ನಮ್ಮ ಮೆಟ್ರೋ ಆನ್​ಲೈನ್ ಟಿಕೆಟ್​​ಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನವೇ ಸಾವಿರಾರು ಜನರಿಂದ ಟಿಕೆಟ್ ಖರೀದಿ

ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನವೇ BMRCL ಅಧಿಕೃತವಾಗಿ ಆನ್​ಲೈನ್​ ಟಿಕೆಟ್​ ಜಾರಿ ಮಾಡಿತ್ತು. ಮೊದಲ ದಿನವೇ 1,669 ಜನರಿಂದ ಆನ್​ಲೈನ್​ ಟಿಕೆಟ್ ಖರೀದಿ ಮಾಡಲಾಗಿದೆ.

ನಮ್ಮ ಮೆಟ್ರೋ ಆನ್​ಲೈನ್ ಟಿಕೆಟ್​​ಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನವೇ ಸಾವಿರಾರು ಜನರಿಂದ ಟಿಕೆಟ್ ಖರೀದಿ
ನಮ್ಮ ಮೆಟ್ರೋ
Follow us
| Updated By: ಆಯೇಷಾ ಬಾನು

Updated on:Nov 02, 2022 | 12:50 PM

ಬೆಂಗಳೂರು: ‘ನಮ್ಮ ಮೆಟ್ರೋ’ ಆನ್​ಲೈನ್ ಟಿಕೆಟ್​​ಗೆ(Namma Metro Online Ticket) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಮ್ಮ ಮೆಟ್ರೋ ಆನ್ ಲೈನ್ ಟಿಕೆಟ್ ಲೋಕಾರ್ಪಣೆಗೊಂಡ ಮೊದಲ ದಿನವೇ 1,669 ಜನರಿಂದ ಆನ್​ಲೈನ್​ ಟಿಕೆಟ್ ಖರೀದಿ ಮಾಡಲಾಗಿದೆ. ದೆಹಲಿ ಮೆಟ್ರೋ ಮಾದರಿ ಆನ್​ಲೈನ್​ ಟಿಕೆಟ್ ಖರೀದಿಗೆ ಬೆಂಗಳೂರಿನಲ್ಲೂ ಅವಕಾಶ ನೀಡಲಾಗಿದ್ದು ಮೊಬೈಲ್​ನಲ್ಲೇ ಮೆಟ್ರೋ ಪ್ರಯಾಣದ ಟಿಕೆಟ್​ ಖರೀದಿಸಬಹುದು.

ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನವೇ BMRCL ಅಧಿಕೃತವಾಗಿ ಆನ್​ಲೈನ್​ ಟಿಕೆಟ್​ ಜಾರಿ ಮಾಡಿತ್ತು. ಸರತಿ ಸಾಲು ತಪ್ಪಿಸಿ ಪ್ರಯಾಣಿಕರ ಸುಗಮ ಓಡಾಟಕ್ಕೆ ನಮ್ಮ ಮೆಟ್ರೋ ವ್ಯವಸ್ಥೆ ಮಾಡಿದ್ದು 14,400 ಮಂದಿ ನಮ್ಮ ಮೆಟ್ರೋ ಜೊತೆ ವ್ಯಾಟ್ಸ್ ಅಪ್ ನಲ್ಲಿ ಆನ್ ಲೈನ್ ಟಿಕೆಟ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹಾಗೂ ಆನ್​ಲೈನ್ ಟಿಕೆಟ್ ವ್ಯವಸ್ಥೆ ಜಾರಿಯಾದ ಮೊದಲ ದಿನವೇ 1,669 ಮಂದಿ ಟಿಕೆಟ್ ಖರೀದಿಸಿದ್ದಾರೆ.

ಏನಿದು ಆನ್​ಲೈನ್ ಟಿಕೆಟ್​​ ?

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಹೊಸದೊಂದು ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಯಾಣಿಕರು ಆನ್​ಲೈನ್ ಮೂಲಕವೇ ಟಿಕೆಟ್ ಖರೀದಿಸಬಹುದಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸಲು ತಾವು ಇರುವ ಸ್ಥಳದಿಂದ ತಲುಪುವ ಸ್ಥಳ ವಾಟ್ಸಪ್‌ನಲ್ಲಿ ಚಾಟ್ ಮಾಡಿಕೊಂಡು ಆನ್‌ಲೈನ್‌ ಪೇಮೆಂಟ್ ಮಾಡಿ ಟಿಕೆಟ್ ಖರೀದಿಸಬಹುದಾಗಿದೆ. ಪ್ಲೇ ಸ್ಟೋರ್‌ನಲ್ಲಿ ನಮ್ಮ ಮೆಟ್ರೋ ಆ್ಯಪ್‌ನ ಡೌನ್ ಲೋಡ್ ಮಾಡಿ ಹೆಸರನ್ನ ನೋಂದಾಯಿಸಿ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು.

ಇದನ್ನೂ ಓದಿ: Namma Metro App: ವಾಟ್ಸ್​ಆ್ಯಪ್ ಮೂಲಕ ನಮ್ಮ ಮೆಟ್ರೋ ಟಿಕೆಟ್ ಪಡೆದುಕೊಳ್ಳುವುದು ಹೇಗೆ?: ಇಲ್ಲಿದೆ ಸಂಕ್ಷಿಪ್ತ ವಿವರ

ವಾಟ್ಸಪ್ ಮೂಲಕ ಟಿಕೆಟ್ ಪಡೆಯೋದು ಹೇಗೆ?

ಅಧಿಕೃತ ಬಿಎಂಆರ್‌ಸಿಎಲ್ ವಾಟ್ಸಪ್ ಮೊಬೈಲ್ ನಂ 8105556677 ನಂಬರನ್ನ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಹಾಯ್ ಎಂಬ ಸಂದೇಶ ಕಳುಹಿಸಬೇಕು. ಮೆಟ್ರೋದಿಂದ ಮರಳಿ ಬಂದ ಸಂದೇಶದಲ್ಲಿ ಕ್ಯೂ ಆರ್ ಟಿಕೆಟ್ ಆಯ್ಕೆ ಮಾಡಬೇಕು. ಬೈ ಟಿಕೆಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಬೆಂಗಳೂರು ಯಾವ ಮೆಟ್ರೋ ‌ನಿಲ್ದಾಣದಿಂದ ಹೊರಡುತ್ತೀರಾ? ಇಲ್ಲವೇ ನಿಲ್ದಾಣದ ಹೆಸರನ್ನು ಟೈಪ್ ಮಾಡಿ ಕಳುಹಿಸಬಹುದು. ಬಳಿಕ ಎಲ್ಲಿಗೆ ತೆರಳಬೇಕು ಎಂದು ಹೆಸರು ಬರೆದು ಕಳುಹಿಸಬೇಕು ಅಥವಾ ನೀಡಿರುವ ಪಟ್ಟಿಯಲ್ಲಿ ನಿಲ್ದಾಣದ ಹೆಸರನ್ನು ಅಯ್ಕೆ ಮಾಡಿಕೊಳ್ಳಬಹುದು. ನಂತರ ಅಧಿಕೃತವಾಗಿ ಎಲ್ಲಿಂದ ಎಲ್ಲಿಯವರೆಗೆ ತೆರಳುವಿರಿ ಸಂಪೂರ್ಣ ಮಾಹಿತಿ ಮತ್ತು ದರದೊಂದಿಗೆ ಸಂದೇಶ ಬರುತ್ತದೆ. ಮುಂದುವರಿಯುವುದು ಎಂದು ಆಯ್ಕೆ ಮಾಡಿ ಬಳಿಕ ವಾಟ್ಸಪ್ ಪೇ ಮೂಲಕ ಅಥವಾ ಆನ್‌ಲೈನ್‌ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು.

Published On - 12:50 pm, Wed, 2 November 22