AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aparna Vastarey: ‘ಬಾಗಿಲುಗಳು ಎಡಕ್ಕೆ ತೆರೆಯುತ್ತವೆ..’: ಮೆಟ್ರೋ ರೈಲಿನಲ್ಲಿ ಕೇಳಿಸುವ ಅಪರ್ಣಾ ಧ್ವನಿಯ ಹಿಂದಿದೆ ಜವಾಬ್ದಾರಿಯ ಕಥೆ

Bengaluru Metro Announcer: ಹತ್ತಾರು ವರ್ಷಗಳಿಂದ ಮೆಟ್ರೋ ರೈಲಿನಲ್ಲಿ ಕೇಳಿಸುತ್ತಿರುವ ಕನ್ನಡದ ಪ್ರಕಟಣೆಗಳ ಧ್ವನಿ ಅಪರ್ಣಾ ವಸ್ತಾರೆ ಅವರದ್ದು. ಅದರ ಹಿಂದಿರುವ ಒಂದಷ್ಟು ಆಸಕ್ತಿಕರ ಸಂಗತಿಗಳು ಇಲ್ಲಿವೆ..

Aparna Vastarey: ‘ಬಾಗಿಲುಗಳು ಎಡಕ್ಕೆ ತೆರೆಯುತ್ತವೆ..’: ಮೆಟ್ರೋ ರೈಲಿನಲ್ಲಿ ಕೇಳಿಸುವ ಅಪರ್ಣಾ ಧ್ವನಿಯ ಹಿಂದಿದೆ ಜವಾಬ್ದಾರಿಯ ಕಥೆ
ಅಪರ್ಣಾ ವಸ್ತಾರೆ, ಬೆಂಗಳೂರು ಮೆಟ್ರೋ
ಮದನ್​ ಕುಮಾರ್​
|

Updated on:Feb 16, 2023 | 4:44 PM

Share

ಬೆಂಗಳೂರಿನ ಜನಜೀವನದಲ್ಲಿ ಮೆಟ್ರೋ ರೈಲಿನ (Bengaluru Metro) ಪ್ರಯಾಣ ಎಂದರೆ ಒಂದು ಅವಿಭಾಜ್ಯ ಅಂಗ. ಪ್ರತಿ ದಿನ ಲಕ್ಷಾಂತರ ಮಂದಿ ಓಡಾಡುವ ಬದುಕಿನ ಬಂಡಿ ಇದು. ಟ್ರಾಫಿಕ್​ ಕಿರಿಕಿರಿ ಇಲ್ಲದೇ ತಣ್ಣಗೆ ಕುಳಿತರೆ ತಲುಪಬೇಕಾದ ಸ್ಥಳ ಕೆಲವೇ ನಿಮಿಷಗಳಲ್ಲಿ ಬಂದಿರುತ್ತದೆ. ‘ನಮ್ಮ ಮೆಟ್ರೋ’ (Namma Metro) ರೈಲಿನೊಳಗೆ ಕಾಲಿಟ್ಟ ಪ್ರತಿಯೊಬ್ಬರಿಗೂ ಒಂದು ಮಧುರ ಧ್ವನಿ ಕೇಳಿಸುತ್ತದೆ. ‘ರೈಲು ಈಗ ಇಂದಿರಾ ನಗರಕ್ಕೆ ಬರಲಿದೆ. ಬಾಗಿಲುಗಳು ಎಡಕ್ಕೆ ತೆರೆಯಲಿವೆ. ರೈಲು ಹತ್ತುವ ಮತ್ತು ಇಳಿಯುವ ಮುನ್ನ ಅಂತರದ ಬಗ್ಗೆ ಗಮನ ಇರಲಿ..’ ಎಂಬ ಈ ಧ್ವನಿ ಅಪರ್ಣಾ ವಸ್ತಾರೆ (Aparna Vastarey) ಅವರದ್ದು. ಈ ಧ್ವನಿ ಕೇವಲ ಆಕರ್ಷಕವಷ್ಟೇ ಅಲ್ಲ. ಅದು ಒಂದು ಜವಾಬ್ದಾರಿಯುತ ಧ್ವನಿಯೂ ಹೌದು. ಅದು ಹೇಗೆ ಅಂತೀರಾ? ಈ ಲೇಖನ ಓದಿ..

2011ರ ಅಕ್ಟೋಬರ್​ನಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಆರಂಭ ಆಯಿತು. ಅದಕ್ಕೂ ಕೆಲವು ತಿಂಗಳ ಮುಂಚೆ ರೈಲಿನ ಪ್ರಕಟಣೆಗಳ ಧ್ವನಿ ಮುದ್ರಣ ಮಾಡಲಾಯಿತು. ಅದಾಗಲೇ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಿರೂಪಕಿ ಅಪರ್ಣಾ ಅವರು ಮೆಟ್ರೋ ರೈಲಿನ ಪ್ರಕಟಣೆಗಳಿಗೆ ಧ್ವನಿ ನೀಡಲು ಆಯ್ಕೆ ಆದರು. ಅಂದಿನಿಂದ ಇಂದಿನವರೆಗೂ ಮೆಟ್ರೋ ರೈಲಿನಲ್ಲಿ ಕೇಳಿಸುವ ಕನ್ನಡದ ಪ್ರಕಟಣೆಗಳು ಅವರ ಧ್ವನಿಯಲ್ಲೇ ಇವೆ. ನಿಲ್ದಾಣಗಳ ಹೆಸರನ್ನು ಸರಿಯಾಗಿ ಬಳಸಬೇಕು/ಉಚ್ಛರಿಸಬೇಕು ಎಂಬುದು ಅಪರ್ಣಾ ಅವರ ಕಾಳಜಿ. ಅದಕ್ಕಾಗಿ ಅವರು ಆರಂಭದ ದಿನಗಳಲ್ಲಿ ಒಂದು ಜವಾಬ್ದಾರಿಯುತ ಕಾರ್ಯ ಮಾಡಿದ್ದರು.

ಇದನ್ನೂ ಓದಿ: ‘ನಮ್ಮ ಮೆಟ್ರೋ’ಗಾಗಿ 150 ವರ್ಷ ಪುರಾತನ ಆಂಜನೇಯ ದೇಗುಲ ನೆಲಸಮ

ಇದನ್ನೂ ಓದಿ
Image
Driverless Metro: ರಾಜಧಾನಿಯಲ್ಲಿ ಸಂಚರಿಸಲಿವೆ ಚಾಲಕ ರಹಿತ ಮೆಟ್ರೋ ರೈಲು: ಇಲ್ಲಿದೆ ವಿಶೇಷತೆ
Image
Namma Metro: ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL
Image
Bengaluru Metro: ಬೆಂಗಳೂರಿನಲ್ಲಿ ಶೀಘ್ರ ಕಾಮನ್ ಮೊಬಿಲಿಟಿ ಕಾರ್ಡ್; ಮೆಟ್ರೋ ನಿಗಮ ಘೋಷಣೆ
Image
Bengaluru: ಮೆಟ್ರೋ ಪಿಲ್ಲರ್ ಉರುಳಿ ಬಿದ್ದು ತಾಯಿ-ಮಗು ಸಾವು ಪ್ರಕರಣ; ಎರಡೂವರೆ ಗಂಟೆಗಳ ಕಾಲ ಮೆಟ್ರೋ ಎಂಡಿ ವಿಚಾರಣೆ

ಆಗಿನ ಕೆಲವು ಘಟನೆಗಳನ್ನು ಅಪರ್ಣಾ ಅವರು ಈಗ ನೆನಪು ಮಾಡಿಕೊಂಡಿದ್ದಾರೆ. ‘ಜರ್ಮನಿ ಮತ್ತು ಚೆನ್ನೈ ಮೂಲದವರು ಆ ಧ್ವನಿ ಮುದ್ರಣದ ಉಸ್ತುವಾರಿ ವಹಿಸಿದ್ದರು. ಮೊದಲೇ ಸಿದ್ಧವಾಗಿದ್ದ ಸ್ಕ್ರಿಪ್ಟ್​ನಲ್ಲಿ ಕೆಲವು ನಿಲ್ದಾಣಗಳ ಹೆಸರು ತಪ್ಪಾಗಿ ಬರೆಯಲಾಗಿತ್ತು. ಅದು ನನಗೆ ಸರಿ ಎನಿಸಲಿಲ್ಲ. ಸರಿಯಾದ ಬಳಕೆ/ಉಚ್ಛಾರ ಹೇಗಿದೆ ಎಂಬುದನ್ನು ಅವರಿಗೆ ನಾನು ತಿಳಿಸಿ ಹೇಳಿದೆ. ಅದನ್ನು ಅವರು ಕೂಡಲೇ ಬದಲಾಯಿಸುವಂತೆ ಇರಲಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಯಾವುದಕ್ಕೂ ಇರಲಿ ಅಂತ ಸ್ಕ್ರಿಪ್ಟ್​ನಲ್ಲಿ ಇದ್ದಂತೆ ಹಾಗೂ ನಮ್ಮಲ್ಲಿ ಬಳಕೆಯಲ್ಲಿ ಇರುವಂತೆ ಎರಡು-ಮೂರು ರೀತಿಯಲ್ಲಿ ವಾಯ್ಸ್​ ರೆಕಾರ್ಡ್​ ಮಾಡಿಕೊಟ್ಟೆ’ ಎಂದು ಆ ದಿನಗಳನ್ನು ಅಪರ್ಣಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ವರೆಗೂ ‘ನಮ್ಮ ಮೆಟ್ರೋ’ ವಿಸ್ತರಣೆ

ಅಂದು ಅಪರ್ಣಾ ಅವರು ತೋರಿದ ಆ ಜವಾಬ್ದಾರಿಯ ನಡೆ ಗಮನಾರ್ಹ. ಸ್ಕ್ರಿಪ್ಟ್​ನಲ್ಲಿ ತಪ್ಪಾಗಿ ಬರೆಯಲಾಗಿದ್ದ ನಿಲ್ದಾಣಗಳ ಹೆಸರನ್ನು ಸರಿಪಡಿಸಬೇಕು ಎಂದು ಅವರು ಕಾಳಜಿ ವಹಿಸಿದ್ದರಿಂದ ಅದು ಪರಿಶೀಲನೆಗೊಂಡು, ಅಂತಿಮವಾಗಿ ಸರಿಯಾದ ಉಚ್ಛಾರವನ್ನೇ ಉಳಿಸಿಕೊಳ್ಳಲಾಯಿತು. ಇಲ್ಲದಿದ್ದರೆ ಮೆಟ್ರೋದಲ್ಲಿ ಪ್ರಯಾಣಿಸುವ ಕೋಟ್ಯಂತರ ಜನರ ಕಿವಿಗೆ ತಪ್ಪು ಉಚ್ಛಾರವನ್ನು ತಲುಪಿಸಿದಂತೆ ಆಗುತ್ತಿತ್ತು. ಕೊನೆಗೆ ಅದೇ ಸರಿ ಎಂಬಂತಹ ವಾತಾವರಣ ನಿರ್ಮಾಣ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅಂತಹ ಪ್ರಮಾದ ಆಗದಂತೆ ನೋಡಿಕೊಳ್ಳುವಲ್ಲಿ ಅಪರ್ಣಾ ಅವರ ಕಾಳಜಿ ಕೆಲಸ ಮಾಡಿತು.

ಇದನ್ನೂ ಓದಿ: ನಮ್ಮ ಮೆಟ್ರೋ ಆನ್​ಲೈನ್ ಟಿಕೆಟ್​​ಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನವೇ ಸಾವಿರಾರು ಜನರಿಂದ ಟಿಕೆಟ್ ಖರೀದಿ

ನಿಲ್ದಾಣಗಳ ಹೆಸರು ಮಾತ್ರವಲ್ಲದೇ, ಇನ್ನುಳಿದ ವಾಕ್ಯಗಳಲ್ಲೂ ತಪ್ಪಾದ ಭಾಷಾಂತರ ಇದ್ದವು. ಇಂಗ್ಲಿಷ್​ನಲ್ಲಿ ಸರಿಯಾಗಿದ್ದ ವಾಕ್ಯಗಳನ್ನು ಕನ್ನಡಕ್ಕೆ ಯಾಂತ್ರಿಕವಾಗಿ ಭಾಷಾಂತರಿಸಿದ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ತಪ್ಪು ಅರ್ಥಗಳು ಹೊಮ್ಮುತ್ತಿದ್ದವು. ಅವುಗಳನ್ನು ಕೂಡ ಸರಿಪಡಿಸಬೇಕು ಎಂದು ಅಪರ್ಣಾ ಸಲಹೆ ನೀಡಿದ್ದರು. ಅದರಿಂದಾಗಿ ಸರಿಯಾದ ವಾಕ್ಯಗಳ ಬಳಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ‘ವಾಕ್ಯ ಅಥವಾ ಪ್ರದೇಶದ ಹೆಸರು ತಪ್ಪಾಗಿದೆ ಅಂತ ಈವರೆಗೂ ಯಾರೂ ದೂರು ಹೇಳಿಲ್ಲ’ ಎಂದಿದ್ದಾರೆ ಅಪರ್ಣಾ.

ಇದನ್ನೂ ಓದಿ: ಕನ್ನಡಿಗರ ಪಾಲಿಗೆ ಸಂತಸದ ಸುದ್ದಿ..ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ‘ಸರ್​ಎಂವಿ’ ಹೆಸರು

ಮೆಟ್ರೋ ಮಾತ್ರವಲ್ಲದೇ ಭಾರತೀಯ ರೈಲ್ವೆಯ ಹಲವು ಪ್ರಕಟಣೆಗಳಲ್ಲೂ ಅಪರ್ಣಾ ಅವರ ಧ್ವನಿ ಕೇಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬಿಎಸ್​ಎನ್​ಎಲ್​, ಏರ್​ಟೆಲ್​ ಮುಂತಾದ ಸಂಸ್ಥೆಗಳಿಗೂ ಅವರು ಧ್ವನಿ ನೀಡಿದರು. ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಎಲ್ಲ ಕಡೆಗಳಲ್ಲೂ ಅವರು ಸ್ವಚ್ಛ ಕನ್ನಡದ ಕಂಪನ್ನು ಹರಡುವ ಕಾಯಕವನ್ನು ಮಾಡುತ್ತಲೇ ಬಂದಿದ್ದಾರೆ.

ನಟಿಯಾಗಿಯೂ ಅಪರ್ಣಾ ಜನಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಮಜಾ ಟಾಕೀಸ್​ನಲ್ಲಿ ಕಾಣಿಸಿಕೊಂಡು ನಗು ಮೂಡಿಸುವ ಕೆಲಸ ಮಾಡಿದರು. ಮತ್ತೆ ಅವರು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:32 pm, Thu, 16 February 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ