‘ಸ್ವಾಗ್ ಪಂಚ್ ಸ್ವಿಂಗ್’ ಎಂದು ಪೋಸ್ಟ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಅರ್ಥಕ್ಕಾಗಿ ಹುಡುಕಾಡಿದ ಫ್ಯಾನ್ಸ್
‘ಕೆಜಿಎಫ್ 2’ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ದುಡ್ಡಿನ ಹೊಳೆಯೇ ಹರಿದಿದೆ. ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡಲು ಬಲ ಸಿಕ್ಕಂತೆ ಆಗಿದೆ. ಹೀಗಾಗಿ, ಹೊಸಹೊಸ ಪ್ರಾಜೆಕ್ಟ್ಗಳನ್ನು ಘೋಷಣೆ ಮಾಡಲಾಗುತ್ತಿದೆ.
ವಿಜಯ್ ಕಿರಗಂದೂರು (Vijay Kiragandur) ಒಡೆತನದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಸಾಕಷ್ಟು ಸಿನಿಮಾಗಳನ್ನು ಘೋಷಣೆ ಮಾಡಿದೆ. ‘ಕೆಜಿಎಫ್’ ಸರಣಿಯಿಂದ ಈ ನಿರ್ಮಾಣ ಸಂಸ್ಥೆಯ ಖ್ಯಾತಿ ದೇಶಾದ್ಯಂತ ಪಸರಿಸಿದೆ. ಹೀಗಾಗಿ, ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈಗ ಹೊಸ ಘೋಷಣೆ ಮಾಡಲು ವಿಜಯ್ ಕಿರಗಂದೂರು ರೆಡಿ ಆಗಿದ್ದಾರೆ. ಜೂನ್ 10ರಂದು ಹೊಸ ಅಪ್ಡೇಟ್ ನೀಡುವ ಬಗ್ಗೆ ತಿಳಿಸಲಾಗಿದೆ.
ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಈ ಸಿನಿಮಾ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ದುಡ್ಡಿನ ಹೊಳೆಯೇ ಹರಿದಿದೆ. ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡಲು ಬಲ ಸಿಕ್ಕಂತೆ ಆಗಿದೆ. ಹೀಗಾಗಿ, ಹೊಸಹೊಸ ಪ್ರಾಜೆಕ್ಟ್ಗಳನ್ನು ಘೋಷಣೆ ಮಾಡಲಾಗುತ್ತಿದೆ.
ಇಂದು (ಜೂನ್ 9) ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಒಂದನ್ನು ಮಾಡಿದೆ. ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ‘ಸ್ವಾಗ್ ಪಂಚ್ ಸ್ವಿಂಗ್’ ಎಂದು ಬರೆಯಲಾಗಿದೆ. ಆ್ಯಕ್ಷನ್ ಆರಂಭವಾಗಲಿದೆ ಎನ್ನುವ ಶಬ್ದ ಕ್ಯಾಪ್ಶನ್ಲ್ಲಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿದೆ.
ಈ ಪೋಸ್ಟ್ ನೋಡಿ ಅಭಿಮಾನಿಗಳು ನಾನಾ ರೀತಿಯ ಊಹೆಗಳನ್ನು ಮುಂದಿಡುತ್ತಿದ್ದಾರೆ. ‘ಇದು ಯಶ್ ಅವರ 19 ಚಿತ್ರ ಆಗಿರಲಿಕ್ಕಿಲ್ಲ. ಇದು ಸುಧಾ ಕೊಂಗಾರ ಸಿನಿಮಾ ಬಗೆಗಿನ ಅಪ್ಡೇಟ್’ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ‘ಯುವರಾಜ್ ಕುಮಾರ್-ಸಂತೋಷ್ ಆನಂದ್ರಾಮ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಬಗೆಗಿನ ಅಪ್ಡೇಟ್ ಇರಬಹುದು’ ಎಂದು ಕೆಲವರು ಹೇಳುತ್ತಿದ್ದಾರೆ.
?????? ???! ?????? ??! ??? ???? ??????!#HombaleFilms pic.twitter.com/t9LqOObpB6
— Hombale Films (@hombalefilms) June 9, 2022
ಇದನ್ನೂ ಓದಿ: 50ನೇ ದಿನ ‘ಕೆಜಿಎಫ್ 2’ ಎಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ; ಇಲ್ಲಿದೆ ಮಾಹಿತಿ
‘ನಿನ್ನಿಂದಲೇ’, ‘ಮಾಸ್ಟರ್ಪೀಸ್’, ‘ರಾಜಕುಮಾರ’, ‘ಕೆಜಿಎಫ್: ಚಾಪ್ಟರ್ 1’, ‘ಯುವರತ್ನ’, ‘ಕೆಜಿಎಫ್: ಚಾಪ್ಟರ್ 2’ ಚಿತ್ರಗಳನ್ನು ‘ಹೊಂಬಾಳೆ ಫಿಲ್ಮ್ಸ್’ ಇಲ್ಲಿಯವರೆಗೆ ನಿರ್ಮಾಣ ಮಾಡಿದೆ. ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’, ‘ಸಲಾರ್’, ‘ಬಘೀರ’, ‘ರಿಚರ್ಡ್ ಆ್ಯಂಟನಿ’ ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಜೂನ್ 10ರಂದು ಯಾವ ರೀತಿಯ ಅಪ್ಡೇಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Thu, 9 June 22