Aviva Bidapa: ವಿವಾಹಕ್ಕೂ ಮುನ್ನ ಸೋಲ್​ಮೇಟ್​ನಿಂದ ಅವಿವಾಗೆ ಸಿಕ್ತು ಚೆಂದದ ಗಿಫ್ಟ್​; ಇದರ ವಿಶೇಷತೆಗಳೇನು?

ಅಭಿಷೇಕ್ ಹಾಗೂ ಅವಿವಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಪರಸ್ಪರ ಪರಿಚಯಗೊಂಡು, ನಂತರ ಇಬ್ಬರ ಮಧ್ಯೆ ಪ್ರಿತಿ ಮೊಳೆಯಿತು. ಈಗ ಇವರು ಮದುವೆ ಆಗುತ್ತಿದ್ದಾರೆ.

Aviva Bidapa: ವಿವಾಹಕ್ಕೂ ಮುನ್ನ ಸೋಲ್​ಮೇಟ್​ನಿಂದ ಅವಿವಾಗೆ ಸಿಕ್ತು ಚೆಂದದ ಗಿಫ್ಟ್​; ಇದರ ವಿಶೇಷತೆಗಳೇನು?
ಅವಿವಾ

Updated on: Jun 05, 2023 | 8:05 AM

ಅವಿವಾ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ಇಂದು (ಜೂನ್ 5) ಮದುವೆ ಆಗುತ್ತಿದ್ದಾರೆ. ಅನೇಕ ವರ್ಷಗಳ ಪ್ರೀತಿಗೆ ಇವರು ಹೊಸ ಅರ್ಥ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅದ್ದೂರಿ ಮದುವೆ ನಡೆಯಲಿದೆ. ಇದಕ್ಕೂ ಮೊದಲು ಅವಿವಾಗೆ ಸಖತ್ ಗಿಫ್ಟ್ ಸಿಕ್ಕಿದೆ. ಇದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಗಿಫ್ಟ್ ಸಿಕ್ಕಿರೋದು ಅವರ ಸೋಲ್​ಮೇಟ್​ನಿಂದ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಈ ಚೈನ್​ಗೆ ಒಂದು ವಿಶೇಷತೆ ಇದೆ.

ಅಭಿಷೇಕ್ ಹಾಗೂ ಅವಿವಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಪರಸ್ಪರ ಪರಿಚಯಗೊಂಡು, ನಂತರ ಇಬ್ಬರ ಮಧ್ಯೆ ಪ್ರಿತಿ ಮೊಳೆಯಿತು. ಈಗ ಇವರು ಮದುವೆ ಆಗುತ್ತಿದ್ದಾರೆ. ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಮಗಳು ಅವಿವಾ ಬಿಡಪ. ಅವರು ಕೂಡ ತಂದೆಯಂತೆ ಫ್ಯಾಷನ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಫ್ಯಾಷನ್ ಕ್ಷೇತ್ರದಲ್ಲಿ ಅವಿವಾ ಬ್ಯುಸಿ ಆಗಿದ್ದಾರೆ. ಇವರಿಗೂ ದೊಡ್ಡ ಅಭಿಮಾನಿ ಬಳಗ ಇದೆ.

ಅಮೆರಿಕದ ಲಾಸ್ ಏಂಜಲೀಸ್​ನಲ್ಲಿರುವ ಅವರ ಗೆಳತಿ ಒಬ್ಬರು ಅವಿವಾಗೆ ಗಿಫ್ಟ್ ಕಳುಹಿಸಿದ್ದಾರೆ. ಚಿನ್ನದ ಸರ ಇದಾಗಿದ್ದು, ಭಾರತ ಹಾಗೂ ಅಮೆರಿಕದ ನಕಾಶೆ ಸರದ ಮೇಲಿದೆ. ಎರಡೂ ದೇಶಗಳ ನಕಾಶೆ ಒಂದೇ ಚೈನ್​​ನಲ್ಲಿರೋದು ಇದರ ವಿಶೇಷತೆ. ಈ ಚೈನ್ ಫೋಟೋ ಸ್ಟೇಟಸ್​ಗೆ ಹಾಕಿಕೊಂಡಿರೋ ಅವಿವಾ, ‘ಅಮೆರಿಕ ಮತ್ತು ಭಾರತ. ಸೋಲ್​ಮೇಟ್ಸ್​. ಐ ಲವ್​ ಯೂ’ ಎಂದು ಅವರ ಫ್ರೆಂಡ್​ನ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಅಭಿಷೇಕ್-ಅವಿವಾ ಮದುವೆಗಾಗಿ ಸಿನಿಮಾ ಮಾದರಿ ಸೆಟ್​ಗಳ ನಿರ್ಮಾಣ, ಭರ್ಜರಿ ತಯಾರಿ

ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಇಂದು ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಿ ಹಾಕುವ ಸಾಧ್ಯತೆ ಇದೆ. ಈಗಾಗಲೇ ಮದುವೆಗೆ ಸಿದ್ಧತೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ