Abhishek Ambareesh Engagement Photo: ನೆರವೇರಿತು ಅಭಿಷೇಕ್ ಅಂಬರೀಷ್-ಅವಿವಾ ನಿಶ್ಚಿತಾರ್ಥ; ಕ್ಯೂಟ್ ಜೋಡಿಗೆ ಶುಭ ಹಾರೈಕೆ
Abhishek Ambareesh | Aviva Bidapa: ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಜೊತೆಯಾಗಿರುವ ಮೊದಲ ಫೋಟೋ ಲಭ್ಯವಾಗಿದೆ. ನಿಶ್ಚಿತಾರ್ಥದ ಬಳಿಕ ಈ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
ನಟ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ (Aviva Bidapa) ಅವರ ನಿಶ್ಚಿತಾರ್ಥ ಇಂದು (ಡಿ.11) ನೆರವೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಈ ಶುಭ ಕಾರ್ಯ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಜೊತೆಯಾಗಿರುವ ಮೊದಲ ಫೋಟೋ ಲಭ್ಯವಾಗಿದೆ. ಎಂಗೇಜ್ಮೆಂಟ್ (Abhishek Ambareesh Engagement) ಬಳಿಕ ಈ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ‘ರೆಬಲ್ ಸ್ಟಾರ್’ ಅಂಬರೀಷ್ ಹಾಗೂ ಸುಮಲತಾ ಪುತ್ರನ ನಿಶ್ಚಿತಾರ್ಥದ ಕುರಿತು ಹಲವು ದಿನಗಳಿಂದ ಸುದ್ದಿ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಕುಟುಂಬದವರು ಮಾಹಿತಿ ಹಂಚಿಕೊಂಡಿರಲಿಲ್ಲ. ಇಂದು ಅದ್ದೂರಿಯಾಗಿ ಎಂಗೇಜ್ಮೆಂಟ್ ನಡೆದಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಇಬ್ಬರ ನಡುವೆ ಆಪ್ತತೆ ಬೆಳೆದು ಈಗ ನಿಶ್ಚಿತಾರ್ಥದ ಹಂತಕ್ಕೆ ಬಂದಿದೆ. ಎರಡೂ ಕುಟುಂಬದ ಪ್ರಮುಖರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ನಡೆದಿದೆ.
ಒಂದಷ್ಟು ದಿನಗಳ ಹಿಂದೆಯೇ ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥದ ಕುರಿತಂತೆ ಸುದ್ದಿ ಹರಡಿತ್ತು. ಆದರೆ ಅದನ್ನು ಸುಮಲತಾ ಅಂಬರೀಷ್ ಅವರು ತಳ್ಳಿ ಹಾಕಿದ್ದರು. ಎಂಗೇಜ್ಮೆಂಟ್ ತಯಾರಿ ನಡೆಯುತ್ತಿದ್ದರೂ ಕೂಡ ‘ಇದೆಲ್ಲ ಊಹಾಪೋಹ’ ಎಂದು ಅವರು ಹೇಳಿದ್ದರು. ಆದರೆ ಇಂದು ಸದ್ದಿಲ್ಲದೇ ನಿಶ್ಚಿತಾರ್ಥ ನೆರವೇರಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಿನಿಮಾ, ರಾಜಕೀಯ ಕ್ಷೇತ್ರದ ಕೆಲವೇ ಕೆಲವು ಗಣ್ಯರು ಈ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ. ಎಂಗೇಜ್ಮೆಂಟ್ ಫೋಟೋ ಹಾಗೂ ವಿಡಿಯೋ ಕೂಡ ಲಭ್ಯವಾಗಿದ್ದು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
2019ರಲ್ಲಿ ತೆರೆಕಂಡ ‘ಅಮರ್’ ಸಿನಿಮಾ ಮೂಲಕ ಅಭಿಷೇಕ್ ಅಂಬರೀಷ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸೂರಿ ನಿರ್ದೇಶನ ಮಾಡುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಹಾಗೂ ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದು, ಈ ಚಿತ್ರಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Sun, 11 December 22