Actor Shivaram: ನಟಿಸಿದ ಕೊನೆಯ ಚಿತ್ರದಲ್ಲಿ ‘ಜೀವನದಲ್ಲೇ ಅದ್ಭುತ ಪಾತ್ರ’ ಮಾಡಿದ ಖುಷಿ ಶಿವರಾಮಣ್ಣನವರಿಗಿತ್ತು..

Avartha Movie: ನಟ ಶಿವರಾಂ ಅವರು ನಟಿಸಿದ್ದ ಕೊನೆಯ ಚಿತ್ರ ‘ಆವರ್ತ’. ಆ ಚಿತ್ರದ ಪಾತ್ರವನ್ನು ಅವರು ಬಹಳ ಇಷ್ಟಪಟ್ಟಿದ್ದರು ಹಾಗೂ ಅದು ಜೀವನದ ಅದ್ಭುತ ಪಾತ್ರ ಎಂದೂ ಹೇಳಿಕೊಂಡಿದ್ದರು.

Actor Shivaram: ನಟಿಸಿದ ಕೊನೆಯ ಚಿತ್ರದಲ್ಲಿ ‘ಜೀವನದಲ್ಲೇ ಅದ್ಭುತ ಪಾತ್ರ’ ಮಾಡಿದ ಖುಷಿ ಶಿವರಾಮಣ್ಣನವರಿಗಿತ್ತು..
‘ಆವರ್ತ’ ಚಿತ್ರದ ಪೋಸ್ಟರ್


ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ ಕಡೆಯದಾಗಿ ನಟಿಸಿದ್ದ ಚಿತ್ರ ‘ಆವರ್ತ’. ಆ ಚಿತ್ರದಲ್ಲಿನ ಪಾತ್ರ ಅವರಿಗೆ ಬಹಳ ಖುಷಿ ಕೊಟ್ಟಿತ್ತು. ತಮ್ಮ ಜೀವನದಲ್ಲೇ ಅದ್ಭುತ ಪಾತ್ರ ಎಂದೂ ಅವರು ಹೇಳಿಕೊಂಡಿದ್ದರು. ದುರ್ದೈವವೆಂದರೆ ವೃತ್ತಿ ಜೀವನದಲ್ಲಿ ಖುಷಿ ಕೊಟ್ಟ ಪಾತ್ರವು ತೆರೆಯ ಮೇಲೆ ಮೂಡುವ ಮುನ್ನವೇ ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ‘ಆವರ್ತ’ ಚಿತ್ರವನ್ನು ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ‘ನರೇಂದ್ರನಾಥ ಬಲ್ಲಾಳ’ ಎಂಬ ಪಾತ್ರವನ್ನು ಶಿವರಾಂ ನಿರ್ವಹಿಸಿದ್ದಾರೆ. ಮಡಿಕೇರಿಯಲ್ಲಿ ಹನ್ನೊಂದು ದಿನಗಳ ಚಿತ್ರೀಕರಣದಲ್ಲೂ ಶಿವರಾಂ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ತಮ್ಮ ಪಾತ್ರದ ಡಬ್ಬಿಂಗ್ ಕೂಡ ಮುಗಿಸಿದ್ದರು. ತಮ್ಮ ಪಾತ್ರವನ್ನು ನೋಡಿ ‘‘ಇದು ನನ್ನ ಜೀವನದಲ್ಲೇ ಅದ್ಭುತ ಪಾತ್ರ’’ ಎಂದಿದ್ದರಂತೆ.

ಶಿವರಾಮಣ್ಣನವರಿಗೆ ‘ಅದ್ಭುತ’ ಎನಿಸುವ ಪಾತ್ರದಲ್ಲಿ ಅವರು ಕಡೆಯದಾಗಿ ಬಣ್ಣಹಚ್ಚಿದ್ದು ಅವರೊಳಗಿನ ಕಲಾವಿದನಿಗೆ ತೃಪ್ತಿ ನೀಡಿದೆ. ಆದರೆ ಕನ್ನಡದ ಪ್ರೇಕ್ಷಕರು ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದ, ಶಿವರಾಮಣ್ಣನವರಿಂದ ಮತ್ತಷ್ಟು ಅದ್ಭುತ ಪಾತ್ರ ಪೋಷಣೆಯ ನಿರೀಕ್ಷೆಯಲ್ಲಿದ್ದರು! ಚಿತ್ರರಂಗ ಶಿವರಾಮಣ್ಣನವರನ್ನು ಕಳೆದುಕೊಂಡು ಬಡವಾಗಿದೆ.

ಶಿವರಾಂ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸ ಮಾಡಲಾಗುವುದು: ಸಚಿವ ಆರ್.ಅಶೋಕ್
ಹಿರಿಯ ನಟನ ಶಿವರಾಂ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ. ‘‘ಕಟ್ಟಡ, ರಸ್ತೆಗೆ ಅವರ ಹೆಸರನ್ನಿಟ್ಟು ಗೌರವಿಸಲಾಗುವುದು. ನ್ನ ಕ್ಷೇತ್ರದಲ್ಲಿ ಅವರ ನೆನಪು ಉಳಿಸುವ ಪ್ರಯತ್ನ ಮಾಡುತ್ತೇನೆ’’ ಎಂದು ಸಚಿವರು ಹೇಳಿದ್ದಾರೆ.

ಶಿವರಾಂ ಅವರ ಅಂತ್ಯಕ್ರಿಯೆ ನಾಳೆ ಅಂದರೆ ಭಾನುವಾರ ಬೆಳಗ್ಗೆ 11ಕ್ಕೆ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:

ಶಿವರಾಂ ಅವರ ಆ ಆಸೆ ಕೊನೆಗೂ ಈಡೇರಲಿಲ್ಲ; ಬೇಸರ ಹೊರಹಾಕಿದ ಅನಿಲ್​ ಕುಂಬ್ಳೆ

Rashi Brothers: ಶಿವರಾಂ ಸ್ಥಾಪಿಸಿದ್ದ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

Click on your DTH Provider to Add TV9 Kannada