ನಟಿ ಆ್ಯಮಿ ಜಾಕ್ಸನ್ ಕಿಚ್ಚ ಸುದೀಪ್ ಹಾಗೂ ಶಿವರಾಜ್ಕುಮಾರ್ ನಟನೆಯ ‘ದಿ ವಿಲನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಾಣಲಿಲ್ಲ. ಆದರೆ, ಆ್ಯಮಿ ಜಾಕ್ಸನ್ ಪರಿಚಯ ಕನ್ನಡದ ಮಂದಿಗೆ ಆಯಿತು. ಬ್ರಿಟಿಷ್ ನಟಿ ಆಗಿರೋ ಇವರು ಈಗ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಈ ಮೊದಲು ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದ ಅವರು ಅದನ್ನು ಬ್ರೇಕ್ ಮಾಡಿ ಬೇರೆ ವ್ಯಕ್ತಿ ಜೊತೆ 2024ರಲ್ಲಿ ಮದುವೆ ಆದರು. ಈಗ ಅವರು ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ದಾರೆ.
ಹೊಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ ಜೊತೆ ಆ್ಯಮಿ ಜಾಕ್ಸನ್ 2015ರಿಂದ 2021ರವರೆಗೆ ರಿಲೇಶನ್ಶಿಪ್ನಲ್ಲಿ ಇದ್ದರು. ಇವರು ಜಾರ್ಜ್ನಿಂದ ಮಗುವನ್ನು ಕೂಡ ಪಡೆದರು. 2019ರಲ್ಲಿ ಆ್ಯಮಿ ಹಾಗೂ ಜಾರ್ಜ್ ಎಂಗೇಜ್ಮೆಂಟ್ ಮಾಡಿಕೊಂಡರು. ಅದೇ ವರ್ಷ ಆ್ಯಮಿಗೆ ಮಗು ಜನಿಸಿತು. ಇವರು ಮದುವೆ ಆಗಿಲ್ಲ. 2021ರಲ್ಲಿ ಇಬ್ಬರೂ ಬೇರೆ ಆದರು.
ಆ ಬಳಿಕ ಇಂಗ್ಲಿಷ್ ಆ್ಯಕ್ಟರ್ ಎಡ್ ವೆಸ್ಟ್ವಿಕ್ ಜೊತೆ ಅವರು ಡೇಟಿಂಗ್ ಆರಂಭಿಸಿದರು. ಇವರು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮದುವೆ ಆದರು. ಅಕ್ಟೋಬರ್ನಲ್ಲಿ ಆ್ಯಮಿ ಅವರು ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ಘೋಷಣೆ ಮಾಡಿದ್ದಾರೆ. ಈಗ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿಯಲ್ಲಿ ಬೇಬಿ ಬಂಪ್ ತೋರಿಸಿದ್ದಾರೆ.
ಆ್ಯಮಿ ಅವರು 2010ರಲ್ಲಿ ‘ಮದ್ರಾಸಪಟ್ಟಣಿಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದು ತಮಿಳು ಸಿನಿಮಾ ಆಗಿತ್ತು. ಆ ಬಳಿಕ ಅವರು ದಕ್ಷಿಣದಲ್ಲೇ ಹೆಚ್ಚು ಬ್ಯುಸಿ ಆದರು. 2018ರಲ್ಲಿ ‘ದಿ ವಿಲನ್’ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಸೀತಾ ಹೆಸರಿನ ಪಾತ್ರ ಅವರದ್ದಾಗಿತ್ತು. ಅವರು ಇತ್ತೀಚೆಗೆ ಸಿನಿಮಾ ರಂಗದಿಂದ ದೂರ ಇದ್ದಾರೆ. ವಿದೇಶದಲ್ಲಿ ಸೆಟಲ್ ಆಗಿರುವ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಇದನ್ನೂ ಓದಿ: ‘ದಿ ವಿಲನ್’ ನಟಿ ಆ್ಯಮಿ ಜಾಕ್ಸನ್ ಐಷಾರಾಮಿ ಬದುಕಿಗೆ ಈ ಫೋಟೋಗಳೇ ಸಾಕ್ಷಿ
ಆ್ಯಮಿ ಅವರು ಲಂಡನ್ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಕೆಲ ವರ್ಷ ಅವರು ಮುಂಬೈನಲ್ಲಿ ತಂಗಿದ್ದರು. ಅವರು ಮಾಡೆಲ್ ಕೂಡ ಹೌದು. ಎರಡನೇ ಮಗು ಜನಿಸಿದ ಬಳಿಕ ಬ್ರೇಕ್ ಪಡೆಯಲು ಆಲೋಚಿಸಿರೋ ಅವರು ಮತ್ತೆ ನಟನೆಗೆ ಮರಳುತ್ತಾರಾ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.