ಟಾಲಿವುಡ್ನಲ್ಲೂ ರಾಬರ್ಟ್ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೈದರಾಬಾದ್ನಲ್ಲಿ ರಾಬರ್ಟ್ ಪ್ರಿ ಲಾಂಚ್ ಇವೆಂಟ್ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಸದ್ಯ ನಟ ದರ್ಶನ್ ಹೈದರಾಬಾದ್ ಏರ್ಪೋರ್ಟ್ಗೆ ಬಂದಿಳಿದಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇಂದು ದರ್ಶನ್ ಹೈದರಾಬಾದ್ನಲ್ಲಿ ನಡೆಯುವ ರಾಬರ್ಟ್ ಪ್ರಿ ಲಾಂಚ್ ಇವೆಂಟ್ನಲ್ಲಿ ಭಾಗವಹಿಸಲಿದ್ದಾರೆ.
ಇಂದು ಸಂಜೆ 6 ಘಂಟೆ ನಂತರ ಹೈದರಾಬಾದ್ನ ಫಿಲ್ಮ್ ನಗರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಟಾಲಿವುಡ್ ನಿರ್ಮಾಪಕರು, ವಿತರಕರು ಭಾಗಿಯಾಗಲಿದ್ದಾರೆ. ಕಲರ್ ಫುಲ್ ಕಾರ್ಯಕ್ರಮದಲ್ಲಿ ಇಂದು ರಾಬರ್ಟ್ ತಂಡ ಕಮಾಲ್ ಮಾಡಲಿದೆ. ರವಿ ಶಂಕರ್, ರವಿ ಕಿಶನ್, ವಿನೋದ್ ಪ್ರಭಾಕರ್, ಜಗಪತಿಬಾಗು, ದೇವರಾಜ್, ಆಶಾ ಭಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೂ ಹಲವು ಅಭಿಮಾನಿಗಳು ಸಹ ಭಾಗಿಯಾಗಲಿದ್ದಾರೆ. ಕರ್ನಾಟಕದಿಂದಲೂ 50 ಬಸ್ಗಳಲ್ಲಿ ದರ್ಶನ್ ಅಭಿಮಾನಿಗಳು ಹೈದರಾಬಾದ್ಗೆ ತೆರಳಿದ್ದಾರೆ ಅನ್ನೋ ಮಾಹಿತಿ ಇದೆ. ದರ್ಶನ್ ಸಿನಿ ಜರ್ನಿಯಲ್ಲಿ ಪರಭಾಷೆ ನೆಲದಲ್ಲಿ ನಡೆಯುತ್ತಿರೋ ಅದ್ದೂರಿ ಕಾರ್ಯಕ್ರಮ ಇದಾಗಿದೆ.
ಇದನ್ನೂ ಓದಿ: D Boss Darshan: ಜಮೀರ್ ಅಹ್ಮದ್ ಖಾನ್ ಭವ್ಯ ಬಂಗಲೆಗೆ ಭೇಟಿ ನೀಡಿದ ಡಿ ಬಾಸ್ ದರ್ಶನ್