ಕಳಚಿದ ಕೊನೆಯ ಕೊಂಡಿ, ತೆರೆಯ ಮೇಲೆ ಬರಲಿದೆ ಮತ್ತೊಂದು ಭೂಗತ ಲೋಕ

ಸಾಧು ಶ್ರೀನಾಥ್​

|

Updated on:May 19, 2020 | 2:48 PM

ಬೆಂಗಳೂರು: ಕಳೆದ ವಾರವಷ್ಟೇ ಮಾಜಿ ಡಾನ್ ಮುತ್ತಪ್ಪ ರೈ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಭೂಗತ ಲೋಕದ ಕೊನೆಯ ಕೊಂಡಿಯೂ ಕಳಚಿದಂತಾಗಿದೆ. ಆದ್ರೆ ಇದೀಗ ಭೂಗತ ಲೋಕದ ಗತವೈಭವವನ್ನು ತೆರೆಯ ಮೇಲೆ ತರಲು ಸ್ಯಾಂಡಲ್​ವುಡ್​ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೊರೊನಾ ಹೆಮ್ಮಾರಿಯಿಂದಾಗಿ ದೇಶದಾದ್ಯಂತ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಈ ಮಧ್ಯೆ ಭೂಗತ ಲೋಕದ ಡಾನ್​ ಬಗ್ಗೆ ಬಯೋಫಿಕ್ ಸಿನಿಮಾ ತರಲು ತಯಾರಿಗಳು ಆಗುತ್ತಿವೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ […]

ಕಳಚಿದ ಕೊನೆಯ ಕೊಂಡಿ, ತೆರೆಯ ಮೇಲೆ ಬರಲಿದೆ ಮತ್ತೊಂದು ಭೂಗತ ಲೋಕ

ಬೆಂಗಳೂರು: ಕಳೆದ ವಾರವಷ್ಟೇ ಮಾಜಿ ಡಾನ್ ಮುತ್ತಪ್ಪ ರೈ ಅನಾರೋಗ್ಯದಿಂದ ನಿಧನರಾಗಿದ್ದರು. ಇದರಿಂದ ಭೂಗತ ಲೋಕದ ಕೊನೆಯ ಕೊಂಡಿಯೂ ಕಳಚಿದಂತಾಗಿದೆ. ಆದ್ರೆ ಇದೀಗ ಭೂಗತ ಲೋಕದ ಗತವೈಭವವನ್ನು ತೆರೆಯ ಮೇಲೆ ತರಲು ಸ್ಯಾಂಡಲ್​ವುಡ್​ನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಕೊರೊನಾ ಹೆಮ್ಮಾರಿಯಿಂದಾಗಿ ದೇಶದಾದ್ಯಂತ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಈ ಮಧ್ಯೆ ಭೂಗತ ಲೋಕದ ಡಾನ್​ ಬಗ್ಗೆ ಬಯೋಫಿಕ್ ಸಿನಿಮಾ ತರಲು ತಯಾರಿಗಳು ಆಗುತ್ತಿವೆ.

ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ಬೆಂಗಳೂರಿನ ಭೂಗತ ಲೋಕದ ಡಾನ್ ಎಂ.ಪಿ.ಜಯರಾಜ್ ಬಯೋಪಿಕ್ ಕೆಲಸದಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಆಲೋಚನೆಯಲ್ಲೂ ಚಿತ್ರತಂಡ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada