Amulya: ನಟಿ ಅಮೂಲ್ಯ ಜೀವನ ಬದಲಿಸಿದ ‘ಚೆಲುವಿನ ಚಿತ್ತಾರ’ ಸಿನಿಮಾಗೆ 15 ವರ್ಷ; ನೆನಪಿನ ಪುಟ ತೆರೆದ ಐಸೂ

| Updated By: ಮದನ್​ ಕುಮಾರ್​

Updated on: Jun 23, 2022 | 1:58 PM

Cheluvina Chittara: ‘ಚೆಲುವಿನ ಚಿತ್ತಾರ’ ಗೆಲುವಿನ ಬಳಿಕ ಅಮೂಲ್ಯ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡರು. ಆ ನಂತರ ಅವರು ಹಿಂದೆ ತಿರುಗಿ ನೋಡಲಿಲ್ಲ.

Amulya: ನಟಿ ಅಮೂಲ್ಯ ಜೀವನ ಬದಲಿಸಿದ ‘ಚೆಲುವಿನ ಚಿತ್ತಾರ’ ಸಿನಿಮಾಗೆ 15 ವರ್ಷ; ನೆನಪಿನ ಪುಟ ತೆರೆದ ಐಸೂ
ಅಮೂಲ್ಯ, ಗೋಲ್ಡನ್ ಸ್ಟಾರ್ ಗಣೇಶ್
Follow us on

ನಟಿ ಅಮೂಲ್ಯ (Amulya) ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ಹೀರೋಯಿನ್​ ಆಗಿ ಮಿಂಚಿದ್ದಾರೆ. ಯಶ್​, ದುನಿಯಾ ವಿಜಯ್​, ‘ನೆನಪಿರಲಿ’ ಪ್ರೇಮ್​, ಕೃಷ್ಣ ಅಜಯ್​ ರಾವ್​ ಮುಂತಾದ ನಟರ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ರಾಜ್ಯದ್ಯಾಂತ ಅಭಿಮಾನಿಗಳಿದ್ದಾರೆ. ಅವರಿಗೆ ಇಷ್ಟೆಲ್ಲ ಖ್ಯಾತಿ ಸಿಗಲು ನಾಂದಿ ಹಾಡಿದ್ದು ‘ಚೆಲುವಿನ ಚಿತ್ತಾರ’ (Cheluvina Chittara) ಸಿನಿಮಾ. ಹೌದು, ಆ ಚಿತ್ರದ ಮೂಲಕ ಅಮೂಲ್ಯ ಅವರು ಬಹುದೊಡ್ಡ ಯಶಸ್ಸು ಪಡೆದುಕೊಂಡರು. ಅಲ್ಲಿಯವರೆಗೂ ಬಾಲನಟಿಯಾಗಿ ಅಭಿನಯಿಸುತ್ತಿದ್ದ ಅವರಿಗೆ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋಯಿನ್​ ಪಟ್ಟ ಸಿಕ್ಕಿತು. ‘ಗೋಲ್ಡನ್​ ಸ್ಟಾರ್​’ ಗಣೇಶ್​ಗೆ (Golden Star Ganesh) ಜೋಡಿಯಾಗಿ ಅವರು ನಟಿಸಿದರು. ಆ ಸಿನಿಮಾ ತೆರೆಕಂಡು ಈಗ 15 ವರ್ಷ ಕಳೆದಿದೆ. ಆ ಖುಷಿಯಲ್ಲಿ ಹಳೇ ದಿನಗಳನ್ನು ಅಮೂಲ್ಯ ಮೆಲುಕು ಹಾಕಿದ್ದಾರೆ.

2007ರ ಜೂನ್​ 22ರಂದು ‘ಚೆಲುವಿನ ಚಿತ್ತಾರ’ ತೆರೆಕಂಡಿತು. ಇಬ್ಬರು ಮುಗ್ಧ ಪ್ರೇಮಿಗಳ ಕಥೆಯನ್ನು ಹೊಂದಿದ್ದ ಆ ಸಿನಿಮಾ ಜನರಿಗೆ ಸಖತ್​ ಇಷ್ಟವಾಯಿತು. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಅಮೂಲ್ಯ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡರು. ಆ ಬಳಿಕ ಅವರು ಹಿಂದೆ ತಿರುಗಿ ನೋಡಲಿಲ್ಲ. ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ, ಯಶಸ್ವಿ ನಟಿಯಾಗಿ ಬೆಳೆದರು.

ಇದನ್ನೂ ಓದಿ
ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಅಮೂಲ್ಯ; ಸಂತೂರ್ ಮಮ್ಮಿ ಎಂದ ಫ್ಯಾನ್ಸ್
ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ
Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ
Amulya: ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಸಂತಸ ಹಂಚಿಕೊಂಡ ನಟಿಯ ಪತಿ ಜಗದೀಶ್

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಅಮೂಲ್ಯ; ಸಂತೂರ್ ಮಮ್ಮಿ ಎಂದ ಫ್ಯಾನ್ಸ್

ತಮ್ಮ ಬದುಕಿಗೆ ಹೊಸ ತಿರುವು ನೀಡಿದ ‘ಚೆಲುವಿನ ಚಿತ್ತಾರ’ ಸಿನಿಮಾ ಬಗ್ಗೆ ಅಮೂಲ್ಯ ಅವರಿಗೆ ಹೆಚ್ಚು ಗೌರವ ಇದೆ. ಈ ಚಿತ್ರಕ್ಕೆ 15 ವರ್ಷ ಪೂರೈಸಿರುವ ಸಂದರ್ಭದಲ್ಲಿ ಅವರು ಅನೇಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಚಿತ್ರದ ಪೋಸ್ಟರ್​ಗಳನ್ನು ಹಂಚಿಕೊಂಡು ಅವರು ಖುಷಿ ಪಟ್ಟಿದ್ದಾರೆ.

‘ಚೆಲುವಿನ ಚಿತ್ತಾರ ಎಂಬ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ. ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. ಚೆಲುವಿನ ಚಿತ್ತಾರ ಚಿತ್ರದ ಮೂಲಕ ನನ್ನನ್ನು ನಾಯಕಿ ನಟಿಯಾಗಿ ಪರಿಚಯಿಸಿ, ಕನ್ನಡ ಜನತೆಯ ಮನಸ್ಸಲ್ಲಿ ಐಸೂ ಎನ್ನುವ ಹೆಸರಿನೊಂದಿಗೆ ನನ್ನನ್ನು ಚಿರಸ್ಥಾಯಿಯಾಗಿಸಿದ ಎಸ್. ನಾರಾಯಣ್ ಸರ್ ಅವರಿಗೂ ಹಾಗು ನನ್ನ ಎಲ್ಲಾ ಹೆಜ್ಜೆಗಳಲ್ಲೂ ಸಲಹೆ ನೀಡುತ್ತಾ ಬೆಂಬಲವಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ’ ಎಂದಿದ್ದಾರೆ ಅಮೂಲ್ಯ.

‘ಚೆಲುವಿನ ಚಿತ್ತಾರ ಅತ್ಯಂತ ಯಶಸ್ಸು ಕಾಣಲು ಕಾರಣೀಕರ್ತರಾದ ಸಿನಿಮಾ ತಂತ್ರಜ್ಞರು, ಕ್ಯಾಮೆರಾ ಮ್ಯಾನ್, ಮೇಕಪ್ ಮ್ಯಾನ್ ಹಾಗೂ ಮಾಧ್ಯಮ ವರ್ಗದವರಿಗೆ ಹಾಗೂ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ’ ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.