‘ಕೂಲಿ’, ‘ವಾರ್ 2’ ಚಿತ್ರದ ಅಬ್ಬರದ ಮಧ್ಯೆಯೂ ಸ್ಥಿರವಾಗಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’

‘ಸು ಫ್ರಮ್ ಸೋ’ ಚಿತ್ರವು ವಾರ್ 2 ಮತ್ತು ಕೂಲಿ ಚಿತ್ರಗಳ ಬಿಡುಗಡೆಯ ನಡುವೆಯೂ ಅದ್ಭುತ ಗಳಿಕೆಯನ್ನು ಮಾಡುತ್ತಿದೆ. ಬೆಂಗಳೂರಿನಲ್ಲಿ ಹೌಸ್​ಫುಲ್ ಶೋಗಳಿವೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗಳಿಕೆ ನಿರೀಕ್ಷಿಸಲಾಗಿದೆ. ಈ ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದು ನಿರೀಕ್ಷಿಸಲಾಗಿದೆ.

‘ಕೂಲಿ’, ‘ವಾರ್ 2’ ಚಿತ್ರದ ಅಬ್ಬರದ ಮಧ್ಯೆಯೂ ಸ್ಥಿರವಾಗಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
ಸು ಫ್ರಮ್ ಸೋ

Updated on: Aug 15, 2025 | 8:48 AM

‘ವಾರ್ 2’ (War 2)ಹಾಗೂ ‘ಕೂಲಿ’ ಅಂಥ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತವೆ ಎಂದರೆ ಸಾಮಾನ್ಯವಾಗಿ ಸಣ್ಣಪುಟ್ಟ ಚಿತ್ರಗಳು ಹೇಳ ಹೆಸರಿಲ್ಲದೆ ಕಳೆದು ಹೋಗುತ್ತವೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳು ಕೂಡ ಡಲ್ ಆಗುತ್ತವೆ. ಆದರೆ, ‘ಸು ಫ್ರಮ್ ಸೋ’ ಸಿನಿಮಾ ಮಾತ್ರಕ್ಕೆ ಇದಕ್ಕೆ ಅಪವಾದ. ಈ ಎರಡೂ ಮಲ್ಟಿಸ್ಟಾರರ್ ಸಿನಿಮಾ ಅಬ್ಬರದ ಮಧ್ಯೆಯೂ ಸ್ಥಿರವಾದ ಕಲೆಕ್ಷನ್ ಮಾಡಿದೆ. ಮುಂದಿನ ಮೂರು ದಿನ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ.

‘ಸು ಫ್ರಮ್ ಸೋ’ ರಿಲೀಸ್ ಆದ ದಿನದಿಂದಲೂ ಅಬ್ಬರಿಸುತ್ತಿದೆ. ಈ ಚಿತ್ರದ ಎದುರು ಅನೇಕ ದೊಡ್ಡ ಸಿನಿಮಾಗಳು ಡಲ್ ಆಗಿವೆ. ಈಗ ಸ್ಟಾರ್ ಹೀರೋಗಳ ಅಬ್ಬರದ ಮಧ್ಯೆಯೂ ಸಿನಿಮಾ ಸ್ಥಿರವಾದ ಪ್ರದರ್ಶನ ನೀಡುತ್ತಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಇನ್ನೂ ಕೆಲವು ದಿನಗಳ ಕಾಲ ಸಿನಿಮಾದ ಅಬ್ಬರ ಮುಂದುವರಿಯಲಿದೆ.

21ನೇ ದಿನವಾದ ಆಗಸ್ಟ್ 14ರಂದು ‘ಸು ಫ್ರಮ್ ಸೋ’ ಸಿನಿಮಾ 1.07 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ದೊಡ್ಡ ಸಿನಿಮಾಗಳ ಅಬ್ಬರದ ಮಧ್ಯೆಯೂ ಚಿತ್ರದ ಗಳಿಕೆ ಕಡಿಮೆ ಆಗಿಲ್ಲ. ಇಂದು (ಆಗಸ್ಟ್ 15) ಬೆಂಗಳೂರಿನಲ್ಲಿ ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ. ಶನಿವಾರ ಹಾಗೂ ಭಾನುವಾರ ಕೂಡ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ
ಫ್ಲಾಪ್ ಆದರೂ ಭಾರೀ ಗಳಿಕೆ ಮಾಡಿದ ‘ವಾರ್ 2’; ಕೈ ಕೊಟ್ಟ ಹಿಂದಿ ಮಂದಿ
ರಜನಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?

ಇದನ್ನೂ ಓದಿ: ನೆಗೆಟಿವ್ ವಿಮರ್ಶೆ ಮಧ್ಯೆಯೂ ಭಾರೀ ಗಳಿಕೆ ಮಾಡಿದ ‘ವಾರ್ 2’; ಕೈ ಕೊಟ್ಟ ಹಿಂದಿ ಮಂದಿ

ಸದ್ಯ ಸಿನಿಮಾಗೆ 90 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ವಿಶ್ವ ಮಟ್ಟದ ಲೆಕ್ಕಾಚಾರ. ಹೀಗೆಯೇ ಗಳಿಕೆ ಮುಂದುವರಿದರೆ ಸಿನಿಮಾ ಅನಾಯಾಸವಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಇನ್ನು, ರಿಲೀಸ್ ಆಗಿರುವ ‘ವಾರ್ 2’ ಹಾಗೂ ‘ಕೂಲಿ’ ಸಿನಿಮಾಗಳು ನೆಗೆಟಿವ್ ವಿಮರ್ಶೆ ಪಡೆದಿದೆ. ಇದು ‘ಸು ಫ್ರಮ್ ಸೋ’ ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.