ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಅಂಬರೀಷ್

ಅಂಬರೀಷ್ ಅವರ ಆಹಾರ ಶೈಲಿಯೇ ವಿಭಿನ್ನ. ಬಾಡೂಟವೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಹ ಕಲಾವಿದರನ್ನು ಜೊತೆಗಿಟ್ಟುಕೊಂಡು ಊಟ ಮಾಡುವುದನ್ನು ಅವರು ಇಷ್ಟಪಡುತ್ತಿದ್ದರು. ಮೈಕೋ ನಾಗರಾಜ್ ಅವರು 'ಕಲಾ ಮಾಧ್ಯಮ'ಕ್ಕೆ ನೀಡಿದ ಸಂದರ್ಶನದಲ್ಲಿ ಅಂಬಿ ಅವರ ಅಚ್ಚರಿಯ ಆಹಾರ ಕ್ರಮ ಹಾಗೂ ಔದಾರ್ಯದ ಬಗ್ಗೆ ಮಾತನಾಡಿದ್ದಾರೆ.

ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಅಂಬರೀಷ್
ಅಂಬರೀಷ್
Edited By:

Updated on: Feb 07, 2026 | 8:05 AM

ಅಂಬರೀಷ್ (Ambareesh) ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಮಂಡ್ಯದ ಗಂಡು ಎಂದೇ ಫೇಮಸ್ ಆಗಿದ್ದರು. ಅವರು ಮಾಡಿದ ಹಲವು ಸೂಪರ್ ಹಿಟ್ ಚಿತ್ರಗಳು ಗಮನ ಸೆಳೆದಿವೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಊಟದ ಶೈಲಿಯೇ ಭಿನ್ನವಾಗಿರುತ್ತಿತ್ತು. ಈ ಬಗ್ಗೆ ಮೈಕೋ ನಾಗರಾಜ್ ಅವರು ‘ಕಲಾ ಮಾಧ್ಯಮಕ್ಕೆ’ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಅಂಬರೀಷ್ ಅವರ ಆಹಾರ ಕ್ರಮದ ಬಗ್ಗೆ ಅಚ್ಚರಿ ಹೊರಹಾಕಿದ್ದರು. ಅಲ್ಲದೆ ಒಂದು ಮಹಿಳೆಯ ಬಗ್ಗೆ ಅವರು ಮಾತನಾಡಿದ್ದರು.

ಅಂಬರೀಷ್ ಅವರು ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆ ಪ್ರೀತಿಯನ್ನು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದರು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಹ ಕಲಾವಿದರನ್ನು ಜೊತೆಗೆ ಇಟ್ಟುಕೊಂಡು ಅವರು ಊಟ ಮಾಡಲು ಇಷ್ಟಪಡುತ್ತಿದ್ದರು. ಮೈ ನಾಗರಾಜ್ ಅವರಿಗೆ ಅಂಬರೀಷ್ ತುಂಬಾನೇ ಹತ್ತಿರವಾಗಿದ್ದರು. ಆ ಬಗ್ಗೆ ನಾಗರಾಜ್ ಮಾತನಾಡಿದ್ದರು.

ಮೈಕೋ ನಾಗರಾಜ್ ಅವರು ವಿಲನ್ ಹಾಗೂ ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಅಂಬಿ ಬಗ್ಗೆ ಮಾತನಾಡಿದ್ದರು. ‘ಒಂದು ದಿನ ಸಿನಿಮಾ ಸೆಟ್ ಅಲ್ಲಿ ಸಿಕ್ಕರು. ಆಗಲೇ ಅವರ ಜೊತೆ ಆತ್ಮೀಯತೆ ಬೆಳೆದಿತ್ತು. ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್​​ ಅಲ್ಲಿ ಎಂದೆ. ನಾಳೆ ನನ್ನ ಜೊತೆ ಊಟ ಮಾಡಬೇಕು ಎಂದು ಆದೇಶ ಹೊರಡಿಸಿದರು’ ಎಂದು ಹಳೆಯ ಘಟನೆ ಹೇಳಿಕೊಂಡಿದ್ದಾರೆ ಅವರು.

ನಾಗರಾಜ್ ಅವರು ಮರುದಿನ ಅಂಬಿ ಜೊತೆ ಊಟಕ್ಕೆ ಹೋದರಂತೆ. ಅಲ್ಲಿರುವ ಊಟ ನೋಡಿ ಅವರೇ ಕಂಗಾಲಾಗಿದ್ದರು. ಏಕೆಂದರೆ 25 ಬಗೆಯ ಊಟಗಳು ಅಲ್ಲಿ ಇದ್ದವು ಮತ್ತು ಎಲ್ಲವೂ ನಾಗರಾಜ್ ಅವರ ಬಟ್ಟಲು ಸೇರಿತ್ತು. ಇದನ್ನು ತಿನ್ನಬೇಕು ಎಂದು ಅವರು ಆದೇಶ ಹೊರಡಿಸಿದರು.

ನನ್ನ ತೊಡೆ ಸವರಿ ಊಟ ಮಾಡಿಸಿದರು. ‘ಇದಕ್ಕಿಂತ ದೊಡ್ಡ ಊಟ ಮಾಡಲು ಸಾಧ್ಯವೇ’ ಎಂದು ಕೇಳಿದರು ನಾಗರಾಜ್. ‘ಫೈಡ್ ಅಂತ ಹೊಡೆದರು ಅಂಬರೀಷ್. ಎಲ್ಲರೂ ಒಂದೇ’ ಎಂದು ಅಂಬಿ ಹೇಳಿದರಂತೆ. ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು ಎಂಬುದು ಅಂಬಿ ಸೂಚನೆ ಆಗಿತ್ತಂತೆ.

ಇದನ್ನೂ ಓದಿ: ಅಂಬರೀಷ್ ಕಾರಣದಿಂದ ಕಾರು ಖರೀದಿಸಿದ ಚರಣ್ ರಾಜ್; 40 ವರ್ಷವಾದರೂ ಇನ್ನೂ ಇದೆ

ಅಂಬರೀಷ್ ಇದ್ದಲ್ಲಿ ಒಂದು ಹೆಂಗಸು ಬರುತ್ತಿದ್ದರಂತೆ. ಅವರು ಕಾಲು ಹಿಡಿದರೂ ಅಂಬಿ ಅವರನ್ನು ಕ್ಷಮಿಸಲಿಲ್ಲ. ಕ್ಷಮೆ ಕೊಡಲೇ ಇಲ್ಲ. ಎಲೆಕ್ಷನ್​​ಗೆ ನಿಂತಾಗ ಡಬಲ್​​ಗೇಮ್ ಆಡಿದ್ದರಂತೆ. ಈ ಕಾರಣಕ್ಕೆ ಅಂಬಿ ಅವರ ಕಡೆ ತಿರುಗಿ ನೋಡಿಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Sat, 7 February 26