AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂದಿದೆ ರಾಜ್ ಕಪ್, ವಿದೇಶದಲ್ಲಿ ನಡೆಯಲಿವೆ ಪಂದ್ಯಗಳು

Dr Raj Cup: ಮತ್ತೆ ಬಂದಿದೆ ಡಾ ರಾಜ್ ಕಪ್. ಸ್ಯಾಂಡಲ್​ವುಡ್ ನಟರು, ತಂತ್ರಜ್ಞರ ಈ ಕ್ರಿಕೆಟ್ ಟೂರ್ನಿ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಜೂನ್ 17ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಮತ್ತೆ ಬಂದಿದೆ ರಾಜ್ ಕಪ್, ವಿದೇಶದಲ್ಲಿ ನಡೆಯಲಿವೆ ಪಂದ್ಯಗಳು
ರಾಜ್ ಕಪ್
ಮಂಜುನಾಥ ಸಿ.
|

Updated on: Jun 12, 2023 | 9:37 PM

Share

ಮತ್ತೆ ಕ್ರಿಕೆಟ್ ಕಾರಣಕ್ಕೆ ಸ್ಯಾಂಡಲ್​ವುಡ್ (Sandalwood) ತಾರೆಯರು ಒಂದಾಗುತ್ತಿದ್ದಾರೆ. ಚಂದನವನದ ತಾರೆಯರು ವೃತ್ತಿಪರವಾಗಿ ನಟರಾಗಿರುವ ಜೊತೆಗೆ ವೃತ್ತಿಪರ ಕ್ರಿಕೆಟಿಗರೂ ಆಗಿಬಿಟ್ಟಿದ್ದಾರೆ. ಕಳೆದ ವರ್ಷದಿಂದ ಸತತವಾಗಿ ಒಂದರ ಹಿಂದೊಂದು ಕ್ರಿಕೆಟ್ ಟೂರ್ನಿಗಳಲ್ಲಿ (Cricket Tournament) ಚಂದನವನದ (Sandalwood) ತಾರೆಯರು ಆಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಬೀಸಲು ಚಂದನವನದ ತಾರೆಯರು ತಯಾರಾಗಿದ್ದಾರೆ. ಹಲವು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಡಾ ರಾಜ್ ಕಪ್ (Raj Cup) ಮತ್ತೊಮ್ಮೆ ಬಂದಿದ್ದು ಈ ಬಾರಿ ಅದ್ಧೂರಿಯಾಗಿ ಕ್ರಿಕೆಟ್ ಟೂರ್ನಿಯನ್ನು ನಡೆಸಲು ಆಯೋಜಕರು ತಯಾರಾಗಿದ್ದಾರೆ.

ಡಾ ರಾಜ್ ಕಪ್ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆದಿದ್ದು, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಟರಾದ ಅನಿರುದ್ಧ, ನಟ ರವಿಶಂಕರ್, ರಾಜಾಹುಲಿ ಹರ್ಷ, ನಾಗಕಿರಣ್, ಪವನ್ ಒಡೆಯರ್, ನಿರ್ದೇಶಕ ಚೇತನ್ ಹಾಗೂ ಸಿಂಪಲ್ ಸುನಿ ಅವರುಗಳು ಕ್ರೀಡಾಕೂಟದ ಬಗ್ಗೆ ಮಾಹಿತಿ ಹಂಚಿಕೊಂಡರು. ಕಳೆದ ಬಾರಿಗಿಂತಲೂ ವ್ಯವಸ್ಥಿತವಾಗಿ ಹಾಗೂ ಅದ್ಧೂರಿಯಾಗಿ ಈ ಬಾರಿ ಕ್ರೀಡಾಕೂಟ ಆಯೋಜನೆ ಮಾಡುವುದಾಗಿ ಮಾಹಿತಿ ನೀಡಿದರು.

ರಾಜ್ ಕಪ್​ನ ಆರನೇ ಸೀಸನ್​ ನಡೆಸಲು ತಯಾರಾಗಿದ್ದು. ರಾಜೇಶ್ ಬ್ರಹ್ಮವರ್ ಅವರ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಜೂನ್ 17ರಂದು ದುಬೈನಲ್ಲಿ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಾದ ಬಳಿಕ ಮೈಸೂರಿನಲ್ಲಿ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದ್ದು, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಲೀಗ್ ಹಂತದ ಪಂದ್ಯಗಳು ದುಬೈ, ಬ್ಯಾಂಕಾಂಕ್, ಶ್ರೀಲಂಕಾ, ಸಿಂಗಪುರ್, ಮಲೇಷ್ಯಾಗಳಲ್ಲಿ ನಡೆಯಲಿದೆ. ಜೊತೆಗೆ ಮೈಸೂರು ಹಾಗೂ ಬೆಂಗಳೂರುಗಳಲ್ಲಿಯೂ ಪಂದ್ಯಗಳು ನಡೆಯಲಿವೆ. ವಿದೇಶದಲ್ಲಿ ಪಂದ್ಯಾವಳಿಗಳನ್ನು ನೆಡೆಸಬೇಕು ಎಂಬುದು ಅಪ್ಪು ಅವರ ಆಸೆಯಾಗಿತ್ತಂತೆ, ಹಾಗಾಗಿ ಅವರ ಕನಸನ್ನು ನನಸು ಮಾಡುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಆಯೋಜಕರು ಹೇಳಿದ್ದಾರೆ.

ಇದನ್ನೂ ಓದಿ:Richiee Kannada Movie: ಚಂದನವನದಲ್ಲಿ ಮತ್ತೆ ಕೇಳಿಸ್ತಿದೆ ‘ರಿಚ್ಚಿ’ ಹೆಸರು; ಕುನಾಲ್​ ಗಾಂಜಾವಾಲಾ ಹಾಡಿದ ಗೀತೆಯಿಂದ ಹೆಚ್ಚಲಿದೆ ಸದ್ದು

ಡಾ. ರಾಜ್​ ಕಪ್​ನಲ್ಲಿ ಡಾಲಿ ಧನಂಜಯ್​, ಅನಿರುದ್ದ್, ಮದರಂಗಿ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ರಾಜುಗೌಡ ಅವರ ನೇತೃತ್ವದಲ್ಲಿ ತಂಡಗಳು ಕ್ರಿಕೆಟ್ ಆಡಲಿದ್ದು ಕಪ್​ಗಾಗಿ ಸೆಣೆಸಲಿವೆ. ಸಿಸಿಎಲ್​ನಲ್ಲಿ ಆಡಿ ಅನುಭವವಿರುವ ಹಲವು ಆಟಗಾರರು ಈ ಪಂದ್ಯಾವಳಿಗಳಲ್ಲಿಯೂ ಭಾಗಿಯಾಗಲಿದ್ದಾರೆ.

ಜೂನ್ 17ರಂದು ನಡೆವ ಹರಾಜಿನ ಬಳಿಕ ಯಾವ ನಟರ ನಾಯಕತ್ವದ ತಂಡಕ್ಕೆ ಯಾವ ನಟರು ಆಡಲಿದ್ದಾರೆ ಎಂಬುದು ಗೊತ್ತಾಗಲಿದೆ. ಈ ತಂಡಗಳಲ್ಲಿ ಕೇವಲ ನಟರು ಮಾತ್ರವೇ ಅಲ್ಲದೆ ಚಿತ್ರರಂಗದ ತಂತ್ರಜ್ಞರು ಸಹ ಇರಲಿದ್ದಾರೆ ಎಂಬುದು ವಿಶೇಷ. ಸಿಸಿಎಲ್ ನಲ್ಲಿ ಕೇವಲ ನಟರುಗಳಷ್ಟೆ ಆಡುತ್ತಿದ್ದರು. ರಾಜ್ ಕಪ್​ನಲ್ಲಿ ನಟರು, ತಂತ್ರಜ್ಞರು ಒಟ್ಟಿಗೆ ಆಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ