ಹುಟ್ಟುಹಬ್ಬದ ದಿನ ಅಂಬಿ ಅಪ್ಪಾಜಿಯ ನೆನೆದ ದರ್ಶನ್

Darshan Thoogudeepa: ಅಂಬರೀಶ್ ಕುಟುಂಬದ ಮನೆ ಮಗನೆಂದೇ ಗುರುತಿಸಿಕೊಂಡಿದ್ದರು ದರ್ಶನ್. ಆದರೆ ರೇಣುಕಾ ಸ್ವಾಮಿ ಪ್ರಕರಣದ ಬಳಿಕ ದರ್ಶನ್ ಹಾಗೂ ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದಂತಿದೆ. ಭಿನ್ನಾಭಿಪ್ರಾಯದ ನಡುವೆಯೂ ಸಹ ನಟ ದರ್ಶನ್, ಅಂಬರೀಶ್ ಅವರನ್ನು ಮರೆತಿಲ್ಲ. ಅವರ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಸಂದೇಶ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಟ್ವೀಟ್​...

ಹುಟ್ಟುಹಬ್ಬದ ದಿನ ಅಂಬಿ ಅಪ್ಪಾಜಿಯ ನೆನೆದ ದರ್ಶನ್
Darshan Ambareesh

Updated on: May 29, 2025 | 11:17 AM

ನಟ ದರ್ಶನ್ (Darshan), ಅಂಬರೀಶ್ ಅವರ ಮನೆ ಮಗ ಎಂದೇ ಗುರುತಿಸಿಕೊಂಡಿದ್ದರು. ಅಂಬರೀಶ್ ಕಾಲವಾದ ವರ್ಷಗಳ ಬಳಿಕವೂ ಸಹ ಅಂಬರೀಶ್ ಅವರ ಕುಟುಂಬದೊಟ್ಟಿಗೆ ಆತ್ಮೀಯವಾಗಿಯೇ ಇದ್ದರು. ಆದರೆ ರೇಣುಕಾ ಸ್ವಾಮಿ ಪ್ರಕರಣದ ಬಳಿಕ ದರ್ಶನ್ ಹಾಗೂ ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದಂತಿದೆ. ಸುಮಲತಾ ಜೊತೆಗೆ ಭಿನ್ನಾಭಿಪ್ರಾಯ ಇದ್ದರೂ ಸಹ ನಟ ದರ್ಶನ್ ಅಂಬರೀಶ್ ಹುಟ್ಟುಹಬ್ಬವನ್ನು ಮರೆತಿಲ್ಲ.

ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿರುವ ನಟ ದರ್ಶನ್, ‘ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್’ ಎಂದಿದ್ದಾರೆ ನಟ ದರ್ಶನ್.

ಅಂಬರೀಶ್ ಇದ್ದಾಗ ಅವರ ಹುಟ್ಟುಹಬ್ಬವನ್ನು ಬಲು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು, ದರ್ಶನ್ ಸಹ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂಬರೀಶ್ ಹಾಗೂ ದರ್ಶನ್ ಪರಸ್ಪರ ಬಹಳ ಆತ್ಮೀಯರಾಗಿದ್ದರು. ದರ್ಶನ್ ಹಾಗೂ ಅಂಬರೀಶ್ ಕೆಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ ಸಹ. ಅಂಬರೀಶ್ ಅವರ ‘ಉತ್ತರಾಧಿಕಾರಿ’ ಎಂಬಂತೆ ದರ್ಶನ್ ಅವರನ್ನು ಕಾಣಲಾಗುತ್ತಿತ್ತು.

ಇದನ್ನೂ ಓದಿ:ದೇಶ ಸುತ್ತಾಟದ ಬಳಿಕ ವಿದೇಶಕ್ಕೆ ಹಾರಲು ದರ್ಶನ್ ರೆಡಿ; ಕೋರ್ಟ್​ನಲ್ಲಿ ಸಲ್ಲಿಕೆ ಆಯ್ತು ಅರ್ಜಿ

ಅಂಬರೀಶ್ ಕಾಲವಾದ ಬಳಿಕವೂ ಅವರ ಕುಟುಂಬದೊಟ್ಟಿಗೆ ಆತ್ಮೀಯ ಬಂಧವನ್ನು ದರ್ಶನ್ ಮುಂದುವರೆಸಿದರು. ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾಕ್ಕೆ ಸಾಕಷ್ಟು ಸಹಾಯ ಮಾಡಿದರು. ಅತಿಥಿ ಪಾತ್ರದಲ್ಲಿಯೂ ನಟಿಸಿದರು. ಎಲ್ಲದಕ್ಕಿಂತಲೂ ಮುಖ್ಯವಾಗಿ ಸುಮಲತಾ ಅವರಿಗೆ ಬೆನ್ನೆಲುಬಾಗಿ ನಿಂತು, ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮುಂಚೆಯೂ ಸಹ ಸುಮಲತಾ ಅವರ ರಾಜಕೀಯ ಕಾರ್ಯಕ್ರಮಗಳಲ್ಲಿಯೂ ದರ್ಶನ್ ಕಾಣಿಸಿಕೊಂಡಿದ್ದರು. ಸುಮಲತಾ ಅವರನ್ನು ‘ಮದರ್ ಇಂಡಿಯಾ’ ಎಂದೇ ಸಂಭೋಧಿಸುತ್ತಿದ್ದರು ದರ್ಶನ್. ಆದರೆ ರೇಣುಕಾ ಸ್ವಾಮಿ ಪ್ರಕರಣದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ