AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸ್ಯ ಕಲಾವಿದರ ಸಮಾಗಮದಲ್ಲಿ ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಸಿನಿಮಾ; ಸದ್ಯದಲ್ಲೇ ಬಿಡುಗಡೆ

Sandalwood News: ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೀರ್ಷಿಕೆಯಿಂದಲೇ ಈ ಚಿತ್ರ ಗಮನ ಸೆಳೆಯುತ್ತಿದೆ.

ಹಾಸ್ಯ ಕಲಾವಿದರ ಸಮಾಗಮದಲ್ಲಿ 'ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ' ಸಿನಿಮಾ; ಸದ್ಯದಲ್ಲೇ ಬಿಡುಗಡೆ
‘ಆನ್​ಲೈನ್​ ಮದುವೆ ಆಫ್​ಲೈನ್​ ಶೋಭನ’ ಚಿತ್ರತಂಡ
ಮದನ್​ ಕುಮಾರ್​
|

Updated on: Jun 12, 2023 | 1:40 PM

Share

ಸಿನಿಮಾದಲ್ಲಿ ಒಂದಿಬ್ಬರು ಕಾಮಿಡಿ ಕಲಾವಿದರು (Comedy Actors) ಇದ್ದರೆ ಪ್ರೇಕ್ಷಕರಿಗೆ ಸಖತ್​ ಮನರಂಜನೆ ಸಿಗುತ್ತದೆ. ಇನ್ನು, ಸಿನಿಮಾದ ಪಾತ್ರವರ್ಗದಲ್ಲಿ ಇರುವ ಎಲ್ಲರೂ ಹಾಸ್ಯ ನಟರೇ ಆಗಿದ್ದರೆ ಜನರಿಗೆ ಭರಪೂರ ಮನರಂಜನೆ ಗ್ಯಾರಂಟಿ. ಆ ರೀತಿ ಒಂದು ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ (Sandalwood) ಮೂಡಿಬರುತ್ತಿದೆ. ಆ ಸಿನಿಮಾದ ಹೆಸರು ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’! ಈ ರೀತಿ ಡಿಫರೆಂಟ್​ ಆದಂತಹ (Online Maduve offline Shobana) ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ‘ಅಪ್ಸರ ಮೂವೀಸ್’ ಸಂಸ್ಥೆ ಮೂಲಕ ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಕೌತುಕ ಕೆರಳಿಸಿದೆ. ಸಾಮಾನ್ಯವಾಗಿ ಇಂಥ ಟೈಟಲ್​ ಇದ್ದರೆ ಫ್ಯಾಮಿಲಿ ಪ್ರೇಕ್ಷಕರು ಆಸಕ್ತಿ ತೋರಿಸದೇ ಇರಬಹುದು. ಆದರೆ ಇದು ಅಪ್ಪಟ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಸಿನಿಮಾಗೆ ನಿರ್ದೇಶನ ಮಾಡಿರುವ ವೇಂಪಲ್ಲಿ ಬಾವಾಜಿ ಅವರಿಗೆ ಚಿತ್ರರಂಗದಲ್ಲಿ ಅನುಭವ ಇದೆ. ಈ ಹಿಂದೆ ‘ಗರ್ಭದಗುಡಿ’ ‘141’, ‘ಅಕ್ಕ ಭಾವ ಬಾಮೈದ’, ‘ನೀನೇನಾ’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈಗ ಅಪ್ಪಟ ಹಾಸ್ಯ ಪ್ರಧಾನ ಕಥಾಹಂದರ ಇರುವ ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಚಿತ್ರವನ್ನು ಅವರು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ವೇಂಪಲ್ಲಿ ಬಾವಾಜಿ ಅವರೇ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಕಾಮಿಡಿ ಕಿಲಾಡಿ ಕುಳ್ಳ ಸಂಜು, ಕುಟುಂಬದವರ ಒಪ್ಪಿಗೆ ಕಾಯುತ್ತಿರುವ ನವ ಜೋಡಿ

ಕಿರುತೆರೆಯಲ್ಲಿ ಜನಮೆಚ್ಚುಗೆ ಗಳಿಸಿದ ‘ಗಿಚ್ಚಿ ಗಿಲಿ ಗಿಲಿ’, ‘ಮಜಾಭಾರತ’, ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಗಪ್ಪ, ಸುಶ್ಮಿತಾ, ಸೀರುಂಡೆ ರಘು, ಗಜೇಂದ್ರ, ರಾಘವಿ ಅಭಿನಯಿಸಿದ್ದಾರೆ. ಅವರ ಜೊತೆ ಯಶಸ್ವಿನಿ, ಚಂದನಾ, ಶರಣ್ಯ ರೆಡ್ಡಿ ಮುಂತಾದವರು ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬಾಲು ಅವರ ಛಾಯಾಗ್ರಹಣ, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ.

ಇದನ್ನೂ ಓದಿ: ನಗುವಿನ ಲೋಕದಲ್ಲಿ ಛಾಪು ಮೂಡಿಸಿದ ಕಾಮಿಡಿ ಕಿಲಾಡಿ ಪ್ರವೀಣ್, 55 ವಿದ್ಯಾರ್ಥಿಗಳಿಗೆ ನಟನೆಯ ಧಾರೆ ಎರೆದ ಹಾಸ್ಯ ಕಲಾವಿದ

ಸೈಬರ್​ ಜಮಾನಾದಲ್ಲಿ ಆನ್​ಲೈನ್​, ಆಫ್​ಲೈನ್​ ಎಂಬ ಪದಗಳು ಸಿಕ್ಕಾಪಟ್ಟೆ ಬಳಕೆ ಆಗುತ್ತದೆ. ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಸಿನಿಮಾ ಕೂಡ ಈಗಿನ ಕಾಲದ ಕಥೆ ಇರುವ ಚಿತ್ರ. ಈಗಿನ ಟ್ರೆಂಡ್​ಗೆ ತಕ್ಕಂತೆ ಕಾಮಿಡಿ ಕಥಾವಸ್ತು ಇದರಲ್ಲಿ ಇರಲಿದೆ. ಇದು ಕೌಟುಂಬಿಕ ಮನರಂಜನಾ ಸಿನಿಮಾ ಕೂಡ ಹೌದು. ಕುಟುಂಬ ಸಮೇತ ಕುಳಿತು ವೀಕ್ಷಿಸುವಂತಹ ಭರಪೂರ ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್​ ಕಹಾನಿ ಇದರಲ್ಲಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’ ಚಿತ್ರದ ಮಾತಿನ ಭಾಗವನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅಲ್ಲದೇ ಹಾಡುಗಳನ್ನು ಆನೇಕಲ್​ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್​ವೊಂದರಲ್ಲಿ ಶೂಟ್​ ಮಾಡಲಾಗಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ