Ananya Bhat: ‘ಪ್ರೀತಿ ಎಂದರೇನು’ ಮ್ಯೂಸಿಕ್​ ವಿಡಿಯೋ ಮೂಲಕ ಗಮನ ಸೆಳೆದ ಅನನ್ಯಾ ಭಟ್​, ಹೃದಯ ಶಿವ

|

Updated on: Jun 08, 2021 | 6:47 PM

ಹೃದಯ ಶಿವ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಜೂ.8ರಂದು ‘ಪ್ರೀತಿ ಎಂದರೇನು..’ ಹಾಡು ರಿಲೀಸ್​ ಆಗಿದೆ. ‘ಸೋಜುಗಾದ ಸೂಜು ಮಲ್ಲಿಗೆ..’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಅನನ್ಯಾ ಭಟ್​ ಅವರ ಕಂಠದಲ್ಲಿ ಈ ಹೊಸ ಗೀತೆ ಮೂಡಿಬಂದಿದೆ.

Ananya Bhat: ‘ಪ್ರೀತಿ ಎಂದರೇನು’ ಮ್ಯೂಸಿಕ್​ ವಿಡಿಯೋ ಮೂಲಕ ಗಮನ ಸೆಳೆದ ಅನನ್ಯಾ ಭಟ್​, ಹೃದಯ ಶಿವ
ಗಾಯಕಿ ಅನನ್ಯಾ ಭಟ್​
Follow us on

ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮ್ಯೂಸಿಕ್​ ವಿಡಿಯೋಗಳು ದೊಡ್ಡ ಟ್ರೆಂಡ್​ ಸೆಟ್​ ಮಾಡಿವೆ. ಆದರೆ ಕನ್ನಡದಲ್ಲಿ ಅವುಗಳ ಸಂಖ್ಯೆ ಕಡಿಮೆ ಎನ್ನಬಹುದು. ಕೆಲವೇ ಕೆಲವು ಮಂದಿ ಮಾತ್ರ ಮ್ಯೂಸಿಕ್​ ವಿಡಿಯೋಗಳ ಮೂಲಕ ಜನಮನ ಗೆದ್ದಿದ್ದಾರೆ. ಅದೇ ಸಾಲಿನಲ್ಲಿ ಗೀತರಚನಾಕಾರ ಹೃದಯ ಶಿವ ಒಂದು ಪ್ರಯತ್ನ ಮಾಡಿದ್ದಾರೆ. ಅವರು ನಿರ್ಮಿಸಿ, ನಿರ್ದೇಶಿಸಿರುವ ‘ಪ್ರೀತಿ ಎಂದರೇನು..’ ಎಂಬ ಹೊಸ ಹಾಡು ಬಿಡುಗಡೆ ಆಗಿದೆ. ಈ ಗೀತೆಗೆ ಖ್ಯಾತ ಗಾಯಕಿ ಅನನ್ಯಾ ಭಟ್​ ಧ್ವನಿ ನೀಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್​ ಹಿಟ್​ ಗೀತೆಗಳನ್ನು ನೀಡಿದವರು ಹೃದಯ ಶಿವ. ‘ಮುಂಗಾರು ಮಳೆ’ ಚಿತ್ರದ ‘ಇವನು ಗೆಳಯನಲ್ಲ..’ ಹಾಡಿನಿಂದ ಹಿಡಿದು ‘ರಾಜು ಕನ್ನಡ ಮೀಡಿಯಂ’ ಸಿನಿಮಾದ ‘ಕೊಡೆಯೊಂದರ ಅಡಿಯಲ್ಲಿ ನಿಮ್ಮಿಬ್ಬರ ಪಯಣ..’ ಹಾಡಿನವರೆಗೆ ಹಲವಾರು ಸುಮಧುರ ಗೀತೆಗಳಿಗೆ ಸಾಹಿತ್ಯ ಬರೆದ ಹೃದಯ ಶಿವ ಅವರು ಈಗ ಹೊಸ ಹಾಡು ಬಿಡುಗಡೆ ಮಾಡಿದ್ದಾರೆ.

‘ಹೃದಯ ಶಿವ’ ಯೂಟ್ಯೂಬ್​ ಚಾನೆಲ್​ನಲ್ಲಿ ಜೂ.8ರಂದು ‘ಪ್ರೀತಿ ಎಂದರೇನು’ ಹಾಡು ರಿಲೀಸ್​ ಆಗಿದೆ. ಇದರಲ್ಲಿ ಹೊಸ ಪ್ರತಿಭೆಗಳಾದ ಸಿತಾರಾ ರಾವಲ್​ ಮತ್ತು ನಿಶ್ಚಲ್​ ನಟಿಸಿದ್ದಾರೆ. ‘ಸೋಜುಗಾದ ಸೂಜು ಮಲ್ಲಿಗೆ’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಅನನ್ಯಾ ಭಟ್​ ಅವರ ಕಂಠದಲ್ಲಿ ಈ ‘ಪ್ರೀತಿ ಎಂದರೇನು’ ಗೀತೆ ಮೂಡಿಬಂದಿದೆ. ಹಿಂದಿ ಅವತರಣಿಕೆಯಲ್ಲೂ ಹಾಡು ಸಿದ್ಧವಾಗಿದ್ದು, ಅದನ್ನೂ ಅನನ್ಯಾ ಭಟ್​ ಹಾಡಿದ್ದಾರೆ. ಸಾಹಿತ್ಯ ಬರೆಯುವುದರ ಜೊತೆಗೆ ಸಂಗೀತವನ್ನು ಕೂಡ ಹೃದಯ ಶಿವ ಅವರೇ ನೀಡಿದ್ದಾರೆ.

‘ಒಂದಷ್ಟು ಹಾಡನ್ನು ಸೇರಿಸಿ ಒಂದು ಆಲ್ಬಂ ಮಾಡೋಣ ಅಂದುಕೊಂಡಿದ್ವಿ. ಕಡೆಗೆ ಸಿಂಗಲ್​ ಮ್ಯೂಸಿಕ್​ ವಿಡಿಯೋ ಮಾಡಲು ನಿರ್ಧರಿಸಿದೆವು. ಕನ್ನಡ ಮತ್ತು ಹಿಂದಿ ಎರಡೂ ವರ್ಷನ್​ನಲ್ಲಿ ಬಿಡುಗಡೆ ಮಾಡಿದ್ದೇವೆ. ನಟಿಸಿರುವ ಕಲಾವಿದರು ಇಬ್ಬರೂ ಹೊಸಬರು’ ಎಂದು ಹೇಳಿರುವ ಹೃದಯ ಶಿವ ಅವರು, ಈ ಸಿಂಗಲ್​ ಮ್ಯೂಸಿಕ್​ ವಿಡಿಯೋ ಮೂಲಕ ಒಂದು ಕಥೆ ಕಟ್ಟಿಕೊಟ್ಟಿದ್ದಾರೆ.

‘ಮೆಟಫರ್​ ಮೀಡಿಯಾ ಹೌಸ್​’ ಬ್ಯಾನರ್​ ಮೂಲಕ ಈ ಹಾಡನ್ನು ಹೃದಯ ಶಿವ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದೇ ಬ್ಯಾನರ್​ನಿಂದ ಇನ್ನಷ್ಟು ಹೊಸ ಪ್ರಯತ್ನಗಳನ್ನು ಮಾಡಲು ಅವರು ತಯಾರಿ ನಡೆಸಿದ್ದಾರೆ. ಸಿನಿಮಾ ನಿರ್ಮಾಣದ ಪ್ಲ್ಯಾನ್​ ಕೂಡ ಅವರಿಗಿದೆ.

ಇದನ್ನೂ ಓದಿ:

ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ

23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Published On - 6:47 pm, Tue, 8 June 21