AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಕಾಮಿಡಿ ಕಿಲಾಡಿ ಕುಳ್ಳ ಸಂಜು, ಕುಟುಂಬದವರ ಒಪ್ಪಿಗೆ ಕಾಯುತ್ತಿರುವ ನವ ಜೋಡಿ

Comedy Kiladigalu: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಗೆಳತಿ ಪಲ್ಲವಿ ಬಳ್ಳಾರಿಯನ್ನು ವಿವಾಹವಾಗಿದ್ದಾರೆ. ಆದರೆ ಕುಟುಂಬದವರು ಮದುವೆಗೆ ಸಮ್ಮತಿಸಿಲ್ಲ.

ಮದುವೆಯಾದ ಕಾಮಿಡಿ ಕಿಲಾಡಿ ಕುಳ್ಳ ಸಂಜು, ಕುಟುಂಬದವರ ಒಪ್ಪಿಗೆ ಕಾಯುತ್ತಿರುವ ನವ ಜೋಡಿ
ಸಂಜು-ಪಲ್ಲವಿ
ಮಂಜುನಾಥ ಸಿ.
|

Updated on: Jun 11, 2023 | 2:54 PM

Share

ಕಾಮಿಡಿ ಕಿಲಾಡಿಗಳು (Comedy Kiladigalu) ಶೋನಲ್ಲಿ ಕಿಲಾಡಿ ಕುಳ್ಳನಾಡಿ ಪ್ರಸಿದ್ಧಿ ಪಡೆದಿರುವ ಸಂಜು ಬಸಯ್ಯ (Sanju Basayya) ಅವರು ತಮ್ಮ ಬಹುಸಮಯದ ಗೆಳತಿ ಪಲ್ಲವಿ (Pallavi Ballari) ಎನ್ನುವರೊಟ್ಟಿಗೆ ವಿವಾಹವಾಗಿದ್ದಾರೆ. ಕುಟುಂಬದವರಿಗೆ ತಿಳಿಸದೆ ರಿಜಿಸ್ಟರ್ ಮ್ಯಾರೇಜ್ (Registered Marriage) ಆಗಿರುವ ಈ ಜೋಡಿ ಕುಟುಂಬದವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ಆಗಿ ಈಗಾಗಲೇ ಕೆಲವು ದಿನಗಳು ಆಗಿದ್ದು ಕುಟುಂಬದವರ ಒಪ್ಪಿಗೆ ಪಡೆದ ಬಳಿಕ ಶಾಸ್ತೋಕ್ತವಾಗಿ ಮದುವೆ ಆಗುವುದಾಗಿ ಹೇಳಿದ್ದಾರೆ.

ಕಂಪೆನಿ ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ಕುಬ್ಜ ದೇಹಿ ಸಂಜು ಬಸಯ್ಯ. ತಮ್ಮ ಕುಬ್ಜ ದೇಹಾಕಾರವನ್ನು ಹಾಸ್ಯ ಹೊಮ್ಮಿಸಲು ಬಳಸಿ ಜನಪ್ರಿಯತೆ ಗಳಿಸಿದ್ದರು. ಬಳಿಕ ಕಾಮಿಡಿ ಕಿಲಾಡಿಗಳು ಶೋಗೆ ಆಗಮಿಸಿದ ಸಂಜು ಬಸಯ್ಯ ಅಲ್ಲಿಯೂ ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ. ಸಂಜು ವಿವಾಹವಾಗಿರುವ ಪಲ್ಲವಿ ಬಳ್ಳಾರಿ ಸಹ ಕಲಾವಿದೆಯಾಗಿದ್ದಾರೆ. ಪಲ್ಲವಿ ಈಗಾಗಲೇ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಸಹ ಹಲವು ವರ್ಷಗಳಿಂದ ಪರಿಚಿತರೇ ಆಗಿದ್ದು, ತಮ್ಮ ಪ್ರೇಮವನ್ನು ಇದೀಗ ಮದುವೆಯಾಗಿ ಬದಲಾಯಿಸಿಕೊಂಡಿದ್ದಾರೆ. ಆದರೆ ಇವರ ಮದುವೆಗೆ ಕುಟುಂಬದವರ ಒಪ್ಪಿಗೆ ಇಲ್ಲವಂತೆ.

ತಮ್ಮ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಜು, ”ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ.ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ ನಿಜವಾದ ಪ್ರೀತಿಗೆ ಯಾವುದೇ ಜಾತಿ,ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ” ಎಂದು ಬರೆದುಕೊಂಡಿದ್ದಾರೆ. ತಮ್ಮಿಬ್ಬರ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ