
ಆ್ಯಂಕರ್ ಅನುಶ್ರೀ ವಿವಾಹ ವಿಚಾರ ಸದ್ಯ ಸುದ್ದಿ ಆಗುತ್ತಿದೆ. ಆಗಸ್ಟ್ 28ರಂದು ಇವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅನುಶ್ರೀ (Anushree) ಅವರಿಗೂ ರೋಷನ್ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಆರಂಭದಲ್ಲಿ ಇವರದ್ದು ಅರೇಂಜ್ ಮ್ಯಾರೇಜ್ ಎನ್ನಲಾಗುತ್ತಿತ್ತು. ಆದರೆ, ಇದು ಸಂಪೂರ್ಣ ಅರೇಂಜ್ ಮ್ಯಾರೇಜ್ ಅಲ್ಲ ಎಂದು ತಿಳಿದು ಬಂದಿದೆ. ಇವರ ಭೇಟಿಗೆ ಕಾರಣ ಆಗಿದ್ದು ಅಪ್ಪು ಅನ್ನೋದು ಮತ್ತೊಂದು ವಿಶೇಷ.
ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಬಾರಿ ಅವರ ಸಂದರ್ಶನ ಮಾಡಿದ್ದರು. ಪುನೀತ್ ನಿಧನ ಹೊಂದಿದ ಬಳಿಕವೂ ಅಪ್ಪುಗಾಗಿ ಅವರ ಹೃದಯ ಮಿಡಿಯಿತು. ಯೂಟ್ಯೂಬ್ ಚಾನೆಲ್ಗೆ ಅಪ್ಪು ಫೋಟೋ ಇರೋ ಲೋಗೋವನ್ನು ಅನುಶ್ರೀ ಮಾಡಿಸಿದ್ದಾರೆ ಅನ್ನೋದು ವಿಶೇಷ. ಇದು ಪುನೀತ್ ಮೇಲೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಈಗ ಅವರು ಅಪ್ಪು ಅಭಿಮಾನಿಯನ್ನೇ ವಿವಾಹ ಆಗುತ್ತಿದ್ದಾರೆ. ರೋಷನ್ ಕೂಡ ಪುನೀತ್ ಅವರ ದೊಡ್ಡ ಫ್ಯಾನ್ ಎಂದು ತಿಳಿದು ಬಂದಿದೆ.
ಪುನೀತ್ ನಿವಾಸದಲ್ಲಿ ಅನುಶ್ರೀ ಹಾಗೂ ರೋಷನ್ ಪರಿಚಯ ಆದರು. ಪುನೀತ್ ನಿರ್ಮಿಸಿದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅವರು ನಿಧನ ಹೊಂದಿದ ಬಳಿಕ ರಿಲೀಸ್ ಆಯಿತು. ಇದರ ಪ್ರೀ ರಿಲೀಸ್ ಈವೆಂಟ್ನ ಪ್ಯಾಲೇಸ್ ಗ್ರೌಂಡ್ನಲ್ಲಿ ‘ಪುನೀತ ಪರ್ವ’ ಹೆಸರಲ್ಲಿ ಅಶ್ವಿನಿ ಅವರು ಆಯೋಜಿಸಿದ್ದರು. ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದರು. ಈ ಈವೆಂಟ್ಗೆ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಈ ಈವೆಂಟ್ನ ನಿರ್ವಹಣೆಯಲ್ಲಿ ರೋಷನ್ ತೊಡಗಿಕೊಂಡಿದ್ದರು. ಈವೆಂಟ್ನಲ್ಲಿ ಅನುಶ್ರೀ ಹಾಗೂ ರೋಷನ್ ಮಧ್ಯೆ ಹೆಚ್ಚು ಆಪ್ತತೆ ಬೆಳೆಯಿತು.
ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಮದುವೆ ಆಗೋ ಹುಡುಗನ ಫೋಟೋ ವೈರಲ್
ಇಬ್ಬರ ಮಧ್ಯೆ ಆಗ ಬೆಳೆದ ಗಾಢ ಗೆಳೆತನ ಈಗ ವಿವಾಹದ ಹಂತಕ್ಕೆ ಬಂದು ನಿಂತಿದೆ. ಗುರು ಹಿರಿಯ ಸಮ್ಮುಖದಲ್ಲಿ ಆಗಸ್ಟ್ 28ರಂದು ಇವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅನುಶ್ರೀ ಅವರು ಈ ವಿಚಾರವನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ. ಶ್ರೀದೇವಿ ಹಾಗೂ ಯುವ ಅವರಿಗೆ ರೋಷನ್ ಆಪ್ತ ಸ್ನೇಹಿತ. ಅವರು ಅಪ್ಪು ಅಭಿಮಾನಿ ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Sat, 19 July 25