ ಸಲುವಾಗಿ ಈ ಹಾಡು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರೀತಿ-ಪ್ರೇಮದ ಹಲವು ಮಜಲುಗಳು ಇವೆ. ಅವುಗಳಲ್ಲಿ ಒಂದು ಭಾವದ ಅಭಿವ್ಯಕ್ತಿಯ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ.

ಲವ್ ಪ್ರಾಣ್​ ಮೆಹ್ತಾ ಸಂಗೀತ ನಿರ್ದೇಶನ ಮಾಡಿರುವ ‘ಮುದ್ದು ಬೇಬಿ ಲವ್ ಯೂ ಬೇಬಿ..’ ಎಂದು ಆರಂಭ ಆಗುವ ಈ ಗೀತೆ ‘ಜೀ ಮ್ಯೂಸಿಕ್​ ಸೌತ್​’ ಮೂಲಕ ಬಿಡುಗಡೆ ಆಗಿದೆ. ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ರೂಪುಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ‘ಮುದ್ದು ಬೇಬಿ..’ ಹಾಡು ಬಹುಬೇಗನೆ ಕೇಳುಗರನ್ನು ಸೆಳೆಯುತ್ತಿದೆ.

ಇನ್ನೇನು ವ್ಯಾಲೆಂಟೈನ್ಸ್​ ಡೇ ಹತ್ತಿರದಲ್ಲಿದೆ. ಈ ಸಮಯದಲ್ಲಿ ಈ ಡ್ಯುಯೆಟ್​ ಹಾಡು ಎಲ್ಲ ಪ್ರೇಮಿಗಳ ಫೇವರಿಟ್ ಆಗುವ ಲಕ್ಷಣ ತೋರಿಸಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಸಣ್ಣ ಸಣ್ಣ ವಿಚಾರಗಳನ್ನೂ ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶಿಸಿದ್ದಾರಂತೆ. ಅದರಲ್ಲಿಯೂ ಕಥೆಯ ಓಘಕ್ಕೆ ತಕ್ಕಂತಹ ಹಾಡುಗಳನ್ನು ರೂಪಿಸಲು ಅವರು ಪ್ರಯತ್ನಿಸಿದ್ದಾರೆ. ಅದರ ಭಾಗವಾಗಿ ಪಂಜಾಬ್ ಮೂಲದ ಫೇಮಸ್​ ಸಂಗೀತ ನಿರ್ದೇಶಕ ಲವ್ ಪ್ರಾಣ್​ ಮೆಹ್ತಾ ಮಾತ್ರವಲ್ಲದೇ, ಹಲವು ರಾಜ್ಯಗಳ ಗಾಯಕರನ್ನೂ ಒಂದೆಡೆ ಸೇರಿಸಿದ್ದಾರೆ.

ಇದನ್ನೂ ಓದಿ: ಕಣ್ಸನ್ನೆ ಹುಡುಗಿಯ ಕನ್ನಡ ಹಾಡು; ‘ವಿಷ್ಣುಪ್ರಿಯ’ ಚಿತ್ರದ ರೊಮ್ಯಾಂಟಿಕ್ ಸಾಂಗ್​ ನೋಡಿ..

ನಿರ್ದೇಶಕರ ಪರಿಶ್ರಮ, ಕನಸಿನ ಪ್ರತಿಫಲವಾಗಿ ‘ನಗುವಿನ ಹೂಗಳ ಮೇಲೆ’ ಚಿತ್ರದ ಒಂದೊಂದು ಹಾಡುಗಳೂ ಒಂದೊಂದು ವಿಶೇಷತೆಯನ್ನು ಹೊತ್ತು ಬಂದಿವೆ. ಇದೀಗ ಬಿಡುಗಡೆ ಆಗಿರುವ ಹಾಡಿನಲ್ಲಿಯೂ ಆ ರಿತಿಯ ಛಾಯೆ ಕಾಣಿಸಿದೆ. ಇದು ಪರಿಶುದ್ಧ ಪ್ರೇಮ ಕಥನದ ಭೂಮಿಕೆಯಲ್ಲಿ ತೆರೆದುಕೊಳ್ಳುವ ಬದುಕಿಗೆ ಹತ್ತಿರವಾದ ಸಿನಿಮಾ ಆಗಲಿದೆ ಎಂದು ತಂಡ ಭರವಸೆ ಇಟ್ಟುಕೊಂಡಿದೆ. ಚಂದನ್ ಪಿ. ಸಂಕಲನ ಹಾಗೂ ಟೈಗರ್ ಶಿವು ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

‘ಮುದ್ದು ಬೇಬಿ ಲವ್ ಯೂ ಬೇಬಿ..’ ಹಾಡು:

‘ನಗುವಿನ ಹೂಗಳ ಮೇಲೆ’ ಚಿತ್ರವನ್ನು ಟಾಲಿವುಡ್​ನ ಖ್ಯಾತ ನಿರ್ಮಾಪಕ ಕೆ.ಕೆ. ರಾಧಾ ಮೋಹನ್ ಅವರು ‘ಶ್ರೀ ಸತ್ಯಸಾಯಿ ಆರ್ಟ್ಸ್​’ ಬ್ಯಾನರ್​ ಮೂಲಕ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಹಾಗೂ ಶರಣ್ಯಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಾಯಕ-ನಾಯಕಿಯರಾಗಿ ಅಭಿಸಿಯಿದ್ದಾರೆ. ಅಭಿಷೇಕ್ ಐಯಂಗಾರ್, ಬಲ ರಾಜವಾಡಿ, ಆಶಾ ಸುಜಯ್, ಹರ್ಷಿತ್ ಗೌಡ, ಗಿರೀಶ್ ನಂಜಪ್ಪ, ಹರ್ಷ ಗೋ ಭಟ್, ಹರೀಶ್ ಚೌಹಾಣ್ ಮುಂತಾದವರ ನಟಿಸಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಸಿಮಾಗಿದೆ. ಅಭಿಷೇಕ್ ಐಯಂಗಾರ್ ಸಂಭಾಷಣೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us