ನನ್ನ ವೃತ್ತಿ ಬದುಕಿನಲ್ಲೇ ಬೆಸ್ಟ್ ಇಯರ್ ಅಂದ್ರೆ 2020.. ಈ ವರ್ಷವೇ ನಮಗೆ ನಮ್ಮ ಜೀವನ ಅರ್ಥ ಆಯ್ತು -ಬೆಳ್ಳಿ ಹೆಜ್ಜೆಯ ಸಂಭ್ರಮದಲ್ಲಿ ಕಿಚ್ಚನ ಮನದಾಳದ ಮಾತು
ನನ್ನ ವೃತ್ತಿ ಬದುಕಿನಲ್ಲೇ ಬೆಸ್ಟ್ ಇಯರ್ ಅಂದ್ರೆ 2020. ಈ ವರ್ಷದಲ್ಲೇ ನಮಗೆ ನಮ್ಮ ಜೀವನ ಅರ್ಥ ಆಯ್ತು. 2020ರಿಂದ ತುಂಬಾ ಯೋಚನೆ ಮಾಡಲು ಟೈಮ್ ಸಿಕ್ತು. ಕಥೆ ಬರೆದೆ, ತುಂಬಾ ರಿಲ್ಯಾಕ್ಸ್ ಆಗಿ ಸಮಯ ಕಳೆದಿದ್ದೀವಿ ಎಂದು ವೃತ್ತಿ ಬದುಕಿನ ತಮ್ಮ ಅನುಭವ ಹಂಚಿಕೊಂಡರು.
ಬೆಂಗಳೂರು: 25 ವರ್ಷ ಅನ್ನೋದು ನಿವೃತ್ತಿಯ ಅನುಭವ ಕೊಡುತ್ತಿದೆ. ನನಗೆ ಈಗಲೂ ಏನೂ ಅನ್ನಿಸುತ್ತಿಲ್ಲ ಎಂದು ನಟ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡರು.
ಅಭಿನಯ ಚಕ್ರವರ್ತಿ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್ನಲ್ಲಿ ಆಪ್ತರ ಜೊತೆ ಬೆಳ್ಳಿ ಹೆಜ್ಜೆಯ ಸಂಭ್ರಮಾಚರಣೆ ಮಾಡಿದರು. ಜನವರಿ 31ರಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಸಿನಿ ಬದುಕಿನ ಏಳು ಬೀಳಿನ ಪಯಣವನ್ನು ಮೆಲುಕು ಹಾಕಿದರು.
ನನ್ನ ವೃತ್ತಿ ಶುರುವಾದಾಗಿನಿಂದ ಜಾಕ್ ಮಂಜು ಜೊತೆಗಿದ್ದಾರೆ. ಜಾಕ್ ಮಂಜು ಸಹಕಾರ ನಮ್ಮ ತಂಡಕ್ಕೆ ತುಂಬಾ ಇದೆ ಎಂದು ಹೇಳಿದರು. 1983-1984 ರಿಂದ ನನ್ನ ಜೊತೆ ನಿರ್ಮಾಪಕ ಜಾಕ್ ಮಂಜು ಇದ್ದಾರೆ. ನಾನು ಓದುವಾಗಲೇ ನನ್ನ ಕೆರೀಯರ್ ಶುರುಮಾಡಿದ್ದೆ ಎಂದು ಸುದೀಪ್ ಹೇಳಿದರು.
ನನ್ನ ವೃತ್ತಿ ಬದುಕಿನಲ್ಲೇ ಬೆಸ್ಟ್ ಈಯರ್ ಅಂದ್ರೆ 2020. ಈ ವರ್ಷದಲ್ಲೇ ನಮಗೆ ನಮ್ಮ ಜೀವನ ಅರ್ಥ ಆಯ್ತು. 2020ರಿಂದ ತುಂಬಾ ಯೋಚನೆ ಮಾಡಲು ಟೈಮ್ ಸಿಕ್ತು. ಕಥೆ ಬರೆದೆ, ತುಂಬಾ ರಿಲ್ಯಾಕ್ಸ್ ಆಗಿ ಸಮಯ ಕಳೆದಿದ್ದೀವಿ ಎಂದು ವೃತ್ತಿ ಬದುಕಿನ ತಮ್ಮ ಅನುಭವ ಹಂಚಿಕೊಂಡರು.
ಪ್ಯಾನ್ ಇಂಡಿಯಾ ಅನ್ನೋದು ಕಥೆ ಮೇಲೆ ಡಿಪೆಂಡ್ ಆಗುತ್ತೆ. ಹೇಳೋ ಕಥೆ ಎಲ್ಲರಿಗೂ ರೀಚ್ ಆಗುತ್ತೆ ಅನ್ನೋದಾದ್ರೆ ಅದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ ಎಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತಾಡೋ ವಿಚಾರಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟರು.
ಜೊತೆಗೆ, ಕನ್ನಡಕ್ಕೆ ಅದರದ್ದೇ ಆದ ಶಕ್ತಿ ಇದೆ. ನಮ್ಮ ಚಿತ್ರಗಳ ಮೇಲೆ ಅಭಿಮಾನ ಸ್ವಾಭಿಮಾನ ಇದ್ರೆ ಕನ್ನಡವನ್ನ ಎಲ್ಲಿ ಬೇಕಾದ್ರೆ ಕೂಡಿಸಬಹುದು ಎಂದು ಸುದೀಪ್ ಹೇಳಿದರು.
ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು
Published On - 8:32 pm, Sun, 7 February 21