ಮೆಟ್ರೋ ಒಳಗೆ ಅಕ್ಷಯ್ ಕುಮಾರ್-ಇಮ್ರಾನ್ ಹಷ್ಮಿ ಡ್ಯಾನ್ಸ್; ಅರೆಸ್ಟ್ ಮಾಡಿ ಎಂದ ನೆಟ್ಟಿಗರು

|

Updated on: Feb 17, 2023 | 9:54 AM

ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಷ್ಮಿ ‘ಸೆಲ್ಫಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಮುಂಬೈನ ಮೆಟ್ರೋ ಒಳಗೆ ತೆರಳಿದ್ದರು.

ಮೆಟ್ರೋ ಒಳಗೆ ಅಕ್ಷಯ್ ಕುಮಾರ್-ಇಮ್ರಾನ್ ಹಷ್ಮಿ ಡ್ಯಾನ್ಸ್; ಅರೆಸ್ಟ್ ಮಾಡಿ ಎಂದ ನೆಟ್ಟಿಗರು
ಅಕ್ಷಯ್​ ಕುಮಾರ್-ಇಮ್ರಾನ್ ಹಷ್ಮಿ
Follow us on

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈಗ ತುರ್ತಾಗಿ ಒಂದು ಗೆಲುವು ಬೇಕಿದೆ. ಇದಕ್ಕಾಗಿ ಅವರು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಕಳೆದ ವರ್ಷ ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್ ಆದರೂ ಅದರಲ್ಲಿ ಸೋತಿದ್ದೇ ಹೆಚ್ಚು. ಈ ವರ್ಷದ ಅವರ ಮೊದಲ ಸಿನಿಮಾ ‘ಸೆಲ್ಫಿ’ (Selfeee) ಫೆ.24ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ಅವರು ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ. ಪ್ರಮೋಷನ್​ಗಾಗಿ ಚಲಿಸುತ್ತಿರುವ ಮೆಟ್ರೋದಲ್ಲಿ ಡ್ಯಾನ್ಸ್ ಮಾಡಿದ ಅವರನ್ನು ಅರೆಸ್ಟ್ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿದೆ.

ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಷ್ಮಿ ‘ಸೆಲ್ಫಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಮುಂಬೈನ ಮೆಟ್ರೋ ಒಳಗೆ ತೆರಳಿದ್ದರು. ಯಾವುದೇ ಸೂಚನೆ ಇಲ್ಲದೆ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದರಿಂದ ಸಹಜವಾಗಿಯೇ ಫ್ಯಾನ್ಸ್​ಗೆ ಖುಷಿಯಾಗಿದೆ. ಅಕ್ಷಯ್ ಹಾಗೂ ಇಮ್ರಾನ್ ಜತೆ ಸೆಲ್ಫಿ ತೆಗೆದುಕೊಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಅಕ್ಷಯ್ ಕುಮಾರ್ ಅವರು ಪ್ರಚಾರದ ವೇಳೆ ಮೆಟ್ರೋ ಒಳಗೆ ಡ್ಯಾನ್ಸ್ ಮಾಡಿದ್ದಾರೆ. ಈ ಮೊದಲು ರೀಲ್ಸ್​​ಗಾಗಿ ಮೆಟ್ರೋ ಒಳಗೆ ಡ್ಯಾನ್ಸ್ ಮಾಡಿದ್ದ ಯುವತಿಯನ್ನು ಬಂಧಿಸಿದ ಪ್ರಕರಣ ನಡೆದಿತ್ತು. ಹೀಗಾಗಿ, ಅಕ್ಷಯ್ ಹಾಗೂ ಇಮ್ರಾನ್ ಅವರನ್ನು ಬಂಧಿಸಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ‘ಇದೇ ಡ್ಯಾನ್ಸ್​ನ ಸ್ಥಳೀಯ ಟ್ರೇನ್​ನಲ್ಲಿ ಮಾಡಿ. ಮೆಟ್ರೋ ಒಳಗಲ್ಲ’ ಎಂದು ಟೀಕೆ ಮಾಡಿದ್ದಾರೆ. ‘ದೆಹಲಿ ಮೆಟ್ರೋದಲ್ಲಿ ಒಮ್ಮೆ ಕಾಲಿಡಿ ನೋಡೋಣ’ ಎಂದು ಕೆಲವರು ಸವಾಲು ಹಾಕಿದ್ದಾರೆ. ‘ಪ್ರಚಾರಕ್ಕಾಗಿ ಏನೇನು ಮಾಡ್ತೀರೋ’ ಎಂದು ಕಮೆಂಟ್ ಹಾಕಿ ನಗುವ ಎಮೋಜಿ ಹಾಕಿದ್ದಾರೆ.

ಇದನ್ನೂ ಓದಿ: Ram Charan: ಅಕ್ಷಯ್​ ಕುಮಾರ್​ ಸಿನಿಮಾದ ಹಾಡಿಗೆ ರಾಮ್​ ಚರಣ್​ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​

ರಾಜ್ ಮೆಹ್ತಾ ಅವರು ‘ಸೆಲ್ಫಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ರಿಮೇಕ್ ಇದಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜರಮೂಡು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ಸೆಲ್ಫಿ’ ಚಿತ್ರದಲ್ಲಿ ನುಸ್ರತ್ ಬರೂಚಾ ಮೊದಲಾದವರು ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Fri, 17 February 23