ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ? ಈಗ ಇವರು ನಮ್ಮೊಂದಿಗಿಲ್ಲ

ಈ ಫೋಟೋದಲ್ಲಿರುವ ಮುದ್ದಾದ ಪುಟ್ಟ ಹುಡುಗಿ ದೊಡ್ಡವರಾದ ಬಳಿಕ ಜನಪ್ರಿಯ ನಾಯಕಿ ಆದರು. ಬೆಳ್ಳಿತೆರೆಯ ಮೇಲೆ ಮಿಂಚಿದರು.

ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ? ಈಗ ಇವರು ನಮ್ಮೊಂದಿಗಿಲ್ಲ
ಖ್ಯಾತ ನಟಿಯ ಬಾಲ್ಯದ ಫೋಟೋ

Updated on: Jul 18, 2023 | 7:08 AM

ಸೋಶಿಯಲ್ ಮೀಡಿಯಾ ವ್ಯಾಪ್ತಿ ಹೆಚ್ಚಿದ ಬಳಿಕ ವಿವಿಧ ರೀತಿಯ ಟ್ರೆಂಡ್​ಗಳು ಆರಂಭ ಆಗಿವೆ. ಅನೇಕ ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಫೋಟೋ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅಭಿಮಾನಿಗಳೂ ತಮ್ಮ ನೆಚ್ಚಿನ ಸೆಲೆಬ್ರಿಟಿಯ ಫೋಟೋ ಹಂಚಿಕೊಳ್ಳುತ್ತಾರೆ. ಈ ಮೇಲಿನ ಫೋಟೋದಲ್ಲಿರುವ ಮುದ್ದಾದ ಪುಟ್ಟ ಹುಡುಗಿ ದೊಡ್ಡವರಾದ ಬಳಿಕ ಜನಪ್ರಿಯ ನಾಯಕಿ ಆದರು. ಬೆಳ್ಳಿತೆರೆಯ ಮೇಲೆ ಮಿಂಚಿದರು. ದುರಾದೃಷ್ಟವಶಾತ್ ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸಿದರು. ದಕ್ಷಿಣದ ಭಾರತದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದ ಈ ನಟಿ ಬೇರಾರು ಅಲ್ಲ ಸೌಂದರ್ಯಾ (Soundarya). ಇಂದು (ಜುಲೈ 18) ಅವರ ಜನ್ಮದಿನ (Soundarya Birthday). ನಟಿಯನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ.

1992ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಸೌಂದರ್ಯಾ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆದರು. ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರಾದರೂ ತೆಲುಗಿನಿಂದ ಅವರಿಗೆ ಸಾಕಷ್ಟು ಆಫರ್​ಗಳು ಬಂತು. 2004ರ ಆಗಸ್ಟ್​ ತಿಂಗಳಲ್ಲಿ ಅವರ ನಟನೆಯ ‘ಆಪ್ತಮಿತ್ರ’ ಸಿನಿಮಾದ ನಟನೆಗೆ ಎಲ್ಲರೂ ಭೇಷ್ ಎಂದರು. ಬೇಸರದ ಸಂಗತಿ ಎಂದರೆ ಈ ಸಿನಿಮಾ ರಿಲೀಸ್​ಗೂ ಮೊದಲೇ ಅವರು ನಿಧನ ಹೊಂದಿದರು. ‘ಆಪ್ತಮಿತ್ರ’ದ ನಾಗವಲ್ಲಿ ಪಾತ್ರಕ್ಕೂ ಸೌಂದರ್ಯ ಸಾವಿಗೂ ಸಂಬಂಧ ಕಲ್ಪಿಸಲಾಗಿತ್ತು.

ಸೌಂದರ್ಯಾ ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟರು. ಏಪ್ರಿಲ್ 17, 2004ರಂದು ಬೆಂಗಳೂರಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ನಿಧನರಾದರು. ಪಕ್ಷವೊಂದರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸೌಂದರ್ಯಾ ವಿಮಾನ ಏರಿದರು. ವಿಮಾನ ಟೇಕ್​ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಈಡಾಯಿತು. ಈ ಅವಘಡದಲ್ಲಿ ಸೌಂದರ್ಯಾ ಜೊತೆಗೆ ಅವರ ಸಹೋದರ ಅಮರನಾಥ್​ ಕೂಡ ಮೃತಪಟ್ಟರು.

ಇದನ್ನೂ ಓದಿ: ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ಇದು ಆಪ್ತಮಿತ್ರ 2 ರೀಮೇಕಾ?

ಸೌಂದರ್ಯಾ ಜನ್ಮದಿನದ ಅಂಗವಾಗಿ ಅವರ ಬಾಲ್ಯದ ಮತ್ತು ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸೌಂದರ್ಯ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us