ನಟಿ ರಮ್ಯಾ ಅವರು ಚಿತ್ರರಂಗ ಮತ್ತು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ಸಾಕಷ್ಟು ನಿರ್ಧಾರಗಳನ್ನು ಅವರು ಟೀಕಿಸಿದ್ದಾರೆ. ಈಗ ನಟಿ ರಮ್ಯಾ ಅವರು ಎರಡು ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿದೆ. ಈ ವಿಚಾರದ ಬಗ್ಗೆ ರಮ್ಯಾ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಆರ್ಯನ್ ಖಾನ್ ಬಳಿ ಡ್ರಗ್ ಇರಲಿಲ್ಲ ಮತ್ತು ಅವರು ಡ್ರಗ್ಸ್ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರ ಬಂಧನ ನಡೆದಿದೆ. ಮತ್ತೊಂದೆಡೆ ಬಿಜೆಪಿ ಸಚಿವರ ಮಗನಿದ್ದಾನೆ. ಅವರು 4 ರೈತರನ್ನು ಕೊಂದಿದ್ದಾರೆ, ಆದರೆ ಬಂಧನ ಮಾತ್ರ ಆಗಿಲ್ಲ. ಮೃತರ ಕುಟುಂಬವನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲು ಹೊರಟಾಗ ನೀವು ಅವರನ್ನು ಬಂಧಿಸಿದ್ದೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಆಯೋಜಕರು ಸಿಕ್ಕಿಲ್ಲ ಹಾಗಾಗಿ, ಡ್ರಗ್ಸ್ ಸೇವನೆ ಮಾಡಿರುವವರನ್ನು ವಶಕ್ಕೆ ಪಡೆದುಕೊಂಡೆವು ಎಂದು ಎನ್‌ಸಿಬಿ ಹೇಳಿದೆ. ಆದರೆ, ಆರ್ಯನ್ ಖಾನ್‌ರಿಂದ ಡ್ರಗ್ಸ್ ಸಿಕ್ಕಿದೆ ಮತ್ತು ಅವರು ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ಎನ್‌ಸಿಬಿ ಇನ್ನೂ ನಿರ್ದಿಷ್ಟವಾಗಿ ಹೇಳಿಲ್ಲ. ಆಯೋಜಕರು ಯಾರು ಎನ್‌ಸಿಬಿಗೆ ಎಂದು ಗೊತ್ತಿದೆ. ಅವರು ಸುಲಭವಾಗಿ ವಾರೆಂಟ್ ನೀಡಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬಹುದು. ಆದರೆ, ಯಾಕೆ ಇನ್ನೂ ಮಾಡಿಲ್ಲ? ನ್ಯಾಯಾಲಯದಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು, ವಿಚಾರಣೆ ವೇಳೆ ಆರ್ಯನ್ ಅವರು ಹೇಳಿದ್ದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎನ್‌ಸಿಬಿ ಹೇಳುತ್ತಿದೆ.. ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್ ಖಾನ್ ಅತ್ತಿದ್ದಾರೆ ಎಂಬಿತ್ಯಾದಿ ಗಾಸಿಪ್ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ಪ್ರಶ್ನೆ ಮಾಡುವಾಗ ಅಲ್ಲಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಎಲ್ಲವೂ ಕೂಡಿ ಬಂದ್ರೆ ಕನ್ನಡದಲ್ಲೇ ರಮ್ಯಾ ಜತೆ ಸಿನಿಮಾ ಮಾಡ್ತೀನಿ’: ಸತೀಶ್ ನೀನಾಸಂ
‘ನಾನು ಸಿನಿಮಾ ಮಾಡಲ್ಲ ಅಂದ್ರೆ ಅನೇಕರಿಗೆ ಬೇಸರ ಆಗತ್ತೆ’; ಚಿತ್ರರಂಗಕ್ಕೆ ಬರುವ ಸೂಚನೆ ನೀಡಿದ ರಮ್ಯಾ?
Published On - 3:59 pm, Wed, 6 October 21