‘ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದ ರಮ್ಯಾ ವಿರುದ್ಧ ಅಸಮಾಧಾನ

| Updated By: ರಾಜೇಶ್ ದುಗ್ಗುಮನೆ

Updated on: Mar 30, 2023 | 2:19 PM

ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್​’ ಹೊಸ ಸೀಸನ್ ಆರಂಭ ಆಗಿದ್ದಕ್ಕೆ ವೀಕ್ಷಕರಿಗೆ ಖುಷಿ ಇತ್ತು. ಆದರೆ, ರಮ್ಯಾ ಅವರು ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು.

‘ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದ ರಮ್ಯಾ ವಿರುದ್ಧ ಅಸಮಾಧಾನ
ರಮ್ಯಾ
Follow us on

ನಟಿ ರಮ್ಯಾ ಅವರು ದೊಡ್ಡ ಬ್ರೇಕ್​ನ ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ (Uttarakaanda Movie) ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆ ಶೋ ‘ವೀಕೆಂಡ್ ವಿತ್​ ರಮೇಶ್​’ಗೆ ಅಥಿತಿಯಾಗಿ ಬಂದಿದ್ದರು. ಈ ಶೋನಲ್ಲಿ ಅವರು ಮಾತನಾಡಿದ್ದು ಬಹುತೇಕ ಇಂಗ್ಲಿಷ್​ನಲ್ಲೇ ಆಗಿತ್ತು. ಇದರಿಂದ ಅವರು ಟೀಕೆಗೆ ಒಳಗಾದರು. ಅನೇಕರು ರಮ್ಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವಿಚಾರದಲ್ಲಿ ರಮ್ಯಾ (Ramya) ಇಷ್ಟು ದಿನ ಮೌನವಹಿಸಿದ್ದರು. ಈಗ ಅವರು ತಿರುಗೇಟು ನೀಡಿದ್ದಾರೆ. ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್​’ ಹೊಸ ಸೀಸನ್ ಆರಂಭ ಆಗಿದ್ದಕ್ಕೆ ವೀಕ್ಷಕರಿಗೆ ಖುಷಿ ಇತ್ತು. ಆದರೆ, ರಮ್ಯಾ ಅವರು ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ಈ ವಿಚಾರದಲ್ಲಿ ರಮ್ಯಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೀಮ್ ಒಂದಕ್ಕೆ ರಮ್ಯಾ ಅವರು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವ ಎಲ್ಲರಿಗೂ ತಿರುಗೇಟು ನೀಡಿದ್ದಾರೆ. ‘ಶೋನ ಹೆಸರು ವೀಕೆಂಡ್ ವಿತ್ ರಮೇಶ್. ಶೋಗೆ ಬಂದ ಅತಿಥಿಗಳು ಕನ್ನಡದವರು ಆಗಿರಲಿಲ್ಲ. ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ: ನನ್ನದು ಸಾರ್ಥಕ ಜೀವನ, ಆದರೂ…: ರಾಜಕೀಯ, ಸಿನಿಮಾ ಹಾಗೂ ಭವಿಷ್ಯದ ಬಗ್ಗೆ ರಮ್ಯಾ ಮಾತು

ಸದ್ಯ ರಮ್ಯಾ ಕಮೆಂಟ್​ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಇದು ಕೇವಲ ಶೋ. ಇದನ್ನು ಶೋ ರೀತಿಯಲ್ಲೇ ನೋಡಿ. ಇಂಗ್ಲಿಷ್​​ನಲ್ಲಿ ಮಾತಾನಾಡಿದರು ಎಂದ ಮಾತ್ರಕ್ಕೆ ಅವರ ವಿರುದ್ಧ ದ್ವೇಷ ಕಾರೋದು ಸರಿ ಅಲ್ಲ’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ‘ತಪ್ಪಿದ್ದಾಗ ಒಪ್ಪಿಕೊಳ್ಳಿ. ಅದರ ಬದಲು ಈ ರೀತಿ ಹೇಳೋದು ಸರಿ ಅಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ‘ನೀವು ಕನ್ನಡ ಮಾತನಾಡುವವರೆಗೆ ಆ ಅಜ್ಜಿಯಂದಿರು ಇರಬೇಕಲ್ಲ’ ಎಂದು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ