Jaggesh: ಡಾ.ಭುಜಂಗ ಶೆಟ್ಟಿಯ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ ನಟ ಜಗ್ಗೇಶ್   

|

Updated on: May 20, 2023 | 7:33 AM

ಡಾ. ಭುಜಂಗ ಶೆಟ್ಟಿ ಅವರ ನಿಧನ ವಾರ್ತೆ ಜಗ್ಗೇಶ್ ಅವರಿಗೆ ಆಘಾತ ತಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

Jaggesh: ಡಾ.ಭುಜಂಗ ಶೆಟ್ಟಿಯ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ ನಟ ಜಗ್ಗೇಶ್   
ಜಗ್ಗೇಶ್​-ಡಾ. ಭುಜಂಗ ಶೆಟ್ಟಿ
Follow us on

ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿ (Dr Bhujanga Shetty) ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ವಿಚಾರ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಭುಜಂಗ ಶೆಟ್ಟಿ ಅವರು ಮಾಡಿದ ಒಳ್ಳೆಯ ಕೆಲಸವನ್ನು ನೆನಪಿಸಿಕೊಂಡಿದ್ದಾರೆ. ನಟ, ರಾಜಕಾರಣಿ ಜಗ್ಗೇಶ್ (Jaggesh) ಅವರು ಕೂಡ ಡಾ. ಭುಜಂಗ ಶೆಟ್ಟಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಳೆಯ ದಿನಗಳನ್ನು ಅವರು ತೆರೆದಿಟ್ಟಿದ್ದಾರೆ.

ಜಗ್ಗೇಶ್ ಅವರು ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಆಗುಹೋಗುಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಈಗ ಡಾ. ಭುಜಂಗ ಶೆಟ್ಟಿ ಅವರ ಸಾವಿನ ವಾರ್ತೆ ಅವರಿಗೆ ಆಘಾತ ತಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

‘ಇಂದಿನ ದೇವಯ್ಯಪಾರ್ಕ್ ಮೆಟ್ರೋ ಅಡಿಯಲ್ಲಿ 1980ರಲ್ಲಿ ಇವರ ಕಣ್ಣಿನ ಕ್ಲಿನಿಕ್ ಇತ್ತು. ಅಮ್ಮನ ಕಣ್ಣಿನ ಪರೀಕ್ಷೆಗಾಗಿ ಇವರ ಬಳಿ ಹೋಗಿದ್ದ ನೆನಪು. ನಂತರ ಅವರ ಬೆಳವಣಿಗೆ, ಅವರ ಆಸ್ಪತ್ರೆಯಲ್ಲಿ ನಡೆದ ನನ್ನ ಅನೇಕ ಚಿತ್ರದ ಚಿತ್ರೀಕರಣ.. ರಾಜಣ್ಣ ಕಣ್ಣಿನ ದಾನಕ್ಕೆ ಇವರೇ ಪ್ರೇರಣೆ. ಒಟ್ಟಾರೆ ಆತ್ಮೀಯರು ಕಾಲವಾದ ವಿಷಯ ಕೇಳಿ ಅಘಾತವಾಯಿತು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


ಇದನ್ನೂ ಓದಿ:ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ

1993ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನಾರಾಯಣ ನೇತ್ರಾಲಯವನ್ನು ಡಾ. ಭುಜಂಗ ಶೆಟ್ಟಿ ಆರಂಭಿಸಿದರು. ಇದನ್ನು ಉದ್ಘಾಟನೆ ಮಾಡಿದ್ದು ಡಾ. ರಾಜ್​ಕುಮಾರ್. ಬಳಿಕ 1994ರಲ್ಲಿ ಅಣ್ಣಾವ್ರು ತಂಗಿಯ ಕಣ್ಣಿನ ಆಪರೇಷನ್​ಗೆ ಇಲ್ಲಿಗೆ ಬಂದಿದ್ದರು. ಈ ವೇಳೆ ಭುಜಂಗ ಶೆಟ್ಟಿ ಅವರು ಕಣ್ಣಿನ ದಾನದ ಕುರಿತು ಮಾತನಾಡಿದ್ದರು. ಆಗ ರಾಜ್​ಕುಮಾರ್ ಕಣ್ಣಿನ ದಾನಕ್ಕೆ ಮುಂದಾದರು. ಡಾ. ಭುಜಂಗ ಶೆಟ್ಟಿ ಅವರು ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರ ಆರಂಭಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ