ರವಿಚಂದ್ರನ್, ಉಪೇಂದ್ರಗೆ ಹೀರೋಯಿನ್ ಆದ ಈ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?

ಬಾಲಿವುಡ್​​ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಸಿನಿಪ್ರಿಯರನ್ನು ಕೂಡ ರಂಜಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗ ಅವರಿಗೆ 49ರ ಪ್ರಾಯ. ಆದರೂ ಕೂಡ ಅವರು ಫಿಟ್ನೆಸ್ ವಿಚಾರದಲ್ಲಿ ರಾಜಿ ಆಗಿಲ್ಲ. ಈಗಲೂ ಅವರು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.

ರವಿಚಂದ್ರನ್, ಉಪೇಂದ್ರಗೆ ಹೀರೋಯಿನ್ ಆದ ಈ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
Childhood Photo

Updated on: Jun 08, 2025 | 12:37 PM

ಇವರು ಕರುನಾಡಿನ ಸುಂದರಿ. ಹುಟ್ಟಿದ್ದು ಕರಾವಳಿಯಲ್ಲಿ. ಆದರೆ ಬೆಳೆದಿದ್ದು ಮುಂಬೈನಲ್ಲಿ. ಬಳಿಕ ಸೂಪರ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಕನ್ನಡ ಸಿನಿಮಾ (Kannada Cinema) ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದರು. ಇಂದಿಗೂ ಇವರಿಗೆ ಅಷ್ಟೇ ಬೇಡಿಕೆ ಇದೆ. ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗೂ ಮಾದರಿ. ಇಷ್ಟೆಲ್ಲ ಸುಳಿವು ನೀಡಿದರೆ ಇವರು ಯಾರೆಂಬುದು ಬಹುತೇಕರಿಗೆ ಗೊತ್ತಾಗುತ್ತದೆ. ಇನ್ನೂ ಸ್ವಲ್ಪ ಮಾಹಿತಿ ಬಿಟ್ಟು ಕೊಡುವುದಾದರೆ ಸದ್ಯಕ್ಕೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ಬೇರೆ ಯಾರೂ ಅಲ್ಲ, ಫೇಮಸ್ ನಟಿ ಶಿಲ್ಪಾ ಶೆಟ್ಟಿ. ಹೌದು, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಬಾಲ್ಯದ ಫೋಟೋ ಇದು.

ಇಂದು (ಜೂನ್ 8) ಶಿಲ್ಪಾ ಶೆಟ್ಟಿ ಅವರಿಗೆ ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ವಿಶೇಷವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದಿಂದ ಇಲ್ಲಿಯ ತನಕ ತಾವು ಸಾಗಿ ಬಂದ ಹಾದಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ನಟಿಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಜನ್ಮದಿನಕ್ಕೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ಮಂಗಳೂರಿನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ ಅವರು ಇಂದಿಗೂ ತವರಿಗೆ ಬಗ್ಗೆ ಪ್ರೀತಿ ಹೊಂದಿದ್ದಾರೆ. ಆಗಾಗ ಬಂದು ಅವರು ಇಲ್ಲಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿ ಬೆಳೆದರೂ ಕೂಡ ಅವರು ತಮ್ಮ ಊರಿನ ಮೇಲಿರುವ ಅಭಿಮಾನವನ್ನು ಕಳೆದುಕೊಂಡಿಲ್ಲ. ಆ ಕಾರಣದಿಂದಲೂ ಅವರನ್ನು ಕಂಡರೆ ಕರ್ನಾಟಕದಲ್ಲಿ ಇರುವ ಅಭಿಮಾನಿಗಳಿಗೆ ವಿಶೇಷ ಪ್ರೀತಿ.

ಬಾಲಿವುಡ್​​ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಕನ್ನಡದ ಸಿನಿಪ್ರಿಯರನ್ನು ಕೂಡ ಅವರು ರಂಜಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’, ‘ಒಂದಾಗೋಣ ಬಾ’ ಸಿನಿಮಾಗಳಲ್ಲಿ ರವಿಚಂದ್ರನ್​ಗೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಅಭಿನಯಿಸಿದರು. ‘ಆಟೋ ಶಂಕರ್’ ಸಿನಿಮಾದಲ್ಲಿ ಉಪೇಂದ್ರ ಜೊತೆ ಅವರು ತೆರೆ ಹಂಚಿಕೊಂಡರು. ಈಗ ‘ಕೆಡಿ’ ಸಿನಿಮಾದಲ್ಲಿ ಸತ್ಯವತಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾ ಮಾಡಿದ್ದು ಏಕೆ? ಉತ್ತರಿಸಿದ್ದ ನಟಿ

ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಡಿ’ ಸಿನಿಮಾ ತಂಡದವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಶಿಲ್ಪಾ ಶೆಟ್ಟಿ ಅವರಿಗೆ ತುಂಬ ಬೇಡಿಕೆ ಇದೆ. ಈಗ ಅವರಿಗೆ 49 ವರ್ಷ ವಯಸ್ಸು. ಫಿಟ್ನೆಸ್ ಬಗ್ಗೆ ಅವರು ಅಪಾರ ಕಾಳಜಿ ವಹಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.