ಅನಂತ್ ನಾಗ್ ನಟನೆಯ ‘ಬೆಳದಿಂಗಳ ಬಾಲೆ’ ಚಿತ್ರ 1995ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಎಲ್ಲಿಯೂ ನಟಿಯ ಮುಖ ಕಾಣಲ್ಲ. ಅವರ ಧ್ವನಿ ಮಾತ್ರ ಕೇಳಿಸುತ್ತದೆ ಎಂಬುದು ಆ ಸಿನಿಮಾ ನೋಡಿದವರಿಗೆ ಗೊತ್ತಿರುತ್ತದೆ. ಹಾಗಾದರೆ, ಅಲ್ಲಿ ನಟಿಸಿದ್ದು ಯಾರು? ಅವರು ಬೇರಾರೂ ಅಲ್ಲ ಕನ್ನಡದ ನಟಿ ಸುಮನ್ ನಾಗರ್ಕರ್. ಅದರಲ್ಲಿ ಬರುವ ಧ್ವನಿ ಗಾಯಕಿ ಮಂಜುಳಾ ಗುರುರಾಜ್ ಅವರದ್ದು. ಈ ಬಗ್ಗೆ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್ನಲ್ಲಿ ಮಾತನಾಡಲಾಗಿತ್ತು.
ಅನಂತ್ ನಾಗ್ ಅವರಿಗೆ ಇಂದು (ಸೆಪ್ಟೆಂಬರ್ 4) ಜನ್ಮದಿನ. ಅವರು 76ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರು ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ನಂತರ ರಾಜಕೀಯ ತೊರೆದರು, ಅವರ ವೃತ್ತಿ ಜೀವನದಲ್ಲಿ ‘ಬೆಳದಿಂಗಳ ಬಾಲೆ’ ವಿಶೇಷ ಸ್ಥಾನ ಪಡೆದುಕೊಂಡಿದೆ.
‘ಆಡಿಯನ್ಸ್ ನೋಡುವಾಗ ನಿಮಗೆ ಹುಡುಗಿಯ ಧ್ವನಿ ಕೇಳುತ್ತದೆ. ಆದರೆ ಶೂಟಿಂಗ್ ವೇಳೆ ಹಾಗಾಗುವುದಿಲ್ಲ. ಅದನ್ನು ಕೇಳಿಸಿದಂತೆ ನಟಿಸಬೇಕಾಗುತ್ತದೆ. ಅಲ್ಲಿ ಯಾರೋ ಬಂದು ಡೈಲಾಗ್ ಹೇಳುತ್ತಿದ್ದರು. ಅದರಲ್ಲಿ ಯಾವುದೇ ಭಾವನೆ ಇರುತ್ತಿರಲಿಲ್ಲ. ಆದರೂ ಉತ್ತಮವಾಗಿ ನಟಿಸಬೇಕಿತ್ತು’ ಎಂದು ಅನಂತ್ ನಾಗ್ ಹೇಳಿದ್ದರು. ಹಾಗೆ ಹೇಳುತ್ತಿದ್ದಂತೆ ಮಂಜುಳಾ ಅವರು ಮಾತನಾಡಿದ್ದರು. ‘ರೇವಂತ್ ನಾನು ನಿಮ್ಮ ಅಭಿಮಾನಿ. ಅಭಿನಂದನೆ ತಿಳಿಸೋಣ ಎಂದು ಫೋನ್ ಮಾಡಿದೆ’ ಎಂದರು ಮಂಜುಳಾ. ಇದಕ್ಕೆ ಉತ್ತರಿಸಿದ ಅನಂತ್ ನಾಗ್ ಅವರು, ‘ಅಲ್ಲಿ ನಿಮ್ಮ ಮುಖ ಯಾರಿಗೂ ಕಾಣಲಿಲ್ಲ. ಇಲ್ಲಿ ಬಂದು ಮುಖ ತೋರಿಸಿ’ ಎಂದರು ಅನಂತ್ ನಾಗ್.
ಸುನಿಲ್ ಕುಮಾರ್ ದೇಸಾಯಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ನಮ್ಮದು ಕೆಮಿಸ್ಟ್ರಿ ವಿಚಿತ್ರ. ನನಗೆ ಕಥೆ ಹೇಳೋಕೆ ಬರಲ್ಲ. ಅವರಿಗೆ ದೃಶ್ಯ ಹೇಳಿದರೆ ಅದನ್ನು ಕ್ಯಾಚ್ ಮಾಡುತ್ತಿದ್ದರು. ನಾನು ಅಂದುಕೊಂಡಿದ್ದಕ್ಕಿಂತ ಹತ್ತುಪಟ್ಟು ಉತ್ತಮವಾಗಿ ದೃಶ್ಯ ಮೂಡಿ ಬರುತ್ತಿತ್ತು.’ ಎಂದಿದ್ದಾರೆ ಅವರು. ಬೆಳದಿಂಗಳ ಬಾಲೆಯಲ್ಲಿ ಕೈ ಒಂದನ್ನು ತೋರಿಸಲಾಗಿದೆ. ಆ ಕೈ ಸುಮನ್ ಅವರದ್ದಾಗಿತ್ತು. ಅವರು ಕೂಡ ಅನಂತ್ ನಾಗ್ ಜೊತೆ ಕೆಲಸ ಮಾಡಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ಮರೆವು ದೇವರು ಕೊಟ್ಟಿರೋ ವರ’; ಶಂಕರ್ ನಾಗ್ ಇಲ್ಲ ಎಂಬ ನೋವಿನಿಂದ ಹೊರ ಬಂದಿರೋ ಅನಂತ್ ನಾಗ್
1995ರಲ್ಲಿ ‘ಬೆಳದಿಂಗಳ ಬಾಲೆ’ ರಿಲೀಸ್ ಆಯಿತು. ಎಂಡಮುರಿ ವೀರೇಂದ್ರನಾಥ ಅವರು ತೆಲುಗಿನಲ್ಲಿ ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗಿತ್ತು. ಈ ಚಿತ್ರ ಅಂದಿನ ಕಾಲಕ್ಕೆ ದೊಡ್ಡ ಯಶಸ್ಸು ಕಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.