ನಟಿ ರನ್ಯಾ ರಾವ್ (Ranya Rao) ಅವರಿಗೆ ಸಂಕಷ್ಟ ಹೆಚ್ಚಾಗಿದೆ. ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಅವರು ಸಿಕ್ಕಿ ಬಿದ್ದಿದ್ದಾರೆ. ಇಂದು (ಮಾರ್ಚ್ 4) ಸಂಜೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಮಾರ್ಚ್ 18ರವರೆಗೆ ರನ್ಯಾ ರಾವ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ‘ಮಾಣಿಕ್ಯ’, ‘ಪಟಾಕಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ರನ್ಯಾ ಅವರು ಡಿಜಿಪಿ ಡಾ. ಕೆ ರಾಮಚಂದ್ರ ರಾವ್ ಅವರ ಮಲಮಗಳು.
ಕಳೆದ ರಾತ್ರಿ ದುಬೈನಿಂದ ಕೆಂಪೇಗೌಡ ಏರ್ಪೋರ್ಟ್ಗೆ ರನ್ಯಾ ಬಂದಿದ್ದರು. ಅಲ್ಲಿಯೇ ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ಸಲುವಾಗಿ ರನ್ಯಾ ಅವರನ್ನು ವಶಕ್ಕೆ ನೀಡುವಂತೆ ಡಿಆರ್ಐ ಅಧಿಕಾರಿಗಳು ಕೇಳಿದ್ದಾರೆ. ಆದರೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜಡ್ಜ್ ಆದೇಶಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವುದಕ್ಕೂ ಮುನ್ನ ನಟಿಯ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದಿದೆ.
IPS ಅಧಿಕಾರಿ ರಾಮಚಂದ್ರ ರಾವ್ ಅವರ 2ನೇ ಹೆಂಡತಿಯ ಮೊದಲನೇ ಗಂಡನ ಮಗಳು ರನ್ಯಾ. ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದರು. ಬಿಸ್ನೆಸ್ ಉದ್ದೇಶದಿಂದ ದುಬೈಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ದೆಹಲಿ ಡಿಆರ್ಐ ಟೀಮ್ಗೆ ರನ್ಯಾ ಸ್ಮಗ್ಲಿಂಗ್ ಬಗ್ಗೆ ಮಾಹಿತಿ ಇತ್ತು.
ಇದನ್ನೂ ಓದಿ: ‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ
ಹಾಗಾಗಿ, ಮಾರ್ಚ್ 3ರಂದು ರನ್ಯಾ ಬರೋದಕ್ಕೂ 2 ಗಂಟೆ ಮೊದಲೇ ಡಿಆರ್ಐ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದುಬೈನ ಎಮೆರೈಟ್ಸ್ ಫ್ಲೈಟ್ನಲ್ಲಿ ರನ್ಯಾ ಬಂದರು. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ಅವರನ್ನು DRI ವಶಕ್ಕೆ ಪಡೆಯಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:18 pm, Tue, 4 March 25