ಅಭಿಷೇಕ್-ಅವಿವಾ ಭರ್ಜರಿ ಬೀಗರೂಟಕ್ಕೆ ತಯಾರಿ, 7 ಟನ್ ಮಟನ್, 7 ಟನ್ ಚಿಕನ್, ಅಡುಗೆ ಏನೇನು?

Abhishek-Aviva: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಅವರ ಮದುವೆ ಬೀಗರೂಟ ಕಾರ್ಯಕ್ರಮ ಮಂಡ್ಯದಲ್ಲಿ ಬಹುಅದ್ಧೂರಿಯಾಗಿ ನಡೆಯಲಿದೆ. ಸುಮಾರು 50 ಸಾವಿರ ಜನರಕ್ಕೆ ನಾನ್ ವೆಜ್ ಊಟಕ್ಕೆ ತಯಾರಿ ಆರಂಭವಾಗಿದೆ. ಮೆನುವಿನಲ್ಲಿ ಏನೇನಿದೆ?

ಅಭಿಷೇಕ್-ಅವಿವಾ ಭರ್ಜರಿ ಬೀಗರೂಟಕ್ಕೆ ತಯಾರಿ, 7 ಟನ್ ಮಟನ್, 7 ಟನ್ ಚಿಕನ್, ಅಡುಗೆ ಏನೇನು?
ಅಭಿ-ಅವಿವಾ
Follow us
ಮಂಜುನಾಥ ಸಿ.
|

Updated on:Jun 12, 2023 | 2:54 PM

ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ (Aviva Bidappa) ಮದುವೆ ಇತ್ತೀಚೆಗಷ್ಟೆ ಭಾರಿ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಮಂಡ್ಯದ ಗಂಡು ಎಂದು ಕರೆಸಿಕೊಂಡಿದ್ದ ಅಂಬರೀಶ್ (Ambareesh) ಕುಟುಂಬಕ್ಕೆ ಮಂಡ್ಯದೊಟ್ಟಿಗಿನ ನಂಟು ಬಹು ಆತ್ಮೀಯವಾದುದು ಹಾಗಾಗಿ ಅಭಿಷೇಕ್-ಅವಿವಾರ ಮದುವೆ ಬೀಗರೂಟ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಆಯೋಜಿಸಲಾಗಿದೆ. ಮದುವೆಯಷ್ಟೆ ಅದ್ಧೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು ಭಾರಿ ಸಂಖ್ಯೆಯ ಜನರಿಗೆ ಭರ್ಜರಿ ಮಾಂಸದೂಟ ಹಾಕಿಸಲು ತಯಾರಿ ಈಗಾಗಲೇ ಆರಂಭವಾಗಿದೆ.

ಜೂನ್ 16ರಂದು ನಡೆಯಲಿರುವ ಬೀಗರೂಟಕ್ಕೆ ಭರ್ಜರಿ ತಯಾರಿ ಆರಂಭವಾಗಿದೆ. ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆದಿದ್ದ ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೀಗರೂಟಕ್ಕೆ ಸಿದ್ಧತೆ ಆರಂಭವಾಗಿವೆ. ಸುಮಾರು 15 ಎರಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್​ಗಳನ್ನು ಹಾಕಲಾಗುತ್ತಿದ್ದು, ಎಲ್ಲರಿಗೂ ನೆರಳಿನಲ್ಲಿ ಕುಳಿತು ಆರಾಮದಿಂದ ಊಟ ಸೇವಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದ್ದು, ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್​ಗಳನ್ನು ಮಾಡಲಾಗುತ್ತಿದೆ.

ಜನರು ನೂತನ ವಧು ವರರಿಗೆ ಶುಭ ಕೋರಲು ವ್ಯವಸ್ಥೆ ಇರುವ ಬಗ್ಗೆ ಸ್ಪಷ್ಟತೆ ಇಲ್ಲ. ಬೀಗರೂಟ ನಡೆಯುವ ಸಮಯದಲ್ಲಿಯೇ ನೂತನ ವಧು-ವರರು ಜನರಿಗೆ ನಮಸ್ಕಾರ ತಿಳಿಸಿ ಅಲ್ಲಿಯೇ ಅವರ ಅಭಿನಂದನೆ ಸ್ವೀಕರಿಸಲಿದ್ದಾರೆ ವಧು-ವರರಿಗಾಗಿ ವೇದಿಕೆ ವ್ಯವಸ್ಥೆ ಮಾಡಿಲ್ಲ ಎನ್ನಲಾಗುತ್ತಿದೆ. ಭಾರಿ ಸಂಖ್ಯೆಯ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ವೇದಿಕೆ ಮಾಡಿ ವಧು-ವರರನ್ನು ನಿಲ್ಲಿಸಿದರೆ ನೂಕು-ನುಗ್ಗಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಅಭಿಷೇಕ್-ಅವಿವಾ ವಿವಾಹ ಆರತಕ್ಷತೆ ಅದ್ಧೂರಿಯಾಗಿದೆ, ಎಲ್ಲವೂ ಅದ್ಭುತವಾಗಿದೆ ಆದರೆ ಒಂದೇ ಒಂದು ಕೊರತೆ

ಇನ್ನು ಬೀಗರೂಟಕ್ಕೆ ಖಾದ್ಯಗಳನ್ನು ತಯಾರಿಸಲು ಈಗಾಗಲೇ ಪಟ್ಟಿ ತಯಾರಾಗಿದ್ದು ಸಾಮಗ್ರಿಗಳ ಖರೀದಿ ಕಾರ್ಯವೂ ಮುಗಿದಿದೆ ಎನ್ನಲಾಗಿದೆ. ಬೀಗರೂಟಕ್ಕೆ ಭರ್ಜರಿ ಬಾಡೂಟದ ಮೆನು ತಯಾರಾಗಿದೆ. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಅನ್ನು ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ. ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ, ವಾಟರ್ ಬಾಟಲ್​ಗಳು ಇರಲಿವೆ.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಜೂನ್ 5ರಂದು ಅದ್ಧೂರಿಯಾಗಿ ವಿವಾಹವಾದರು. ಅದರ ಮರುದಿನವೇ ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಸಹ ನಡೆಯಿತು. ತೆಲುಗು, ತಮಿಳು, ಬಾಲಿವುಡ್​ನಿಂದ ಹಲವು ತಾರೆಯರು ಅಭಿಷೇಕ್-ಅವಿವಾ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಸಹ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೂತನ ವಧು-ವರರನ್ನು ಹರಸಿದರು. ಅದಾದ ಬಳಿಕ ಅದ್ಧೂರಿ ಸಂಗೀತ್ ಪಾರ್ಟಿಯನ್ನು ಸಹ ಅರೇಂಜ್ ಮಾಡಲಾಗಿತ್ತು, ನಟ ಯಶ್ ಸೇರಿದಂತೆ ಚಿತ್ರರಂಗದ ಪ್ರಮುಖರು, ಅಂಬರೀಶ್ ಕುಟುಂಬದ ಆಪ್ತರು ಈ ಪಾರ್ಟಿಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Mon, 12 June 23

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ