Old Monk: ‘ಓಲ್ಡ್ ಮಾಂಕ್’ಗೆ ರಮ್ಯಾ ಶಹಬ್ಬಾಸ್​ಗಿರಿ; ಶ್ರೀನಿ ವೃತ್ತಿಜೀವನ ಸ್ಮರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ನಟಿ

Ramya | Srini: ‘ಓಲ್ಡ್ ಮಾಂಕ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಾ ಮುನ್ನುಗ್ಗುತ್ತಿದೆ. ಇದೀಗ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಚಿತ್ರಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಅಷ್ಟೇ ಅಲ್ಲ, ಶ್ರೀನಿ ಅವರ ಜೀವನ ಪಯಣವನ್ನು ಸ್ಮರಿಸಿದ್ದಾರೆ.

Old Monk: ‘ಓಲ್ಡ್ ಮಾಂಕ್’ಗೆ ರಮ್ಯಾ ಶಹಬ್ಬಾಸ್​ಗಿರಿ; ಶ್ರೀನಿ ವೃತ್ತಿಜೀವನ ಸ್ಮರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ನಟಿ
ನಟಿ ರಮ್ಯಾ, ‘ಓಲ್ಡ್ ಮಾಂಕ್’ ಪೋಸ್ಟರ್
Edited By:

Updated on: Mar 01, 2022 | 9:35 AM

ಸ್ಯಾಂಡಲ್​ವುಡ್ ನಟಿ ರಮ್ಯಾ (Ramya) ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಅವರು ಸಿನಿಮಾ ಕೆಲಸಗಳಿಗೆ ಕಮ್​ಬ್ಯಾಕ್ ಮಾಡಬೇಕು ಎನ್ನುವುದು ಅಭಿಮಾನಿಗಳ ಅಪೇಕ್ಷೆ. ಈ ಕುರಿತು ಹಲವು ಸುದ್ದಿಗಳು ಹರಿದಾಡಿದ್ದವು. ಇತ್ತೀಚೆಗೆ ರಮ್ಯಾ, ಊಹಾಪೋಹಗಳಿಗೆ ತೆರೆ ಎಳೆದು, ಸ್ಕ್ರಿಪ್ಟ್​​ಗಳನ್ನು ಕೇಳುತ್ತಿರುವುದು ನಿಜ. ಎಲ್ಲವೂ ಸ್ಪಷ್ಟವಾದಾಗ ತಮ್ಮ ಕಡೆಯಿಂದಲೇ ಅಪ್ಡೇಟ್ ಸಿಗಲಿದೆ ಎಂಬ ಸಂದೇಶ ರವಾನಿಸಿದ್ದರು. ಈ ಮೂಲಕ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡುವ ಸುಳಿವನ್ನು ನಟಿ ಅಧಿಕೃತವಾಗಿ ನೀಡಿದ್ದರು. ಈ ನಡುವೆ ರಮ್ಯಾ ತಾವು ನೋಡಿದ, ಇಷ್ಟಪಟ್ಟ ಕನ್ನಡ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಪ್ರಸ್ತುತ, ಸ್ಯಾಂಡಲ್​ವುಡ್​ನಲ್ಲಿ ಸಖತ್ ಸದ್ದು ಮಾಡುತ್ತಿರುವ ಚಿತ್ರಕ್ಕೆ ರಮ್ಯಾ ಅವರ ಕಡೆಯಿಂದ ಶಹಬ್ಬಾಸ್​ಗಿರಿ ಸಿಕ್ಕಿದೆ. ಹೌದು. ಶ್ರೀನಿ (Srini) ನಟನೆಯ ‘ಓಲ್ಡ್ ಮಾಂಕ್’ (Old Monk) ಸದ್ಯ ಎಲ್ಲೆಡೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಶ್ರೀನಿ ಅವರ ನಿರ್ದೇಶನ ಹಾಗೂ ನಟನೆಗೆ ಫುಲ್ ಮಾರ್ಕ್ಸ್ ಕೂಡ ಸಿಕ್ಕಿದೆ. ಈ ನಡುವೆ ಸ್ಯಾಂಡಲ್​ವುಡ್ ಕ್ವೀನ್ ‘ಓಲ್ಡ್ ಮಾಂಕ್​’ಗೆ ವಿಶೇಷ ಹೊಗಳಿಕೆ ನೀಡಿದ್ದಾರೆ.

ಶ್ರೀನಿ ವೃತ್ತಿ ಜೀವನದ ಪಯಣ ಸ್ಮರಿಸಿದ ರಮ್ಯಾ:

‘ಓಲ್ಡ್ ಮಾಂಕ್’ ನಾಯಕ ಶ್ರೀನಿ ನಿರ್ದೇಶಕರಾಗಿ ಛಾಪು ಮೂಡಿಸುತ್ತಿದ್ದಾರೆ. ಇದಕ್ಕೆ ‘ಓಲ್ಡ್ ಮಾಂಕ್’, ‘ಬೀರ್ಬಲ್’ ಮೊದಲಾದವುಗಳು ತಾಜಾ ಉದಾಹರಣೆ. ಇದೀಗ ಶ್ರೀನಿ ಅವರ ಪ್ರಯತ್ನ ರಮ್ಯಾಗೆ ಇಷ್ಟವಾಗಿದೆ. ಟ್ವಿಟರ್​ನಲ್ಲಿ ಈ ಕುರಿತು ಬರೆದುಕೊಂಡಿರುವ ನಟಿ, ಶ್ರೀನಿ ಅವರ ಚಿತ್ರರಂಗದ ಪಯಣವನ್ನು ಸ್ಮರಿಸಿಕೊಂಡಿದ್ದಾರೆ.

ಶ್ರೀನಿ ಈ ಹಿಂದೆ ಸುದೀಪ್, ರಮ್ಯಾ ನಟನೆಯ ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದಲ್ಲಿ ರಮ್ಯಾ ಸಹೋದರನಾಗಿ ಬಣ್ಣಹಚ್ಚಿದ್ದರು. ಅದನ್ನು ನೆನಪಿಸಿಕೊಂಡಿರುವ ರಮ್ಯಾ, ‘‘ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ನನ್ನ ಸಹೋದರನಾಗಿ ಬಣ್ಣ ಹಚ್ಚಿದ್ದರಿಂದ- ನಾಯಕ, ನಿರ್ದೇಶಕನಾಗಿ ಗುರುತಿಸಿಕೊಳ್ಳುವ ತನಕ, ಸುದೀರ್ಘ ಹಾದಿಯಲ್ಲಿ ನೀವು ನಡೆದಿದ್ದೀರಿ. ನಿಮ್ಮ ಈ ಪಯಣ ಖುಷಿ ಕೊಡುತ್ತದೆ’’ ಎಂದು ಶ್ರೀನಿ ಯಶಸ್ಸನ್ನು ಸಂಭ್ರಮಿಸಿದ್ದಾರೆ.

‘ಓಲ್ಡ್ ಮಾಂಕ್’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಧನ್ಯವಾದ ಹೇಳಿದ ನಟಿ, ‘‘ನಾನು ಚಿತ್ರವನ್ನು ಎಂಜಾಯ್ ಮಾಡಿದೆ. ನೀವೂ ನೋಡಿ, ನಗು ಗ್ಯಾರಂಟಿ’’ ಎಂದು ಬರೆದಿದ್ದಾರೆ. ರಮ್ಯಾ ಮಾತಿಗೆ ಪ್ರತಿಕ್ರಿಯಿಸಿರುವ ಶ್ರೀನಿ, ಧನ್ಯವಾದ ಹೇಳಿದ್ದಾರೆ.

ರಮ್ಯಾ ಹಂಚಿಕೊಂಡಿರುವ ಟ್ವೀಟ್:

ಫೆ.25ರಂದು ರಿಲೀಸ್ ಆಗಿದ್ದ ಓಲ್ಡ್ ಮಾಂಕ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶ್ರೀನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಬಣ್ಣಹಚ್ಚಿದ್ದಾರೆ. ಸುಜಯ್​ ಶಾಸ್ತ್ರಿ, ಎಸ್​. ನಾರಾಯಣ್​, ಸುದೇವ್​ ನಾಯರ್​, ಸಿಹಿ-ಕಹಿ ಚಂದ್ರು ಮೊದಲಾದವರು ತೆರೆಹಂಚಿಕೊಂಡಿರುವ ಈ ಚಿತ್ರಕ್ಕೆ ಸಿದ್ಧಿ ಎಂಟರ್​ಟೇನ್ಮೆಂಟ್ಸ್​, ಎಸ್​ ಒರಿಜಿನಲ್ಸ್​ ಬಂಡವಾಳ ಹೂಡಿದೆ.

ಇದನ್ನೂ ಓದಿ:

Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್​ ನೀಡುವ ‘ಓಲ್ಡ್​ ಮಾಂಕ್​’

Adipurush: ‘ಆದಿಪುರುಷ್’ ಚಿತ್ರತಂಡದಿಂದ ಬಿಗ್ ಅಪ್ಡೇಟ್; ₹ 400 ಕೋಟಿ ಬಜೆಟ್​​ನ ಚಿತ್ರ ತೆರೆಗೆ ಬರೋದು ಯಾವಾಗ?