ಭಾರಿ ಬೆಲೆಗೆ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕು ಮಾರಾಟ
Kiccha Sudeep: ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ನಿನ್ನೆ ಘೋಷಣೆ ಮಾಡಲಾಗಿದೆ. ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಒಟಿಟಿ ಹಕ್ಕು ಈಗಾಗಲೇ ಭಾರಿ ಮೊತ್ತಕ್ಕೆ ಪ್ರತಿಷ್ಠಿತ ವಾಹಿನಿಗಳಿಗೆ ಮಾರಾಟವಾಗಿದೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿದು ಬಹುಸಮಯವಾಗಿತ್ತು. ಸಿನಿಮಾದ ಬಿಡುಗಡೆ ದನಅಂಕವನ್ನು ನಿನ್ನೆಯಷ್ಟೆ ಘೋಷಣೆ ಮಾಡಲಾಗಿದೆ. ಸಿನಿಮಾ ಡಿಸೆಂಬರ್ 25 ಕ್ಕೆ ತೆರೆಗೆ ಬರಲಿದೆ. ಎರಡು ವರ್ಷದ ಬಳಿಕ ಸುದೀಪ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾ ಒಂದು ತೆರೆಗೆ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೆ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ನಿರ್ಮಾಪಕರು ಮಾರಾಟ ಮಾಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಜೀ ಕನ್ನಡ ವಾಹಿನಿ ಖರೀದಿ ಮಾಡಿದೆ. ‘ಮ್ಯಾಕ್ಸ್’ ಸಿನಿಮಾದ ಸ್ಯಾಟಲೈಟ್ ಹಕ್ಕಿಗೆ ಬರೋಬ್ಬರಿ 28 ಕೋಟಿ ರೂಪಾಯಿಗಳನ್ನು ಜೀ ಕನ್ನಡ ವಾಹಿನಿ ನೀಡಿದೆ. ಕನ್ನಡ ಮನೊರಂಜನಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಸಿನಿಮಾಗಳಲ್ಲಿ ಒಂದಾಗಿದೆ ‘ಮ್ಯಾಕ್ಸ್’ ಸಿನಿಮಾ. ಸಿನಿಮಾ ಬಿಡುಗಡೆ ಆದ ಎರಡು ತಿಂಗಳಲ್ಲಿ ಈ ಸಿನಿಮಾ ಟಿವಿಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.
ಸಿನಿಮಾದ ಒಟಿಟಿ ಹಕ್ಕನ್ನು ಸಹ ಜೀ ಅವರೇ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಜೀ5 ನಲ್ಲಿ ಸಿನಿಮಾ ಪ್ರಸಾರವಾಗಲಿದೆ ಎನ್ನಲಾಗುತ್ತಿದ್ದು, ಡಿಜಿಟಲ್ ಹಕ್ಕನ್ನು ಸುಮಾರು 40 ಕೋಟಿಗೆ ಖರೀದಿ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ ಆದರೆ ಈ ಬಗ್ಗೆ ಖಾತ್ರಿ ಇಲ್ಲ. ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ‘ಮ್ಯಾಕ್ಸ್’ ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡಿದೆಯಂತೆ.
ಇದನ್ನೂ ಓದಿ:ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಸಲಾಯಿತು. ತಿಂಗಳುಗಳ ಕಾಲ ಅಲ್ಲಿಯೇ ಇದ್ದ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ತೆಲುಗಿನ ವರಲಕ್ಷ್ಮಿ ಶರತ್ಕುಮಾರ್, ಸುನಿಲ್, ಕನ್ನಡದ ಪ್ರಮೋದ್ ಶೆಟ್ಟಿ, ರವಿಶಂಕರ್ ಇನ್ನೂ ಹಲವು ಕಲಾವಿದರಿದ್ದಾರೆ. 2022 ರಲ್ಲಿ ಬಿಡುಗಡೆ ಆದ ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್ ನಾಯಕನಾಗಿ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಇದೀಗ ‘ಮ್ಯಾಕ್ಸ್’ ಸಿನಿಮಾ ತೆರೆಗೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Thu, 28 November 24