ಮುಚ್ಚಿಟ್ಟ ಸತ್ಯ ಬಯಲಾಯ್ತು; ಅಂಬಿಕಾ ಸತ್ತೋದ ವಿಚಾರ ದುರ್ಗಾಗೆ ಗೊತ್ತಾಯ್ತು

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾಳ ಸಾವಿನ ಸತ್ಯ ದುರ್ಗಾಗೆ ಬಹಿರಂಗವಾಗಿದೆ. ಶರತ್ ಮತ್ತು ದುರ್ಗಾಳ ಮದುವೆಯ ನಂತರ ಈ ಸತ್ಯ ಬಯಲಾಗಿದೆ. ಅಂಬಿಕಾಳ ಫೋಟೋ ನೋಡಿ ದುರ್ಗಾ ಆಘಾತಕ್ಕೊಳಗಾಗಿದ್ದಾಳೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಟ್ವಿಸ್ಟ್​ ನೊಂದಿಗೆ ಸಾಗುತ್ತದೆ ಎಂಬ ಕುತೂಹಲ ಮೂಡಿದೆ.

ಮುಚ್ಚಿಟ್ಟ ಸತ್ಯ ಬಯಲಾಯ್ತು; ಅಂಬಿಕಾ ಸತ್ತೋದ ವಿಚಾರ ದುರ್ಗಾಗೆ ಗೊತ್ತಾಯ್ತು
ನಾ ನಿನ್ನ ಬಿಡಲಾರೆ
Updated By: ರಾಜೇಶ್ ದುಗ್ಗುಮನೆ

Updated on: Sep 03, 2025 | 8:58 AM

‘ನಾ ನಿನ್ನ ಬಿಡಲಾರೆ’ (Naa Ninna Bidalaare) ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಈ ವಾರದ ಎಪಿಸೋಡ್​ನಲ್ಲಿ ಸಾಕಷ್ಟು ತಿರುವುಗಳು ಇದ್ದವು. ಹೀಗಾಗಿ, ಟಿಆರ್​ಪಿಯಲ್ಲಿ ಧಾರಾವಾಹಿ ಎಲ್ಲರನ್ನೂ ಮೀರಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಿಗಿರುವಾಗಲೇ ಧಾರಾವಾಹಿಯಲ್ಲಿ ದುರ್ಗಾ ಬಳಿ ಮುಚ್ಚಿಟ್ಟ ದೊಡ್ಡ ಸತ್ಯ ಒಂದು ಹೊರ ಬಿದ್ದಿದೆ. ಅಂಬಿಕಾ ಸತ್ತು ಹೋಗಿದ್ದಾಳೆ ಮತ್ತು ತನ್ನ ಜೊತೆ ಇರೋದು ಆತ್ಮ ಎಂಬುದು ಆಕೆಗೆ ಸ್ಪಷ್ಟವಾಗಿ ಗೊತ್ತಾಗಿದೆ.

ಶರತ್ ಹಾಗೂ ಮಾಯಾಳ ಮದುವೆ ನಡೆಯುತ್ತಿತ್ತು. ಆದರೆ, ಇದಕ್ಕೆ ದೇವಿ ಅವಕಾಶ ಮಾಡಿಕೊಡಲಿಲ್ಲ. ತನ್ನ ಶಕ್ತಿ ಬಳಸಿ ಶರತ್ ಹಾಗೂ ದುರ್ಗಾ ವಿವಾಹ ಆಗುವಂತೆ ಮಾಡಿದ್ದಳು. ಅಂಬಿಕಾಳ ಆತ್ಮ ದುರ್ಗಾ ದೇಹ ಸೇರಿ ಈ ಮದುವೆ ಜರುಗುವಂತೆ ಮಾಡಿದಳು. ಇಷ್ಟು ದಿನ ಅಂಬಿಕಾ ಸಿಗುತ್ತಿದ್ದಳಾದರೂ ಅವಳು ಸತ್ತು ಹೋಗಿದ್ದಾಳೆ ಎಂಬ ವಿಚಾರ ಗೊತ್ತೇ ಇರಲಿಲ್ಲ. ಈಗ ಆ ವಿಚಾರ ಗೊತ್ತಾಗಿದೆ.

‘ನಾ ನಿನ್ನ ಬಿಡಲಾರೆ’ ಪ್ರೋಮೋ

ಇದನ್ನೂ ಓದಿ
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು
ಸಕ್ಸಸ್ ಅನ್ನೋದು ಇಂದಿಗೂ ನಂಗೆ ದೊಡ್ಡ ಯಕ್ಷ ಪ್ರಶ್ನೆ; ಸೃಜನ್ ಲೋಕೇಶ್
ಸಿಟಿ ಹುಡುಗಿಯರ ಮೇಲೆ ಸಿಟ್ಟು; ಬಕೆಟ್ ಎಸೆದು ಬಾಯಿಗೆ ಬಂದಂತೆ ಬೈದ ಅಕುಲ್
ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ

ದುರ್ಗಾ ಹಾಗೂ ಶರತ್ ಮದುವೆ ಆಗಿ ಮನೆಗೆ ಬಂದಿದ್ದಾರೆ. ಈ ವೇಳೆ ಅಂಬಿಕಾಳ ಫೋಟೋ ತೋರಿಸಿ ಅವಳ ಆಶೀರ್ವಾದ ಪಡೆಯುವಂತೆ ಸೂಚಿಸಲಾಗಿದೆ. ಅಂಬಿಕಾ ಸತ್ತು ಹೋಗಿದ್ದಾಳೆ ಎಂಬ ವಿಚಾರ ಗೊತ್ತಾಗಿ ಆಕೆಗೆ ಶಾಕ್ ಆಗಿದೆ. ಅಂಬಿಕಾ ಫೋಟೋ ನೋಡುತ್ತಿದ್ದಂತೆ ದುರ್ಗಾ ತಲೆ ತಿರುಗಿ ಬಿದ್ದಿದ್ದಾಳೆ. ಬಚ್ಚಿಟ್ಟ ಸತ್ಯ ಹೊರ ಬಿದ್ದಿದ್ದು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್; ಶರತ್-ದುರ್ಗಾ ಮದುವೆ

ಅಂಬಿಕಾ ಹಾಗೂ ದುರ್ಗಾ ಅಕ್ಕ-ತಂಗಿಯರು. ತನ್ನ ಸಾವಿನ ವಿಚಾರವನ್ನು ದುರ್ಗಾ ಬಳಿ ಹೇಳಬೇಕು ಎಂದು ಅಂಬಿಕಾ ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ದು ಇದೆ. ಆದರೆ, ಅದು ಸಾಧ್ಯ ಆಗಿರಲಿಲ್ಲ. ನಿಜ ಹೇಳಿದರೆ ದುರ್ಗಾ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾಳೆ ಎಂಬ ಭಯ ಅಂಬಿಕಾಗೆ ಇತ್ತು. ಹೀಗಾಗಿ ಆ ವಿಚಾರವನ್ನು ಅವಳು ಮುಚ್ಚಿಡುತ್ತಲೇ ಬಂದಿದ್ದಳು. ಈಗ ದುರ್ಗಾಗೆ ಅಂಬಿಕಾ ಬಗೆಗಿನ ದೊಡ್ಡ ಸತ್ಯ ಗೊತ್ತಾಗಿದೆ. ಇಷ್ಟೇ ಅಲ್ಲ ತಾವಿಬ್ಬರೂ ಅಕ್ಕ ತಂಗಿ ಎಂಬ ವಿಚಾರವೂ ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.