ಅಂದು ‘ಮುಂಗಾರು ಮಳೆ’, ಇಂದು ‘ಮನದ ಕಡಲು’: ಯೋಗರಾಜ್ ಭಟ್-ಇ. ಕೃಷ್ಣಪ್ಪ ಹೊಸ ಸಿನಿಮಾ

‘ಮುಂಗಾರು ಮಳೆ’ ಸಿನಿಮಾದ ನಿರ್ದೇಶಕ ಯೋಗರಾಜ್‍ ಭಟ್‍ ಹಾಗೂ ನಿರ್ಮಾಪಕ ಇ. ಕೃಷ್ಣಪ್ಪ ಅವರು ಮತ್ತೆ ಒಂದಾಗಿದ್ದಾರೆ. ಈಗ ಅವರು ‘ಮನದ ಕಡಲು’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ದತ್ತಣ್ಣ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇಕಡ 95 ಭಾಗ ಶೂಟಿಂಗ್​ ಪೂರ್ಣಗೊಂಡಿದೆ.

ಅಂದು ‘ಮುಂಗಾರು ಮಳೆ’, ಇಂದು ‘ಮನದ ಕಡಲು’: ಯೋಗರಾಜ್ ಭಟ್-ಇ. ಕೃಷ್ಣಪ್ಪ ಹೊಸ ಸಿನಿಮಾ
‘ಮನದ ಕಡಲು’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Nov 28, 2024 | 4:24 PM

2006ರಲ್ಲಿ ‘ಮುಂಗಾರು ಮಳೆ’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಯೋಗರಾಜ್​ ಭಟ್​ ಹಾಗೂ ನಿರ್ಮಾಣ ಮಾಡಿದ್ದ ಇ. ಕೃಷ್ಣಪ್ಪ ಅವರು ಈಗ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ 18 ವರ್ಷಗಳ ನಂತರ ಅವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ‘ಮನದ ಕಡಲು’ ಎಂದು ಶೀರ್ಷಿಕೆ ಇಡಲಾಗಿದೆ. ಸುಮುಖ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಅನುಭವಿ ನಟ ರಂಗಾಯಣ ರಘು ಅವರಿಗೂ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವಿದೆ.

ಜಿ. ಗಂಗಾಧರ್ ಅವರು ‘ಮನದ ಕಡಲು’ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆ ಸುದ್ದಿಗೋಷ್ಠಿ ನಡೆಸಲಾಗಿದೆ. ಸಿನಿಮಾ ಬಗ್ಗೆ ಯೋಗರಾಜ್​ ಭಟ್​ ಅವರು ಮಾತನಾಡಿದರು. ‘ಕೊರೋನಾ ನಂತರ ಮತ್ತೆ ಇ. ಕೃಷ್ಣಪ್ಪ ಅವರ ಜೊತೆ ಸಿನಿಮಾ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಅಂತ ಕೃಷ್ಣಪ್ಪ ಹೇಳಿದರು. ಅದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಯಾವುದೋ ಕೆಲಸದ ಸಲುವಾಗಿ ಫೋನ್‍ ಮಾಡಿದ್ದ ಸುಮುಖ ನಮಗೆಲ್ಲ ಇಷ್ಟವಾದ’ ಎಂದಿದ್ದಾರೆ ಯೋಗರಾಜ್​ ಭಟ್​.

‘ಈ ಸಿನಿಮಾಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಶೂಟಿಂಗ್​ ಮಾಡಿದ್ದೇವೆ. ಕರ್ನಾಟಕದ 12 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್‍ ಜಂಜೀರ ಸಮುದ್ರದ ಮಧ್ಯ ಇರುವ ಕೋಟೆಯಲ್ಲಿ ಚಿತ್ರೀಕರಣ ನಡೆದಿದೆ. ಅದಕ್ಕೆ 15 ರೀತಿಯ ಅನುಮತಿ ಬೇಕಿತ್ತು. ಅದೊಂದು ಯುದ್ಧ ಮಾಡಿದ ಅನುಭವ. ಈ ಸಿನಿಮಾದಲ್ಲಿ ರಂಗಾಯಣ ರಘು ಅವರು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ’ ಎಂದು ಯೋಗರಾಜ್​ ಭಟ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ

‘ಇದು ಒಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಇದ್ದಾರೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸ ಆಗುತ್ತಿಲ್ಲ. ಹೊಸಬರಿಗೆ ಒಳ್ಳೆಯದಾಗಬೇಕು. ಈ ಸಿನಿಮಾ ಕೂಡ ಮುಂಗಾರು ಮಳೆ ಮಟ್ಟಕ್ಕೆ ಹೋಗಬೇಕು’ ಎಂದು ನಿರ್ಮಾಪಕ ಇ. ಕೃಷ್ಣಪ್ಪ ಹೇಳಿದ್ದಾರೆ. ಸಿನಿಮಾ ಹೀರೋ ಬಗ್ಗೆ ರಂಗಾಯಣ ರಘು ಮಾತನಾಡಿದರು. ‘ನಟ ಎಂದರೆ ಜಿಮ್‍ನಿಂದ ಬರಬೇಕು ಎಂಬಂತಾಗಿದೆ. ಅವರಿಗೆ ಭಾಷೆ-ಭಾವ ತಿಳಿದಿರುವುದಿಲ್ಲ. ಸಿನಿಮಾಗೆ ಬೇಕಾಗಿರುವುದು ಅಭಿನಯ. ಸುಮುಖ ಓದಿಕೊಂಡು, ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾನೆ. ಚೆನ್ನಾಗಿ ಅಭಿನಯಿಸುತ್ತಾನೆ’ ಎಂದಿದ್ದಾರೆ ರಂಗಾಯಣ ರಘು.

ಹಿರಿಯ ನಟ ದತ್ತಣ್ಣ ಅವರು ಈ ಸಿನಿಮಾದಲ್ಲಿ 100 ವರ್ಷದ ಮುದುಕನ ಪಾತ್ರ ಮಾಡಿದ್ದಾರೆ. ಹರಿಕೃಷ್ಣ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್​ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ