ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ

Dr. Bhujang Shetty: ಅನೇಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ ಖ್ಯಾತಿ ಭುಜಂಗ ಶೆಟ್ಟಿಗೆ ಸಲ್ಲಿಕೆ ಆಗುತ್ತದೆ. ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರವನ್ನು ಅವರು ಸ್ಥಾಪಿಸಿದ್ದರು. ರಾಜ್​ಕುಮಾರ್ ಜೊತೆ ಒಡನಾಟ ಬೆಳೆದಿದ್ದು ಹೇಗೆ ಎನ್ನುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದರು.

ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ
ಡಾ.ಭುಜಂಗ ಶೆಟ್ಟಿ-ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: May 20, 2023 | 7:08 AM

ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಕೆ ಭುಜಂಗ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ. ಶುಕ್ರವಾರ (ಮೇ 19) ಅವರು ನಿಧನ ಹೊಂದಿದರು. ಸಂಜೆ 6 ಗಂಟೆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗಿಲ್ಲ. ಡಾ. ರಾಜ್​ಕುಮಾರ್ (Rajkumar) ಕುಟುಂಬದ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಅನೇಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ ಖ್ಯಾತಿ ಭುಜಂಗ ಶೆಟ್ಟಿಗೆ (Dr. Bhujang Shetty) ಸಲ್ಲಿಕೆ ಆಗುತ್ತದೆ. ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರವನ್ನು ಅವರೇ ಸ್ಥಾಪಿಸಿದ್ದರು. ಪುನೀತ್ ನಿಧನ ಹೊಂದಿದಾಗ ಅವರ ಕಣ್ಣಿನಿಂದ ನಾಲ್ಕು ಜನಕ್ಕೆ ದೃಷ್ಟಿ ಕೊಡಿಸಿದ್ದರು. ರಾಜ್​ಕುಮಾರ್ ಜೊತೆ ಒಡನಾಟ ಬೆಳೆದಿದ್ದು ಹೇಗೆ ಎನ್ನುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದರು.

‘ನಾನು ಶಾಲೆಗೆ ಹೋಗುವ ದಿನಗಳಲ್ಲೇ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ​. ಅವರ ನಟನೆಯ ಹಲವಾರು ಚಿತ್ರಗಳನ್ನು ನೋಡಿದ್ದೆ. ಅವರನ್ನು ಯಾವತ್ತಾದರೂ ಭೇಟಿ ಆಗಬೇಕು ಅಂದುಕೊಂಡಿದ್ದೆ. ಆ ಆಸೆ ತುಂಬಾ ವರ್ಷಗಳ ಕಾಲ ಇಡೇರಲಿಲ್ಲ. ಕಣ್ಣಿನ ಸ್ಪೆಷಲಿಸ್ಟ್ ಆಗಿ ನಾನು ಶ್ರೀರಾಮ್​ಪುರದ ಆಸ್ಪತ್ರೆಗೆ ಸೇರಿದೆ. ಆಗ ಅವರು ಕಣ್ಣಿನ ಟೆಸ್ಟ್​​ಗೆ ಬಂದಿದ್ದರು. ಒಂದು ಗಂಟೆ ಮಾತನಾಡಿದೆ. ರಾಜಾಜಿನಗರದ ನಾರಾಯಣ ನೇತ್ರಾಲಯವನ್ನು ಸ್ಥಾಪಿಸಿದಾಗ ರಾಜ್​ಕುಮಾರ್ ಉದ್ಘಾಟನೆ ಮಾಡಬೇಕು ಎಂದುಕೊಂಡಿದ್ದೆ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಬಂದು 1993ರಲ್ಲಿ ಉದ್ಘಾಟನೆ ಮಾಡಿದ್ದರು. ತುಂಬು ಹೃದಯದಿಂದ ಆಶೀರ್ವಾದ ಮಾಡಿದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದರು ಡಾ. ಭುಜಂಗ ಶೆಟ್ಟಿ.

‘ರಾಜ್​ಕುಮಾರ್ ಅವರಲ್ಲಿ ನೋಡಿದ ವಿಷಯ ಎಂದರೆ ಅವರು ಹಣಕ್ಕೆ ಬೆಲೆ ಕೊಡುತ್ತಾ ಇರಲಿಲ್ಲ. ಗುಣಕ್ಕೆ ಬೆಲೆ ಕೊಡುತ್ತಾ ಇದ್ದರು. ಹೂವು, ಹಣ್ಣು, ಹಸಿರು ನೋಡಿದರೆ ಅವರಿಗೆ ಖುಷಿ ಆಗುತ್ತಿತ್ತು. ಹಳ್ಳಿ ಜನರಿಗೆ ಒಳ್ಳೆಯದಾಯ್ತು ಎಂದರೆ ಖುಷಿ ಪಡುತ್ತಿದ್ದರು. ಒಮ್ಮೆ ಬೋರ್​ವೆಲ್​ ಹಾಕಿಸಿದ್ವಿ ತುಂಬಾ ಚೆನ್ನಾಗಿ ನೀರು ಬಂದಿದೆ ಎಂದು ರಾಜ್​​ಕುಮಾರ್ ಖುಷಿಪಟ್ಟಿದ್ದರು’ ಎಂದು ಆರಂಭದ ದಿನಗಳಲ್ಲಿ ನೆನಪಿಸಿಕೊಂಡಿದ್ದರು ಭುಜಂಗ ಶೆಟ್ಟಿ.

‘ನನ್ನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದರು. ಅಲ್ಲೊಂದು ಹುಂಡಿ ಇದೆ. ಪಾರ್ವತಮ್ಮ ಅವರು ರಾಜ್​ಕುಮಾರ್​ಗೆ ಹಣ ಕೊಟ್ಟರು. ನಾನು ಅವರ ಜೊತೆಗೇ ಇದ್ದೆ. ಅವರು ನನ್ನ ಕೈಯಿಂದ ಹುಂಡಿಗೆ ಹಣ ಹಾಕಿಸಿದರು. ಏನಣ್ಣ ಹೀಗೆ ಮಾಡಿದ್ರಿ ಎಂದೆ. ಅವನಿಗೆ ಕೊಡೋ ಶಕ್ತಿ ನನಗೆಲ್ಲಿದೆ. ಅವನ ಎದುರು ನಾವೆಲ್ಲ ಇರುವೆಗಳು ಎಂದಿದ್ದರು’ ಎಂದು ರಾಜ್​ಕುಮಾರ್ ಜೊತೆ ಕಳೆದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ

‘ರಾಜ್​​ಕುಮಾರ್ ತಂಗಿಯ ಕಣ್ಣಿಗೆ ಪೊರೆ ಬಂದಿತ್ತು. ನಾರಾಯಣ ನೇತ್ರಾಲಯ ಓಪನ್ ಆದಮೇಲೆ ಅಲ್ಲೇ ಬಂದು ತಂಗಿಗೆ ಆಪರೇಷನ್ ಮಾಡಿದ್ದರು. ಆಗ ನೇತ್ರದಾನದ ಬಗ್ಗೆ ಮಾತನಾಡಿದ್ದೆ. ಕಣ್ಣಿನ ದಾನದ ಮಹತ್ವದ ಬಗ್ಗೆ ಹೇಳಿದ್ದೆ. ಮಣ್ಣಾಗೋ ಬದಲು ನಾಲ್ಕು ಜನರ ದೃಷ್ಟಿಗೆ ಸಹಾಯ ಆಗುತ್ತದೆ ಎಂದೆ. ಆಗ ಅವರು ನನ್ನ ಕೈಯಿಂದ ಏನು ಆಗಬೇಕು ಎಂದು ಕೇಳಿದ್ದರು. ನಿಮ್ಮ ಹೆಸರನ್ನು ನೋಂದಣಿ ಮಾಡಿಸಿ ಎಂದು ಕೋರಿಕೊಂಡೆ. ಅವರು ಮಾಡಿಸಿದರು. ಹೀಗಾಗಿ 1994ರಲ್ಲಿ ಡಾ.ರಾಜ್​ಕುಮಾರ್ ನೇತ್ರದಾನ ಕೇಂದ್ರ ಆರಂಭಿಸಿದೆವು’ ಎಂದು ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ