ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್​ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ

| Updated By: ರಾಜೇಶ್ ದುಗ್ಗುಮನೆ

Updated on: Dec 07, 2024 | 7:57 AM

ಸುದೀಪ್ ಹಾಗೂ ಪ್ರಿಯಾಮಣಿ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಸೆಟ್​ನಲ್ಲಿ ಸುದೀಪ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ ಪ್ರಿಯಾಮಣಿ. ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ. ಹೀಗಾಗಿ, ಸೆಟ್​ನಲ್ಲಿ ಸುದೀಪ್ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವ ವಿಚಾರ ಗೊತ್ತಾಗಿದೆ.

ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್​ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ
ಪ್ರಿಯಾಮಣಿ
Follow us on

ಕನ್ನಡ ಬಿಗ್ ಬಾಸ್ ವೇದಿಕೆ ಮೇಲೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಮೊದಲಿಗೆ ಹೋಲಿಕೆ ಮಾಡಿದರೆ ಈಗ ವೇದಿಕೆ ಮೇಲೆ ಬೇರೆ ಸೆಲೆಬ್ರಿಟಿಗಳು ಬಂದು ಸಿನಿಮಾ ಪ್ರಚಾರಕ್ಕೆ ಮಾಡೋದು ಕಡಿಮೆ ಆಗಿದೆ. ಮೊದಲು ಪ್ರತಿ ವಾರ ಓರ್ವ ಸೆಲೆಬ್ರಿಟಿ ಬಂದು ಸಿನಿಮಾ ಪ್ರಚಾರ ಮಾಡುತ್ತಿದ್ದರು. ಅದೇ ರೀತಿಯಲ್ಲಿ ಬಿಗ್ ಬಾಸ್ ವೇದಿಕೆಗೆ ಪ್ರಿಯಾಮಣಿ ಅವರು ಆಗಮಿಸಿದ್ದರು. ಅವರು ಸುದೀಪ್ ಅವರ ಇಮಿಟೇಷನ್ ಮಾಡಿ ತೋರಿಸಿದ್ದರು.

ಸುದೀಪ್ ಹಾಗೂ ಪ್ರಿಯಾಮಣಿ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಸೆಟ್​ನಲ್ಲಿ ಸುದೀಪ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ ಪ್ರಿಯಾಮಣಿ. ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ. ಹೀಗಾಗಿ, ಸೆಟ್​ನಲ್ಲಿ ಸುದೀಪ್ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವ ವಿಚಾರ ಗೊತ್ತಾಗಿದೆ. ಅದನ್ನು ಪ್ರಿಯಾಮಣಿ ಅವರು ತೋರಿಸಿದ್ದಾರೆ.

ಸುದೀಪ್ ಅವರು ಸೆಟ್​ಗೆ ಬಂದ ತಕ್ಷಣ ಎಲ್ಲರೂ ಇಳಿದ ಬಳಿಕ ಎಲ್ಲರೂ ಹಾಯ್ ಹೇಳುತ್ತಾರಂತೆ. ‘ನಿರ್ದೇಶಕರು ಎಲ್ಲಿ’ ಎಂದು ಸುದೀಪ್ ಕೇಳುತ್ತಾರಂತೆ. ಆ ಬಳಿಕ ಸುದೀಪ್ ಅವರು ದೃಶ್ಯ ಏನು ಎಂದು ಕೇಳುತ್ತಾರೆ. ಒಂದೊಮ್ಮೆ ಸೀನ್ ಇಷ್ಟ ಆಗಿಲ್ಲ ಎಂದರೆ, ಇದು ಬೇಕಾ ಎಂದು ನೇರವಾಗಿ ಕೇಳುತ್ತಾರಂತೆ.

ಈ ಮಧ್ಯೆ ಸುದೀಪ್ ಅವರು ತಮ್ಮನ್ನು ನೋಡಿದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಪ್ರಿಯಾಮಣಿ ಹೇಳಿದ್ದಾರೆ. ಒಂದು ಕೈಯಲ್ಲಿ ಕಾಫಿ ಕಪ್ ಹಿಡಿದು ಮತ್ತೊಂದು ಕೈಯಲ್ಲಿ ಪ್ರಿಯಾಮಣಿಗೆ ಹಗ್ ಕೊಡುತ್ತಾರಂತೆ ಸುದೀಪ್. ಆ ಬಳಿಕ ಸುದೀಪ್ ಅವರು ಮೀಸೆ ಬಳಿ ಕೈ ಬೆರಳು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಕೂಡ ಮಾಡಿ ತೋರಿಸಿದ್ದಾರೆ ಸುದೀಪ್.

ಇದನ್ನೂ ಓದಿ: ‘ಮ್ಯಾಕ್ಸ್’ ಸಿನಿಮಾದಲ್ಲಿ ಹೇಗಿದೆ ಮಂಜು-ಸುದೀಪ್ ಮುಖಾಮುಖಿ? ಹೊಸ ಝಲಕ್ ರಿಲೀಸ್

ಸದ್ಯ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಅನೇಕರು ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರು ಬಿಗ್ ಬಾಸ್ ಬಿಟ್ಟು ಹೋಗಬಾರದು ಎಂದು ಅನೇಕರು ಕೋರಿಕೊಂಡಿದ್ದಾರೆ. ಸದ್ಯ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಡಿಸೆಂಬರ್ 25ರಂದು ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.