ನಟ ದರ್ಶನ್ (Darshan) ಹಾಗೂ ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಆಗುತ್ತಿದೆ. ಮಂಗಳವಾರ (ಜೂನ್ 10) ದರ್ಶನ್ ಅರೆಸ್ಟ್ ಆಗಿದ್ದಾರೆ. ರಾತ್ರಿ ಶರಣಾಗುತ್ತೇನೆ ಎಂದಿದ್ದ ಇವರು ಬೆಳಿಗ್ಗೆ ಉಲ್ಟಾ ಹೊಡೆದಿದ್ದರು. ಇದು ದರ್ಶನ್ ಅವರ ಟೆನ್ಷನ್ಗೆ ಕಾರಣ ಆಗಿತ್ತು. ಕೊಲೆ ನಡೆದಾಗ ಆದ ಮಾತುಕತೆ ಏನು, ಆ ಬಳಿಕ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಆರೋಪಿಗಳು ಶರಣಾಗುವ ಮುನ್ನ ಎರಡೆರಡು ಬಾರಿ ಮಾತುಕತೆ ನಡೆದಿತ್ತು. ಭಾನುವಾರ (ಜೂನ್ 9) ಮುಂಜಾನೆ 3 ಗಂಟೆ ವೇಳೆಗೆ ಕೊಲೆ ನಡೆದಿದೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಡೆಡ್ ಬಾಡಿ ಸಿಕ್ಕಿತ್ತು. ಪ್ರಕರಣದಲ್ಲಿ ಶರಣಾಗಲು ಭಾನುವಾರ ರಾತ್ರಿಯೇ ಮಾತುಕತೆ ಆಗಿತ್ತು. ಅದರಂತೆ ಸೋಮವಾರ ಬೆಳಿಗ್ಗೆ ನಾಲ್ವರು ಆರೋಪಿಗಳು ಶರಣಾಗಬೇಕಿತ್ತು. ಆದರೆ ಬೆಳಗ್ಗೆ ಎದ್ದು ನಮಗೆ ಭಯ ಆಗುತ್ತಾ ಇದೆ ಎಂದು ಆರೋಪಿಗಳು ಹೇಳಿದ್ದರು. ಕೂಡಲೇ ಆರೋಪಿಗಳನ್ನು ಕರೆದುಕೊಂಡು ಪ್ರದೂಶ್ ಮೈಸೂರಿಗೆ ಹೋಗಿದ್ದರು.
ಆರೋಪಿಗಳು ಮೈಸೂರಿನಲ್ಲಿ ದರ್ಶನ್ ಭೇಟಿಯಾಗಿದ್ದಾರೆ. ಈ ವೇಳೆ ಎಲ್ಲ ಖರ್ಚು ವೆಚ್ಚ ನೋಡಿಕೊಳ್ಳುತ್ತೇನೆ ಎಂದು ನಟ ದರ್ಶನ್ ಭರವಸೆ ನೀಡಿದ್ದರು. ನಟ ದರ್ಶನ್ ಮಾತುಕೊಟ್ಟ ಬಳಿಕ ಬೆಂಗಳೂರಿಗೆ ಬಂದು ಇವರು ಶರಣಾಗಿದ್ದರು ಎಂದು ವರದಿ ಆಗಿದೆ.
ಇದನ್ನೂ ಓದಿ: ‘ನಟ ದರ್ಶನ್ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕೆ
ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದರಿಂದ ಸಿಟ್ಟಾದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ 15ಕ್ಕೂ ಹೆಚ್ಚು ಜನರು ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಪೊಲೀಸರ ವಶದಲ್ಲಿ ಇದ್ದಾರೆ. ಇಂದು ದರ್ಶನ್ ಅವರನ್ನು ಕೋರ್ಟ್ ಎದುರು ಹಾಜರು ಪಡಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Sat, 15 June 24